EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?
ನವದೆಹಲಿ, ಫೆಬ್ರವರಿ 25: ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಕುರಿತಂತೆ ಕಾರ್ಮಿಕ ಸಚಿವಾಲಯವು ಇತ್ತೀಚೆಗೆ(ಫೆ.20, 2020) ಮಹತ್ವದ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಪ್ರಕಾರ, ನಿವೃತ್ತಿಯ 15 ವರ್ಷಗಳ ನಂತರ ಸಂಪೂರ್ಣ ಪಿಂಚಣಿಯನ್ನು EPF ಯೋಜನೆಯಂತೆ ಹಿಂಪಡೆಯಲು ನಿರ್ಧರಿಸಿರುವ ಪಿಂಚಣಿದಾರರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಮುಂಗಡ ಪಿಂಚಣಿಯ ಸೌಲಭ್ಯ ಬಳಸುವ ಅಹಾಗೂ ನಿವೃತ್ತಿಯ ಸಮಯದಲ್ಲಿ ತಮ್ಮ ಪಿಂಚಣಿಯ ಸ್ವಲ್ಪ ಭಾಗವನ್ನು ಕಡಿಮೆ ಮಾಡಿದವರಿಗೆ ಮಾತ್ರ ಈ ಹೊಸ ನಿಯಮ ಅನ್ವಯವಾಗಲಿದೆ. 2008ರ ಸೆಪ್ಟೆಂಬರ್ 26ಕ್ಕೂ ಮುನ್ನ ನಿವೃತ್ತರಾದವರಿಗೆ ಲಾಭ ಸಿಗಲಿದೆ.
ಈ ಸೌಲಭ್ಯದಡಿ ಪಿಂಚಣಿಯ ಒಂದು ಭಾಗವನ್ನು ಪಿಂಚಣಿದಾರರಿಗೆ ಮುಂಚಿತವಾಗಿ ನೀಡಲಾಗುತ್ತದೆ. ನಂತರ ತಿಂಗಳ ಪಿಂಚಣಿಯ ಮೂರನೇ ಒಂದು ಭಾಗವನ್ನು ಮುಂದಿನ 15 ವರ್ಷಗಳವರೆಗೆ ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ ಪಿಂಚಣಿದಾರರು ಪೂರ್ಣ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಹಾಲಿ ನಿಯಮದಂತೆ ಇಪಿಎಸ್ -95 ಸದಸ್ಯರಿಗೆ ಪಿಂಚಣಿಯ ಮೂರನೇ ಒಂದು ಭಾಗವನ್ನು 10 ವರ್ಷಗಳವರೆಗೆ ಹಿಂಪಡೆಯಲು ಅವಕಾಶವಿತ್ತು. ಇದನ್ನು ಈಗ 15 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದರ ಲಾಭ 6.3 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ.

ಹಳೆ ಪಿಂಚಣಿ ಯೋಜನೆಯಂತೆ ಲಾಭ
ಜನವರಿ 1, 2004 ಹಾಗೂ ಅದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ನೇಮಕವಾಗಿರುವ ಅಥವಾ ಆ ದಿನಾಂಕದ ನಂತರ ಹುದ್ದೆಗೆ ಸೇರಿರುವ ನೌಕರರಿಗೆ ಹಳೆ ಪಿಂಚಣಿ ಯೋಜನೆ ಲಾಭ ಸಿಗಲಿದೆ. 01.01.2004 ನಂತರದ ಅಪಾಯಿಂಟ್ಮೆಂಟ್ ಲೆಟರ್ ಪಡೆದವರಿಗೂ ಲಾಭ ಸಿಗಲಿದೆ ಎಂದು ಮೋದಿ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

ಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?
ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ನಿಯಮ ಬದಲು
ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ತನ್ನ ನಿಯಮಗಳನ್ನು ಬದಲಾಯಿಸಿದ್ದು, ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಕೊಂಚ ನೆಮ್ಮದಿ ತಂದಿದೆ. ಒಂದು ತಿಂಗಳ ನಿರುದ್ಯೋಗದ ಬಳಿಕ ಬೇರೆ ಕಡೆ ಕೆಲಸ ಸಿಕ್ಕಲ್ಲಿ ಸದಸ್ಯರು ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ನೀಡಬಹುದಾಗಿದೆ. ಮಾಸಿಕ ಪಿಎಫ್ ಅದರಲ್ಲಿಯೇ ಜಮೆಯಾಗಲಿದೆ. ಸದ್ಯದ ನಿಯಮದಂತೆ ಎರಡು ತಿಂಗಳ ನಿರುದ್ಯೋಗದ ಬಳಿಕ ಮಾತ್ರ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿನ ಹಣ ಪಡೆಯಲು ಅವಕಾಶವಿದೆ

ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಿ
ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಉದ್ಯೋಗದಾತರ(ಎಂಪ್ಲಾಯರ್) ದೃಢೀಕರಣ ಪಡೆಯದೇ ವಂತಿಗೆದಾರರು( ಎಂಪ್ಲಾಯ್) ತಮ್ಮ ಪಿಂಚಣಿ ಮೊತ್ತವನ್ನು ನಿಗದಿಪಡಿಸಬಹುದಾಗಿದೆ. 1995ರ ಪಿಂಚಣಿ ಯೋಜನೆ ಪ್ರಕಾರ, ವಂತಿಗೆದಾರರು ಪಿಂಚಣಿ ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರ ದೃಢೀಕರಣ ಪಡೆದು ಸಲ್ಲಿಸಬೇಕಿತ್ತು. ಆದರೆ ಈಗ ಇದು ಮತ್ತಷ್ಟು ಸುಲಭವಾಗಲಿದೆ.












Click it and Unblock the Notifications