ಕೇರಳ ಮಾದರಿ ದೇಶದೆಲ್ಲೆಡೆ Fat ಟ್ಯಾಕ್ಸ್ ?

Posted By:
Subscribe to Oneindia Kannada

ನವದೆಹಲಿ ಜನವರಿ 16: ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದವುಗಳನ್ನು ಸರಬರಾಜು ಮಾಡುವ ರೆಸ್ಟೋರೆಂಟ್ ಗಳಿಗೆ ಕೊಬ್ಬು ದರ (fat tax) ಹಾಕಲು ಮೋದಿ ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಮುಂದಿನ ಬಜೆಟ್ ನಲ್ಲಿ ಹೊರಬೀಳಲಿದೆ. ಕೇಂದ್ರ ಆಂತರಿಕ ಕಾರ್ಯದರ್ಶಿಗಳ ಸಮಿತಿ ಹೀಗೊಂದು ಪ್ರಸ್ತಾವನೆಯನ್ನು ಮೋದಿ ಸರ್ಕಾರದ ಮುಂದಿಟ್ಟಿದೆ.

ಈ ಮುಂಚೆ ದೇಶದಲ್ಲೇ ಮೊದಲ ಬಾರಿಗೆ ಫ್ಯಾಟ್ ಟ್ಯಾಕ್ಸ್ ಹಾಕುವ ನಿರ್ಧಾರವನ್ನು ಕೈಗೊಂಡ ಮೊದಲ ರಾಜ್ಯ ಕೇರಳ. ಕೇರಳದ ಎಲ್‌ಡಿಎಫ್ ಸರ್ಕಾರ ಶೇ 14.5ರಷ್ಟು fat tax ಜಾರಿಗೆ ತರುವ ಘೋಷಣೆ ಮಾಡಿತ್ತು. ಈ ತೆರಿಗೆಯಿಂದಾಗಿ ವಾರ್ಷಿಕ 10 ಕೋಟಿ ರೂ.ಗಳ ಆದಾಯವನ್ನು ಸರ್ಕಾರ ನಿರೀಕ್ಷಿಸಲಾಗಿತ್ತು. ಇದೆ ಮಾದರಿಯಲ್ಲಿ ದೇಶದೆಲ್ಲೆಡೆ ತೆರಿಗೆ ವಿಧಿಸಿ, ಅದರಿಂದ ಬರುವ ಆದಾಯವನ್ನು ಆರೋಗ್ಯ ಸಚಿವಾಲಯ ತನ್ನ ಯೋಜನೆಗಳಿಗೆ ಬಳಸಿಕೊಳ್ಳಲಿದೆ.

Modi Govt mulls additional fat tax on Junk food

ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದವುಗಳನ್ನು ಸರಬರಾಜು ಮಾಡುವ ರೆಸ್ಟೋರೆಂಟ್‌ಗಳಿಗೆ ಈ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಮ್ಯಾಕ್‌ ಡೊನಾಲ್ಡ್‌ ನಂತಹ ಕಂಪನಿಗಳಿಗೆ ಹೊರೆ ಬೀಳಲಿದ್ದು, ಅದನ್ನು ಕಂಪನಿಗಳು ಜನರ ಮೇಲೆ ಹೇರುವ ಸಾಧ್ಯತೆಯೂ ಇದೆ.

ಇದಲ್ಲದೆ ಇಂಥ ಕಂಪನಿಗಳ ಜಾಹೀರಾತುಗಳ ಮೇಲೆ ಕೂಡಾ ಹೆಚ್ಚಿನ ಹೊರೆ ಬೀಳಲಿದೆ. FSSAI (Food Safety and Standards Authority of India) ಈಗಾಗಲೇ ಕುರುಕಲು ತಿಂಡಿಪೋತರ ಮೇಲೆ ನಿಗಾವಹಿಸಿದೆ.

ಚಾಟ್ ಗಳನ್ನು ಅತಿಯಾಗಿ ತಿನ್ನುತ್ತಿರುವುದರಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ, ಹೃದಯಬೇನೆ, ಕ್ಯಾನ್ಸರ್ ಮುಂತಾದ ರೋಗಗಳಿಗೆ ತಿಂಡಿಪೋತರು ಗುರಿಯಾಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Modi government is mulling an additional fat tax on sugary beverages and packaged food high on salt and saturated fats. Kerala government was first to impose a 14.5 per cent 'fat tax' on burgers, pizzas, tacos, sandwiches, doughnuts and pasta served in restaurants.
Please Wait while comments are loading...