ಮಿಸ್ಡ್ ಕಾಲ್ ನೀಡಿ, ಮೋದಿ ಮೆಸೇಜ್ ಪಡೆಯಿರಿ
ನವದೆಹಲಿ, ಮಾ. 25: ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಸರ್ಕಾರದ ಯೋಜನೆಗಳ, ಘಟನಾವಳಿಗಳ, ರಾಜಕೀಯ ನಾಯಕರ, ಸಚಿವರ ಮತ್ತು ವಿವಿಧ ಇಲಾಖೆಗಳ ನಡವಳಿಕೆಗಳನ್ನು ಪಡೆದುಕೊಳ್ಳಬಹುದು.
ಹೌದು... ಡಿಜಿಟಲ್ ಇಂಡಿಯಾ ಕಲ್ಪನೆಗೆ ಮತ್ತೊಂದು ರೂಪ ನೀಡಲಾಗಿದ್ದು ಟ್ವಿಟ್ಟರ್ ಸಂವಾದ ಎಂಬ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಏಳು ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಟ್ವೀಟ್‌ಗಳನ್ನು ಮೊಬೈಲ್ ಮೂಲಕ ಜನತೆಗೆ ನೇರವಾಗಿ ತಲುಪಿಸುವ ತಲುಪಿಸುವ ವ್ಯವಸ್ಥೆಯೇ ಟ್ವಿಟರ್ ಸಂವಾದ.[ರೈಲ್ವೆ ಮಾಹಿತಿ ಅಂಗೈನಲ್ಲಿ ಲಭ್ಯ]

ಕರ್ನಾಟಕ, ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮುಖ್ಯಮಂತ್ರಿಗಳು ಈ ಸೇವೆಯ ವ್ಯಾಪ್ತಿಗೆ ಸೇರಿಕೊಂಡಿದ್ದಾರೆ. ಅಲ್ಲದೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬೆಂಗಳೂರು ನಗರ ಪೊಲೀಸ್ ಸಹ ಈ ಟ್ವಿಟರ್ ಸೇವಾ ಜಾಲಕ್ಕೆ ಸೇರಿಕೊಂಡಿರುವ ಪ್ರಮುಖ ಇಲಾಖೆಗಳ ಪಟ್ಟಿಯಲ್ಲಿವೆ. [ರೈತರ ಮನೆ ಬಾಗಿಲಿಗೆ ಸೇವೆ ನೀಡುವ ವೆಬ್ ಸೈಟ್]
ಮಿಸ್ಡ್ ಕಾಲ್ ನೀಡಿ, ಮಾಹಿತಿ ಪಡೆಯಿರಿ
011 3006 3006 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ, ನನ್ನ ಟ್ವೀಟ್ಸ್‌ಗಳನ್ನು ಎಸ್‌ಎಂಎಸ್ ಮೂಲಕ ಪಡೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ವ್ಯವಸ್ಥೆ ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿಗೆ ಪೂರಕವಾಗಲಿದೆ. ಜನರನ್ನು ಚಿಂತನೆಗೆ ದೂಡುವುದರಿಂದ ಅಭಿಪ್ರಾಯಗಳ ಆಧಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸಬಹುದು. ರಾಜಕೀಯ ನಾಯಕರು ಮತ್ತು ಸರ್ಕಾರಿ ಸಂಸ್ಥೆಗಳು ಸುಲಭವಾಗಿ ಸಾರ್ವಜನಿಕರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ ಎಂದು ಭಾರತ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆ ನಿರ್ದೇಶಕ ರಿಶಿ ಜೇಟ್ಲಿ ಮಾಹಿತಿ ನೀಡಿದ್ದಾರೆ.
ನೀವು ಮೊಬೈಲ್ ಹೊಂದಿದ್ದರೆ ಸಾಕು. ಇಂಟರ್ ನೆಟ್ ಅಥವಾ ಡೇಟಾ ಪ್ಲಾನ್ ಇಲ್ಲದಿದ್ದವರೂ ನಿರ್ದಿಷ್ಟ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಟ್ವಿಟರ್ ಜಾಲಕ್ಕೆ ನೋಂದಣಿ ಮಾಡಿಕೊಂಡು ಈ ಸೇವೆ ಪಡೆದುಕೊಳ್ಳಬಹುದು. ತುರ್ತು ಸಂದರ್ಭದಲ್ಲಿಯೂ ಜನತೆಗೆ ಮುನ್ನೆಚ್ಚರಿಕೆ ನೀಡಲು ಈ ಸೇವೆಯನ್ನು ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ.
Lets deepen our connect! Give a missed call on 011 3006 3006 & get my Tweets on your mobile as SMS.
— Narendra Modi (@narendramodi) March 24, 2015 ಮಾಹಿತಿ ಪಡೆಯುವ ವಿಧಾನ ಹೇಗೆ?
ಪ್ರಧಾನಮಂತ್ರಿ ವೈಯಕ್ತಿಕ ಖಾತೆ-@NarendraModi, ದೂ.ಸಂ-011 3006 3006
ಪ್ರಧಾನಮಂತ್ರಿ ಕಚೇರಿ ಖಾತೆ-@PMOIndia , ದೂ.ಸಂ-011 3006 3007
ರಕ್ಷಣಾ ಸಚಿವಾಲಯ-@adgpi, ದೂ.ಸಂ. 011 3049 6116
ರೈಲ್ವೇ ಸಚಿವಾಲಯದ-@RailMinIndia, ದೂ.ಸಂ.011 3049 6222
ಕರ್ನಾಟಕ ಮುಖ್ಯಮಂತ್ರಿ ಕಚೇರಿ ಖಾತೆ-@CMofKarnataka, ದೂ.ಸಂ-011 3049 4737
ಬೆಂಗಳೂರು ನಗರ ಪೋಲೀಸ್ ಆಯುಕ್ತ-@CPBLR, ದೂ.ಸಂ-011 3049 5141
ಬೆಂಗಳೂರು ನಗರ ಪೋಲೀಸರ ಕಚೇರಿ ಖಾತೆ -@BlrCityPolice , ದೂ.ಸಂ-011 3049 5242
ಬೆಂಗಳೂರು ನಗರ ಸಂಚಾರಿ ಪೋಲೀಸರ ಕಚೇರಿ ಖಾತೆ- @blrcitytraffic, ದೂ.ಸಂ- 011 3049 5464
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications