ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಗಳಿಂದ ಪೇಮೆಂಟ್ ಬ್ಯಾಂಕ್ ಸ್ಥಾಪನೆ

By Mahesh
|
Google Oneindia Kannada News

ನವದೆಹಲಿ, ಜೂನ್ 02: ಭಾರತೀಯ ಅಂಚೆ ಕಚೇರಿಯಿಂದ ಪೇಮೆಂಟ್ ಬ್ಯಾಂಕ್​ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ 800 ಕೋಟಿ ರು ಮೂಲನಿಧಿಯನ್ನು ನೀಡಲಾಗಿದ್ದು, ಸುಮಾರು 650ಕ್ಕೂ ಅಧಿಕ ಬ್ರ್ಯಾಂಚ್ ಗಳನ್ನು ಮೊದಲ ಹಂತದಲ್ಲಿ ಕಾಣಬಹುದಾಗಿದೆ.[ಅಂಚೆ ಕಚೇರಿಗಳಲ್ಲಿ ತಿಮ್ಮಪ್ಪನ ದರ್ಶನದ ಟಿಕೆಟ್ ಸಿಗುತ್ತೆ]

ಈ ಬಗ್ಗೆ ವಿವರಣೆ ನೀಡಿದ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ 2017 ಸೆಪ್ಟೆಂಬರ್ ವೇಳೆಗೆ ದೇಶಾದ್ಯಂತ 650 ಸ್ಥಳಗಳಲ್ಲಿ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದರು.[ಇಮೇಲ್ ಕಾಲದಲ್ಲೂ ಇನ್ ಲ್ಯಾಂಡ್ ಲೆಟರ್ ಗೆ ಬೇಡಿಕೆ ಇದೆ!]

Modi Cabinet clears India Post's payments bank proposal

ದೇಶದಲ್ಲಿ 1.54 ಲಕ್ಷ ಅಂಚೆ ಕಚೇರಿಗಳಿದ್ದು, ಇವುಗಳಲ್ಲಿ 1.39 ಲಕ್ಷ ಕಚೇರಿ ಗ್ರಾಮೀಣ ಪ್ರದೇಶದಲ್ಲಿವೆ. ಮೊದಲ ಹಂತದಲ್ಲಿ 650 ಅಂಚೆ ಕಚೇರಿಗಳಲ್ಲಿ ಪೇಮೆಂಟ್ ಬ್ಯಾಂಕ್ ಆರಂಭಿಸಲಾಗುವುದು. ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳ ಜತೆ ಪೇಮೆಂಟ್ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. [ಅಂಚೆ ಇಲಾಖೆಯಿಂದ ಮೂರು ಹೊಸ ಸೇವೆ]

ಅಂಚೆ ಸಿಬ್ಬಂದಿಗೆ ಸ್ಮಾರ್ಟ್​ಫೋನ್, ಐಪ್ಯಾಡ್​ಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಪೇಮೆಂಟ್ ಬ್ಯಾಂಕ್​ಗಳಿಗೆ ಸಿಇಒಗಳನ್ನು ನೇಮಿಸಲಾಗುವುದು. ಅಂಚೆ ಇಲಾಖೆ, ವೆಚ್ಚ ನಿರ್ವಹಣೆ ಸೇರಿ ಹಲವು ವಿಭಾಗದ ಅಧಿಕಾರಿಗಳು ಪೇಮೆಂಟ್ ಬ್ಯಾಂಕ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.[ಅಂಚೆ ಕಚೇರಿಯಲ್ಲಿಯೂ ಶೀಘ್ರದಲ್ಲೇ ಎಟಿಎಂ ಸೌಲಭ್ಯ]

ಸರ್ಕಾರಿ ಸ್ವಾಮ್ಯ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1,666 ಕೋರ್ ಬ್ಯಾಂಕಿಂಗ್ ಬ್ರ್ಯಾಂಚ್ ಹೊಂದಿದ್ದರೆ,22,137 ಅಂಚೆಕಚೇರಿಗಳು ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿವೆ.(ಪಿಟಿಐ)

English summary
Narendra Modi led NDA Government cleared proposal to set up India Post payments bank with a corpus of Rs. 800 crore and has plans to have 650 branches operational by September 2017, Telecom Minister Ravi Shankar Prasad said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X