ಮೋದಿಯಿಂದ ಬರ್ಥಡೇ ವಿಶ್ ಪಡೆದ ರಾಜ್ಯದ 'ಬೆಳಕು': ಯಾರೀ ಪುಟ್ಟ ಹುಡುಗಿ?

ನವದೆಹಲಿ, ಅಕ್ಟೋಬರ್ 3: 'ನನ್ನ ಆಶೀರ್ವಾದಗಳನ್ನು ಪುಟ್ಟ 'ಬೆಳಕು'ಗೆ ತಿಳಿಸಿ. ಆಕೆಯ ಸಂತೋಷ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಟ್ವೀಟ್‌ ಒಂದನ್ನು ಹಂಚಿಕೊಂಡು ನೀಡಿದ್ದ ಶುಭಾಶಯದ ಟ್ವೀಟ್ ತೀವ್ರ ಚರ್ಚೆಗೆ ಒಳಗಾಗಿದೆ.

'ಹ್ಯಾಪಿ ಬರ್ಥಡೇ ಬೆಳಕು' ಎಂದು ಬರೆದಿರುವ ಕೇಕ್‌ನಲ್ಲಿ ಮೋದಿ ಅವರ ಚಿತ್ರವಿದೆ. ತನ್ನ ಹುಟ್ಟುಹಬ್ಬದ ಕೇಕ್ ಮೇಲೆ ಮೋದಿ ಅವರ ಚಿತ್ರ ಇರಬೇಕು ಎಂಬ ಮಗಳ ಬಯಕೆಯನ್ನು ಈಡೇರಿಸಿದ್ದಾಗಿ ಆಕೆಯ ತಂದೆ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದರು. ಈ ಟ್ವೀಟ್ ಮೋದಿ ಅವರ ಗಮನವನ್ನೂ ಸೆಳೆದಿತ್ತು.

ಅಂದಹಾಗೆ ಈ 'ಬೆಳಕು' ಬಾಲೆ ಕನ್ನಡದವಳು. ಈಕೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಆರೋಪದಲ್ಲಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದ 'ಪೋಸ್ಟ್ ಕಾರ್ಡ್ ನ್ಯೂಸ್' ವೆಬ್‌ಸೈಟ್ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರ ಮಗಳು.

'ಇಂದು ನನ್ನ ಮಗಳ ಜನ್ಮದಿನ. ನಿನಗೆ ಹುಟ್ಟುಹಬ್ಬದಂದು ಏನು ಬೇಕು? ಎಂದು ಅವಳನ್ನು ಕೇಳಿದೆ. ನನ್ನ ಬರ್ಥಡೇ ಕೇಕ್ ಮೇಲೆ ಮೋದಿಜಿ ಅವರ ಫೋಟೊ ಬೇಕು ಎಂದಳು. ನಿಜ. ಮೋದಿ ಅವರೊಬ್ಬ ಕಳ್ಳ. ಅವರು ಚಿಕ್ಕ ಮಕ್ಕಳ ಹೃದಯವನ್ನೂ ಕದ್ದಿರುವ ಕಳ್ಳ' ಎಂದು ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಮಾಡಿದ್ದರು.

modi birthday wishes to belaku postcard news founder daughter

ರಫೇಲ್ ಯುದ್ಧ ವಿಮಾನ ಖರೀದಿ ವಿವಾದದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರನ್ನು ಕಳ್ಳ ಎಂದು ದೂಷಿಸಿದ್ದರು. ಇದನ್ನು ವಿಕ್ರಮ್ ಹೆಗ್ಡೆ, ಮಕ್ಕಳ ಹೃದಯ ಕದ್ದ ಕಳ್ಳ ಎಂದು ವ್ಯಾಖ್ಯಾನಿಸಿದ್ದಾರೆ.

ಮೋದಿ ಟ್ವೀಟ್‌ಗೆ ಅನೇಕ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೋದಿ ಅವರನ್ನು ಅನೇಕರು ಶ್ಲಾಘಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುವವರಿಗೆ ಸುಳ್ಳಿನ ಸರದಾರನ ಬೆಂಬಲ ಎಂದು ಮೋದಿ ವಿರೋಧಿಗಳು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+