ಮಿಜೋರಾಂ ವಿಧಾನಸಭೆ ಯಾರ ತೆಕ್ಕೆಗೆ? ಬಿಜೆಪಿ & ಕಾಂಗ್ರೆಸ್ ಬಲ ಎಷ್ಟು?
ಹಸಿರು ಹಾಸು ಹೊದ್ದು ಮ್ಯಾನ್ಮಾರ್ ಗಡಿಯಲ್ಲಿ ಹರಡಿರುವ ಈಶಾನ್ಯ ಭಾರತದ ಪುಟಾಣಿ ರಾಜ್ಯ ಮಿಜೋರಾಂ ವಿಧಾನಸಭೆ ಎಲೆಕ್ಷನ್‌ಗೆ ಕ್ಷಣಗಣನೆ ಶುರುವಾಗಿದೆ. ನಾಡಿದ್ದು ಅಂದರೆ ನವೆಂಬರ್ 7 ರಂದು, ಮಿಜೋರಾಂ ವಿಧಾನಸಭೆಗೆ ಮತದಾನ ನಡೆಯಲಿದೆ. ಆದರೆ ಇದೇ ಸಮಯದಲ್ಲಿ ಚುನಾವಣೆ ಸಮೀಕ್ಷೆ ವರದಿ ಹೊರಬಿದ್ದು ಭಾರಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ ಮಿಜೋರಾಂ ವಿಧಾನಸಭೆ ಯಾರ ತೆಕ್ಕೆಗೆ? ಬಿಜೆಪಿ & ಕಾಂಗ್ರೆಸ್ ಬಲ ಎಷ್ಟಿದೆ?
ಮೊದಲೇ ಹೇಳಿದಂತೆ ಮಿಜೋರಾಂ ವಿಧಾನಸಭೆ ತುಂಬಾ ಚಿಕ್ಕದು. ಇಲ್ಲಿ 40 ವಿಧಾನಸಭೆ ಸ್ಥಾನಗಳು ಇವೆ. ಹೀಗೆ 40 ವಿಧಾನಸಭೆ ಕ್ಷೇತ್ರಗಳ ಪೈಕಿ ಎಲ್ಲಾ ಸ್ಥಾನಗಳಿಗೆ ಮಂಗಳವಾರ, ಅಂದ್ರೆ ನವೆಂಬರ್ 7 ರಂದು ಎಲೆಕ್ಷನ್ ನಡೆಯಲಿದೆ. ಇದೀಗ ಮಿಜೋರಾಂ ವಿಧಾನಸಭೆಯ ಬಗ್ಗೆ, ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಹಾಗಾದರೆ, ಯಾವ ಯಾವ ಪಕ್ಷಕ್ಕೆ ಈ ರಾಜ್ಯದಲ್ಲಿ ಎಷ್ಟು ಸ್ಥಾನ ಸಿಗಲಿದೆ? ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಫೈಟ್ ಇದೆಯಾ? ಅಥವಾ ಮಿಜೋರಾಂ ವಿಧಾನಸಭೆಯಲ್ಲಿ ಈ ಬಾರಿ ಕೂಡ ಸ್ಥಳೀಯ ಪಕ್ಷಗಳೇ ಅಧಿಕಾರಕ್ಕೆ ಬರಲಿವೆಯಾ? ಬನ್ನಿ ತಿಳಿಯೋಣ.

ಮಿಜೋರಾಂ ಗೆಲುವಿನ ಬಲ ಯಾರಿಗೆ?
ಅಂದಹಾಗೆ ಮಿಜೋರಾಂ ರಾಜ್ಯ ರಾಜಕಾರಣದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) & ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಸ್ಥಳೀಯ ಪ್ರಬಲ ಪಕ್ಷಗಳು. ಪ್ರತಿ ಬಾರಿ ಎಲೆಕ್ಷನ್ ನಡೆದಾಗ ಎರಡು ಪಕ್ಷಗಳು ತಮ್ಮ ತಾಕತ್ ತೋರಿಸುತ್ತವೆ. ಈ ಬಾರಿ ಕೂಡ ಮಿಜೋರಾಂ ರಾಜಕಾರಣದಲ್ಲಿ ಸ್ಥಳೀಯ ಪಕ್ಷಗಳದ್ದೇ ಆರ್ಭಟ ಮುಂದುವರಿಯುವ ಮುನ್ಸೂಚನೆಯನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ನೀಡುತ್ತಿವೆ. 'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆಯ ವರದಿ ಇದೀಗ ಕುತೂಹಲ ಕೆರಳಿಸಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಯಾರಿಗೆ ಎಷ್ಟು ಸ್ಥಾನ ಸಿಗಲಿದೆ?
'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆಯ ಮಾಹಿತಿ ಪ್ರಕಾರ, ಮಿಜೋರಾಂ ರಾಜ್ಯದಲ್ಲಿ ಈ ಎಲೆಕ್ಷನ್‌ನಲ್ಲಿ ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಜೋರಾಂ ಪೀಪಲ್ಸ್ ಮೂವ್ಮೆಂಟ್ ಪಕ್ಷ 13 ರಿಂದ 15 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹಾಗೇ ಮಿಜೋ ನ್ಯಾಷನಲ್ ಫ್ರಂಟ್ (MNF) 12ರಿಂದ 14 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಇದು ಹೊರತುಪಡಿಸಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಿಜೋರಾಂ ಚುನಾವಣೆ ಅಖಾಡದಲ್ಲಿ 08ರಿಂದ 10 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಆದರೆ ಬಿಜೆಪಿ 00ರಿಂದ 01 ಸ್ಥಾನ ಮತ್ತು ಇತರರು 00 ರಿಂದ 02 ಸ್ಥಾನ ಗೆಲ್ಲುತ್ತಾರೆ ಅಂತಿದೆ ಈಗ ಹೊರಬಿದ್ದಿರುವ 'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆಯ ವರದಿ.
ಸಮೀಕ್ಷೆಗಳ ಮಾತು ನಿಜವಾಗುತ್ತಾ?
ಒಟ್ನಲ್ಲಿ ಇತರ ರಾಜ್ಯಗಳ ರೀತಿಯೇ ಮಿಜೋರಾಂ ರಾಜ್ಯದ ಚುನಾವಣೆ ಕೂಡ ಕುತೂಹಲ ಕೆರಳಿಸಿದೆ. ಹೀಗಾಗಿ ಈಶಾನ್ಯ ಭಾರತದ ಮತ್ತೊಂದು ರಾಜ್ಯದಲ್ಲಿ ಕಮಲ ಅರಳಿಸಲು BJP ಕೂಡ ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಇಲ್ಲಿ, ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರೂ ಮಿಜೋರಾಂ ಜನರು ಮಾತ್ರ ಸ್ಥಳೀಯ ಪಕ್ಷಕ್ಕೆ ತಮ್ಮ ಬೆಂಬಲ ನೀಡುತ್ತಿದ್ದಾರೆ. ಚುನಾವಣಾ ಸಮೀಕ್ಷೆಗಳು ಈ ಮಾತನ್ನ ಹೇಳುತ್ತಿವೆ. ಈ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳಾದ, ಬಿಜೆಪಿ & ಕಾಂಗ್ರೆಸ್ ಏನೆಲ್ಲಾ ತಂತ್ರ ಮಾಡುತ್ತವೆ ಅಂತಾ ಕಾದು ನೋಡಬೇಕಿದೆ.

ಅಂದಹಾಗೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ & ಮಿಜೋರಾಂ ರಾಜ್ಯಕ್ಕೆ ಈಗ ಚುನಾವಣೆ ನಡೆಯಲಿದೆ. 4 ರಾಜ್ಯಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಛತ್ತೀಸ್‌ಗಢದಲ್ಲಿ ಮಾತ್ರ 2 ಹಂತದ ಮತನಾದನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ, ಮಿಜೋರಾಂ ರಾಜ್ಯದಲ್ಲಿ ಒಂದೇ ಹಂತದಲ್ಲಿ ಅಂದ್ರೆ ನ. 7 ಕ್ಕೆ ಮತದಾನ ಮುಗಿಯಲಿದೆ. ಈ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3 ರಂದು ಹೊರಬೀಳಲಿದೆ.












Click it and Unblock the Notifications