ಮಿಜೋರಾಂನಲ್ಲಿ ಮುಖ್ಯಮಂತ್ರಿಗೆ ಒಂದು ಕ್ಷೇತ್ರದಲ್ಲಿ ಸೋಲು!

ನವದೆಹಲಿ, ಡಿಸೆಂಬರ್ 11 : ಮಿಜೋರಾಂನ ಮುಖ್ಯಮಂತ್ರಿ ಲಾಲ್ ಥಾನಾವಾಲ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಎರಡು ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಚಂಫೈ ದಕ್ಷಿಣ ಕ್ಷೇತ್ರದಲ್ಲಿ ಸೋತಿದ್ದಾರೆ.

40 ಸ್ಥಾನಗಳನ್ನು ಹೊಂದಿರುವ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಎಂಎನ್‌ಎಫ್ 28, ಕಾಂಗ್ರೆಸ್‌ 7 ಮತ್ತು ಇತರ ಅಭ್ಯರ್ಥಿಗಳು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

Mizoram CM Lal Thanhawla lost election in Champhai South seat

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಿಜೋರಾಂ ಮುಖ್ಯಮಂತ್ರಿ ಲಾಲ್ ಥಾನಾವಾಲ ಅವರು ಚಂಫೈ ದಕ್ಷಿಣ ಮತ್ತು ಸರ್ಚಿಪ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚಂಫೈ ದಕ್ಷಿಣ ಕ್ಷೇತ್ರದಲ್ಲಿ ಅವರು ಸೋಲು ಕಂಡಿದ್ದಾರೆ.

ಲಾಲ್ ಥಾನಾವಾಲ ಅವರು ಐದು ಬಾರಿ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಕಾಣುವ ಮೂಲಕ ಕಾಂಗ್ರೆಸ್ ಈಶಾನ್ಯ ರಾಜ್ಯಗಳ ಕೊನೆ ಕೊಂಡಿಯನ್ನು ಕಡಿದುಕೊಂಡಿದೆ.

ವಿಜೋ ನ್ಯಾಷನಪ್ ಫ್ರಂಟ್ (ಎಂಎನ್‌ಎಫ್) ಈ ಬಾರಿ ಕಾಂಗ್ರೆಸ್‌ ಗೆಲುವಿನ ನಿರೀಕ್ಷೆಯನ್ನು ಹುಸಿ ಮಾಡಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 21 ಸ್ಥಾನಗಳು ಬಹುಮತಕ್ಕೆ ಅಗತ್ಯವಾಗಿದೆ. ಬಿಜೆಪಿ ಅಧಿಕಾರದಿಂದ ದೂರವಿರುವ ಈಶಾನ್ಯ ಭಾರತದ ಏಕೈಕ ರಾಜ್ಯ ಮಿಜೋರಾಂ ಆಗಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ 34, ಎಂಎನ್‌ಎಫ್ 5 ಮತ್ತು ಇತರರು 1 ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆದರೆ, ಈ ಬಾರಿ ಪುನಃ ಅಧಿಕಾರ ಪಡೆಯುವ ಕಾಂಗ್ರೆಸ್ ಕನಸು ನನಸಾಗಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+