'ಪಪ್ಪಾ, ಮೋದಿಗೆ ಹೇಳಿ ರಜೆ ತಗೋ' ಕೇಂದ್ರ ಸಚಿವರ ಮಗಳ ಮುದ್ದಾದ ಮನವಿ
ನವದೆಹಲಿ, ಅಕ್ಟೋಬರ್ 01: ರಾಜಕಾರಣಿಗಳಿಗೆ ಕುಟುಂಬದೊಟ್ಟಿಗೆ ಕಾಲ ಕಳೆಯಲು ಸಿಗುವ ಸಮಯ ಅತ್ಯಲ್ಪ ಅದರಲ್ಲೂ ಕೇಂದ್ರ ಸರ್ಕಾರದ ಸಚಿವರಾಗಿದ್ದರಂತೂ ಮುಗಿದೇ ಹೋಯಿತು ಕತೆ.
ಕೇಂದ್ರದ ರಾಜ್ಯ ಖಾತೆ ಸಚಿವರಾಗಿರುವ ಕಿರಣ್ ರಿಜುಜು ಅವರಿಗೂ ಇದೇ ಸಮಸ್ಯೆ, ಅತಿಯಾದ ಕೆಲಸದಿಂದಾಗಿ ತಮ್ಮ ಮಗಳ ಜೊತೆ ಸಮಯ ಕಳೆಯಲು ಸಹ ಸಮಯ ಸಿಕ್ಕಿರಲಿಲ್ಲ. ಆಕೆಯ ಶಾಲೆಗೆ ಹೋಗಿ ಮಗಳ ಕಾರ್ಯಕ್ರಮದಲ್ಲಿ ಭಾಗವಹಿಸಲೂ ಅವಕಾಶ ಸಿಕ್ಕಿರಲಿಲ್ಲ.
This is how my little daughter convinced me to attend her school's "Grandparents Day" for the first time. pic.twitter.com/ZaIt3y658D
— Kiren Rijiju (@KirenRijiju) September 30, 2018
ಆದರೆ ಮಗಳು ಬಿಡಬೇಕಲ್ಲ, ತನ್ನ ಮುದ್ದಾದ ಮಾತಿನಿಂದ ಅಪ್ಪನನ್ನು ಒಪ್ಪಿಸಿ ತನ್ನ ಶಾಲೆಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಪ್ಪ ಕಿರಣ್ ರಿಜುಜು ಅವರನ್ನು ತನ್ನ ಶಾಲೆಯ ಕಾರ್ಯಕ್ರಮಕ್ಕೆ ಕರೆಯುವ ಮಗಳ ಮುದ್ದಾದ ಮಾತುಗಳು, ಪ್ರಧಾನಿ ಮೋದಿ ಅವರನ್ನು ಬಾಸ್ ಎಂದು ಕರೆಯುವ ಆಕೆಯ ಮುಗ್ದತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಪಪ್ಪಾ, ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಇದೆ, ನೀನು ಯಾವಾಗಲೂ ನನ್ನ ಶಾಲೆಗೆ ಬರುವುದಿಲ್ಲ, ನಾಳೆ ಕಾರ್ಯಕ್ರಮಕ್ಕೆ ಬಾ, ನಿಮ್ಮ ಬಾಸ್‌ಗೆ ಹೇಳಿ ರಜೆ ತಗೋ' ಮುದ್ದು ಮುದ್ದಾಗಿ ಅಪ್ಪ ಕಿರಣ್ ರಿಜುಜುವನ್ನು ಕೇಳುತ್ತಿರುವ ನಾತಿ ರಿಜುಜು ಮುದ್ದಾದ ಮಾತುಗಳು ಎಂತಹವರನ್ನೂ ಕರಗಿಸುವಂತಿವೆ.
ಮಗಳ ಮುದ್ದು ಮಾತಿಗೆ ಕರಗಿರುವ ಸಚಿವ ಕಿರಣ್ ರಿಜುಜು ಅವರು, ಮಗಳ ಶಾಲೆಯಲ್ಲಿ ಆಯೋಜಿಸಿದ್ದ 'ಗ್ರಾಂಡ್‌ಪೇರೆಂಟ್ಸ್ ಡೇ'ಗೆ ಹೋಗಿ ಮಗಳ ಜೊತೆ ಕಾಲಕಳೆದಿದ್ದಾರೆ. ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿರುವ ಕಿರಣ್ ರಿಜುಜುಗೆ ಬಾಸ್ ಆಗಿರುವ ಮೋದಿ, ಮಗಳ ಜೊತೆ ಕಾಲ ಕಳೆಯಲೆಂದು ಕಿರಣ್‌ಗೆ ರಜೆ ದಯಪಾಲಿಸಿದ್ದಾರೆ.












Click it and Unblock the Notifications