• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಹದಿ ತಪ್ಪೊಪ್ಪಿಗೆ : ಪೊಲೀಸ್ ಆಯುಕ್ತರು ನೀಡಿದ ವಿವರ

By Kiran B Hegde
|

ಬೆಂಗಳೂರು, ಡಿ. 13: ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ತಾನು @shamwitness ಹೆಸರಿನ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆತನ ಕುರಿತು ನೀಡಿರುವ ಸಂಪೂರ್ಣ ವಿವರ ಇಲ್ಲಿದೆ... [ಟ್ವಿಟ್ಟರ್ ಉಗ್ರನ ರಹಸ್ಯ ಬಯಲು]

  • ಮೆಹದಿ ಸೆಕ್ಷನ್ 125 (ಭಾರತ ಸರ್ಕಾರದೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಏಷ್ಯಾ ದೇಶದ ವಿರುದ್ಧ ಯುದ್ಧ ಘೋಷಣೆ ಮಾಡಿದ ಅಪರಾಧ), ಕಾನೂನು ಬಾಹಿರ ಚಟುವಟಿಕೆ ಹಾಗೂ ಸೆಕ್ಷನ್ 66 ಅಡಿ ಪ್ರಕರಣ ದಾಖಲಿಸಲಾಗಿದೆ.
  • ಆತ West Bengal Institute of Technology ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ Manufacturing Executive ಆಗಿ ಕಾರ್ಯನಿರ್ವಹಿಸುತ್ತಿದ್ದ. ವಾರ್ಷಿಕ ಸುಮಾರು 5.3 ಲಕ್ಷ ರೂ. ವೇತನವಿತ್ತು.
  • ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಾಡಿಗೆಗಿದ್ದ.
  • ಮೆಹದಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಇಬ್ಬರು ಸಹೋದರಿಯರು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದಾರೆ. ತಂದೆ ಪ.ಬಂಗಾಳ ರಾಜ್ಯದ ವಿದ್ಯುತ್ ಮಂಡಳಿಯ ನಿವೃತ್ತ ಉದ್ಯೋಗಿ. [ಮತಾಂತರ ಏಕೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ?]
  • ಕೆಲವು ವರ್ಷಗಳಿಂದ @shamwitness ಹೆಸರಿನ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ. ಟರ್ಕಿ, ಸಿರಿಯಾ, ಲೆಬನಾನ್, ಇಸ್ರೇಲ್, ಗಾಜಾ ಪಟ್ಟಿ, ಈಜಿಪ್ತ್ ಮತ್ತು ಲಿಬಿಯಾ ದೇಶಗಳ ಕುರಿತು 2003ರಿಂದ ಆಸಕ್ತಿ ಹೊಂದಿದ್ದ.
  • ಬೆಳಗ್ಗೆಯಿಂದ ಸಂಜೆಯವರೆಗೆ ಕಂಪನಿಯಲ್ಲಿ ದುಡಿಯುತ್ತಿದ್ದ. ರಾತ್ರಿ ಇಂಟರ್ನೆಟ್‌ನಲ್ಲಿ ಕಾರ್ಯನಿರತನಾಗುತ್ತಿದ್ದ. ಆತ 60 ಜಿಬಿ ಬಳಕೆಯ ತಿಂಗಳ ಇಂಟರ್ನೆಟ್ ಸಂಪರ್ಕ ಪಡೆದಿದ್ದ. ISIS ಮತ್ತು ISIL ವೆಬ್‌ಸೈಟ್‌ನಲ್ಲಿ ಬರುತ್ತಿದ್ದ ಎಲ್ಲ ಬ್ರೇಕಿಂಗ್ ನ್ಯೂಸ್ ಓದುತ್ತಿದ್ದ. ಆತನಿಗೆ 17,000 ಕ್ಕಿಂತ ಹೆಚ್ಚಿನ ಫಾಲೋವರ್ಸ್ ಇದ್ದರು.
  • ಮೆಹದಿ ಹೆಚ್ಚಾಗಿ ಇಂಗ್ಲಿಷ್ ಮಾತನಾಡಬಲ್ಲ ಐಎಸ್ಐಎಸ್ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ. ISIS ಮತ್ತು ISIL ಸೇರಬಯಸುವವರ ಮಾಹಿತಿ ಒದಗಿಸುವ ಮೂಲವಾಗಿ ಪರಿಣಮಿಸಿದ. [ಒಂದು ಕೈಯಲ್ಲಿ ಎಕೆ47, ಇನ್ನೊಂದು ಕೈಯಲ್ಲಿ ಮಗು]
  • ಸಾಮಾಜಿಕ ಜಾಲದ ಮೂಲಕವೇ ಏಷ್ಯಾ ರಾಷ್ಟ್ರಗಳ ವಿರುದ್ಧ ಯುದ್ಧ ಸಾರಲು ಪ್ರಚೋದನೆ ನೀಡುತ್ತಿದ್ದ. ತನ್ನ ಗುರುತು ಮರೆಮಾಚುವ ಕುರಿತು ಜಾಗೃತಿ ವಹಿಸಿದ್ದ. ಯಾವತ್ತೂ ತನ್ನ ಗುರುತು ಪತ್ತೆಯಾಗದು ಎಂದು ನಂಬಿದ್ದ. ಆದರೆ ಆತನ ಗುರುತನ್ನು ಚಾನಲ್ 4 ಪತ್ತೆ ಹಚ್ಚಿತು ಮತ್ತು ಈ ಕುರಿತು ಭಾರತೀಯ ಏಜೆನ್ಸಿಗಳಿಗೆ ವಿಷಯ ರವಾನಿಸಿತು. [ಜಾಣ ಮೆಹದಿ ಪೊಲೀಸ್ ಕಣ್ಣು ತಪ್ಪಿಸಿದ್ದು ಹೇಗೆ]
  • ಮೆಹದಿ ಮಸ್ರೂರ್ ಬಿಸ್ವಾಸ್ ವಿರುದ್ಧ ಐಪಿಸಿ, ಯುಎಪಿ ಮತ್ತು ಐಟಿ ಕಾಯ್ದೆ 2000 ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಸಿಬಿಯ ಕ್ರೈಂ ಡಿಸಿಪಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mehdi Masroor Biswas who was arrested by the Bangalore police has confessed to running the twitter handle @shamwitness. He has been booked under Sections 125 of the Indian Penal Code which is punishable for waging war against an Asiatic country in alliance with the government of India. He has also been booked for Unlawful Activities and Section 66 of the Information Technology Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more