ಮೋದಿ ಸಂಪುಟದ ಐವರು ಶ್ರೀಮಂತ ಸಚಿವರು

ನವದೆಹಲಿ, ಜೂ.4: ನರೇಂದ್ರ ಮೋದಿ ಸರಕಾರದ 44 ಸಚಿವರಲ್ಲಿ 40 ಮಂದಿ ಕೋಟಿಪತಿಗಳಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅತ್ಯಂತ ಶ್ರೀಮಂತರಾಗಿದ್ದಾರೆ. ಎಂದರೆ ಒಟ್ಟು ಸಚಿವರಲ್ಲಿ ಶೇ.91ರಷ್ಟು ಮಂದಿ ಕೋಟ್ಯಧೀಶರಾಗಿದ್ದಾರೆ. ಮೋದಿ ಸಚಿವ ಸಂಪುಟದಲ್ಲಿ ಸಪ್ತ ಮಹಿಳೆಯರಿದ್ದಂತೆ ಐವರು ಅತಿ ಹೆಚ್ಚು ಆಸ್ತಿ ಘೋಷಿಸಿದ ಸಂಸದರೂ ಸ್ಥಾನ ಪಡೆದಿದ್ದಾರೆ.

ಪ್ರಜಾಪ್ರಭುತ್ವ ಸುಧಾರಣೆಗಾಗಿರುವ ಸಂಘಟನೆ (ಎಡಿಆರ್) ಪ್ರಧಾನಿ ಮೋದಿ ಸಹಿತ 46 ಸಚಿವರಲ್ಲಿ 44 ಮಂದಿಯ ಸ್ವಘೋಷಿತ ಅಫಿಡವಿಟ್ ಗಳ ವಿಶ್ಲೇಷಣೆ ನಡೆಸಿದೆ. ಆದರೆ, ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ನಿರ್ಮಲಾ ಸೀತಾರಾಮನ್ ಯಾವುದೇ ಸದನದ ಸದಸ್ಯರಲ್ಲದ ಕಾರಣ ಅವರ ಅಫಿಡವಿತ್‌ಗಳ ವಿಶ್ಲೇಷಣೆ ನಡೆಸಿಲ್ಲ. ಆಹಾರ ಸಂಸ್ಕರಣೋದ್ಯಮ ಸಚಿವೆ ಹರಸಿಂಗ ರಥ್‌ಕೌರ್ ಬಾದಲ್, ಗೋಪಿನಾಥ ಮುಂಧೆ, ಮೇನಕಾ ಗಾಂಧಿ ಹಾಗೂ ಪೀಯೂಷ್ ಗೋಯಲ್ ಶ್ರೀಮಂತ ಸಚಿವರ ಪಟ್ಟಿಯಲ್ಲಿದ್ದಾರೆ.

ಅತ್ಯಂತ ಕಡಿಮೆ ಆಸ್ತಿ ಇರುವ ಸಚಿವರಲ್ಲಿ ಮನ್ಸುಖ್‌ಭಾಯಿ ಧನ್‌ಜೀ ಭಾಯಿ ವಾಸವ (ರೂ. 65 ಲಕ್ಷ), ತಾವರ್‌ಚಂದ್ ಗೆಹ್ಲೋಟ್ (86), ಸುದರ್ಶನ್ ಭಗತ್ (90 ಲಕ್ಷ), ರಾಮ್‌ವಿಲಾಸ್ ಪಾಸ್ವಾನ್ (96 ಲಕ್ಷ) ಹಾಗೂ ಸಂಜೀವ ಕುಮಾರ್ ಬಲ್ಯನ್ (1 ಕೋಟಿ) ಸೇರಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ

ವಿತ್ತ ಸಚಿವ ಅರುಣ್ ಜೇಟ್ಲಿ

ಅಮೃತಸರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿರುವ ಅರುಣ್ ಜೇಟ್ಲಿ ಅವರು ಸುಮಾರು 113.02 ಕೋಟಿ ರು ಆಸ್ತಿ ಘೋಷಿಸಿದ್ದರು. ಅವರ ಪತ್ನಿ ಸಂಗೀತಾ ಆಸ್ತಿ ಸೇರಿದಂತೆ ಸ್ಥಿರಾಸ್ತಿ 75.7 ಕೋಟಿ ರು ಹಾಗೂ ಚರಾಸ್ಥ್ತಿ 37.32 ಕೋಟಿ ರು ಇದೆ ಎಂದು ಅಫಿಡವಿಟ್ ಸಲ್ಲಿಸಿದ್ದರು.

ಪೋರ್ಶೆ ಕಾರು(1 ಕೋಟಿ ರು) ಮರ್ಸಿಡೀಸ್ ಬೆಂಜ್ (78.89 ಲಕ್ಷ), ಹೋಂಡಾ ಅಕಾರ್ಡ್ (20.44 ಲಕ್ಷ), ಟಯೋಟಾ ಫಾರ್ಚೂನರ್ (23.28 ಲಕ್ಷ) ಎಲ್ಲವೂ ಸೇರಿ 3.10 ಕೋಟಿ ರು, 1.35 ಕೋಟಿ ನಗದು, ಬ್ಯಾಂಕ್ ಬ್ಯಾಲೆನ್ಸ್ 18.01 ಕೋಟಿ ರು, 10.7 ಕೋಟಿ ರು ಸಾಲ ಇದರ ಜಗೆ 23.44 ಲಕ್ಷಕ್ಕೂ ಅಧಿಕ ಆಭರಣಗಳನ್ನು ಹೊಂದಿದ್ದಾರೆ.

ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್

ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್

ಶಿರೋಮಣಿ ಅಕಾಲಿದಳ ನಾಯಕಿ, ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಅವರು ಪಂಜಾಬಿನ ಬಟಿಂಡಾ ಕ್ಷೇತ್ರದ ಸಂಸದೆ ಸುಮಾರು 108.14 ಕೋಟಿ ರು ಆಸ್ತಿ ಘೋಷಿಸಿದ್ದರು. ಕಳೆದ ಚುನಾವಣೆಗೆ ಹೋಲಿಸಿದರೆ ಶೇ 80ರಷ್ಟು ಏರಿಕೆ ಕಂಡು ಬಂದಿದೆ.

ಹರ್ ಸಿಮ್ರತ್ ಕೌರ್ ಬಾದಲ್ ಅವರು 2009ರಲ್ಲಿ ಕೇವಲ 60 ಕೋಟಿ ರು ಹೊಂದಿದ್ದರು. ಸಿಮ್ರತ್ ಕೌರ್ ಹಾಗೂ ಅವರ ಪತಿ ಪಂಜಾಬ್ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಸೇರಿ ಘೋಷಿತ ಚರಾಸ್ತಿ 46.70 ಕೋಟಿ, ಸ್ಥಿರಾಸ್ತಿ 61.44 ಕೋಟಿ, 1.94 ಕೋಟಿ ಮೌಲ್ಯದ ಆಭರಣ ಹೊಂದಿದ್ದಾರೆ. ಯಾವುದೇ ವಾಹನ ಹೊಂದಿಲ್ಲ, ಪತಿ ಎರಡು ಟ್ರ್ಯಾಕ್ಟರ್ ಹೊಂದಿದ್ದು ಮೌಲ್ಯ 5.50 ಲಕ್ಷ ರು.

ಮನೇಕಾ ಗಾಂಧಿ ಅಸ್ತಿ ವಿವರ

ಮನೇಕಾ ಗಾಂಧಿ ಅಸ್ತಿ ವಿವರ

ಉತ್ತರ ಪ್ರದೇಶದ ಫಿಲಿಬಿತ್ ಕ್ಷೇತ್ರದ ಸಂಸದೆ ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು 37.41 ಕೋಟಿ ರು ಘೋಷಿಸಿದ್ದರು. 12.46 ಚರಾಸ್ತಿ ಹಾಗೂ ಸ್ಥಿರಾಸ್ತಿ 24.95 ಕೋಟಿ ರು. ಆದರೆ , ಕಾರು ಅಥವಾ ವಾಹನ ಹೊಂದಿಲ್ಲ ಎಂದಿದ್ದರು.

ಬ್ಯಾಂಕ್ ಗಳಲ್ಲಿ 6 ಕೋಟಿ ರು ಬ್ಯಾಲೆನ್ಸ್ ಹೊಂದಿರುವ ಮನೇಕಾ ಗಾಂಧಿ ಅವರು 1.47 ಕೋಟಿ ರು ಆಭರಣ ಹೊಂದಿದ್ದಾರೆ, 39,365 ನಗದು ಮಾತ್ರ ಕೈಯಲ್ಲಿದೆ, 40,000 ಮೌಲ್ಯದ ರೈಫಲ್ ಹೊಂದಿದ್ದಾರೆ. 6.95 ಕೋಟಿ ಮೌಲ್ಯದ ನಿವೇಶನ, 18 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.

ಮಹಾರಾಷ್ಟ್ರದ ಪಿಯೂಷ್ ಗೋಯಲ್

ಮಹಾರಾಷ್ಟ್ರದ ಪಿಯೂಷ್ ಗೋಯಲ್

ಮುಂಬೈನ ಪಿಯೂಷ್ ಗೋಯಲ್ ಅವರು ಮೋದಿ ಸಂಪುಟದಲ್ಲಿ ಇಂಧನ ಸಚಿವರಾಗಿದ್ದು 2,94,901 ನಗದು, 1 ಕೋಟಿ ರು ಅಧಿಕ ಬ್ಯಾಂಕ್ ಬ್ಯಾಲೆನ್ಸ್, 24 ಕೋಟಿ ಬಾಂಡ್, 1 ಕೋಟಿ ರು ಗೂ ಅಧಿಕ ಆಭರಣ ಸೇರಿ 30 ಪ್ಲಸ್ ಕೋಟಿ ರು ಘೋಷಿಸಿದ್ದರು. ವಾಜಪೇಯಿ ಸಂಪುಟದಲ್ಲಿದ್ದ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ ಪಿಯೂಷ್ ಅವರು ಬಹುಕಾಲದಿಂದ ಪಕ್ಷದ ಖಜಾಂಚಿಯಾಗಿದ್ದು, ಮೋದಿ ಸ್ಪರ್ಧಿಸಿದ್ದ ವಡೋದರಾದಲ್ಲಿ ಪಿಯೂಷ್ ಸ್ಪರ್ಧಿಸುವ ಸಾಧ್ಯತೆಯಿದೆ.

 ಗೋಪಿನಾಥ ಮುಂಡೆ

ಗೋಪಿನಾಥ ಮುಂಡೆ

ಮಹಾರಾಷ್ಟ್ರದ ಬೀಡ್ ಕ್ಷೇತ್ರದ ದಿವಂಗತ ನಾಯಕ ಗೋಪಿನಾಥ್ ಮುಂಡೆ ಅವರು 38 ಕೋಟಿ ರು ಘೋಷಿಸಿದ್ದರು, 3 ಕೋಟಿ ರು ಸಾಲ, ಪತ್ನಿ ಪ್ರಾಧಾನ್ಯ 15 ಕೋಟಿ ರು ಹಾಗೂ ಪುತ್ರಿ ಯಶಶ್ರೀ 1.3 ಕೋಟಿ ರು ಸಾಲ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+