ವೈದ್ಯಕೀಯ ಶಿಕ್ಷಣ: 18,000ಕ್ಕೂ ಹೆಚ್ಚು PG ಸೀಟು ಬಾಕಿ, ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ: ಸೋಷಿಯಲ್ ಮೀಡಿಯಾ ಚರ್ಚೆ

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಈ "CONFIDENTIAL" ಎಂಬ ಬರಹ ಇರುವ ನೋಟಿಸ್ ಹೆಚ್ಚು ಚರ್ಚೆ ಆಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ ಇದು ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ದೂರಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಈ "CONFIDENTIAL" ಎಂಬ ತಲೆಪಟ್ಟಿ ಹೊತ್ತ ನೋಟಿಸ್‌ವೊಂದು ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ತಿರುಗಾಟ ನಡೆಸಿದೆ.

Medical Education Crisis 18 000 PG Seats Vacant Money Power Undermines Social Justice Social Media Erupts

ವಿಷಯ ಏನೆಂದರೆ, ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಸುಮಾರು 18,000 ಸೀಟುಗಳು ಭರ್ತಿ ಆಗಲು ಬಾಕಿ ಉಳಿದಿದ್ದು, ಯಾರೂ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲವಾದ್ದರಿಂದ ಕಟ್-ಆಫ್ ಮಾರ್ಕುಗಳನ್ನು ತಗ್ಗಿಸಿ, ಕಡಿಮೆ ಮಾರ್ಕು ಇರುವವರಿಗೂ ಅವಕಾಶ ತೆರೆಯಲಾಗಿದೆ. ಅದರಲ್ಲಿ, SC/ST/OBC ಮತ್ತಿತರ ಮೀಸಲು ವರ್ಗದ ಸೀಟುಗಳಿಗೆ ಕಟ್‌ಆಫನ್ನು -40 (ಮೈನಸ್ ನಲವತ್ತು) ಮಾರ್ಕಿಗೆ ತಗ್ಗಿಸಲಾಗಿದೆ ಎಂದು ಪತ್ರ ಹೇಳುತ್ತದೆ. ಈ ನೋಟಿಸ್ ಸಹಜವಾಗಿಯೇ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಅಸಹನೆ, ಸಿಟ್ಟು ಮೂಡಿಸಿದಂತಿದೆ. ಮೇಲುನೋಟಕ್ಕೆ ಎಲ್ಲರಿಗೂ ಹಾಗೇ ಅನ್ನಿಸಬಹುದು. ಆದರೆ ಇದರ ಹಿಂದಿನ ಆಟ ಬೇರೆಯೇ ಇರುವಂತಿದೆ.

NEET ರೀತಿಯಲ್ಲೇ NEET PG ಪರೀಕ್ಷೆಯಲ್ಲೂ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸಂಖ್ಯೆಯ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ತಪ್ಪು ಉತ್ತರಗಳಿಗೆ ಮೈನಸ್ ಅಂಕಗಳಿವೆ. ಹಾಗಾಗಿ, ಮೈನಸ್ ಮಾರ್ಕುಗಳನ್ನೂ ಪರಿಗಣಿಸಿ, ಈ ನೋಟೀಸು ಹೊರಟಿದೆ.

ಈ ವಿಚಾರ ವೈರಲ್ ಆದಾಗ, ಸಹಜವಾಗಿಯೇ ಎಳೆಯರಲ್ಲಿ ಮೀಸಲಾತಿಯ ಕುರಿತು ಮೇಲುಪದರದ ಆಕ್ರೋಶ ಮೂಡಿದೆ. ಇಲ್ಲಿ ವಾಸ್ತವವನ್ನು ತಿರುಚಲಾಗಿದೆ,. ಅದೇನೆಂದು ನನ್ನ ತಿಳಿವಿನ ಮಿತಿಯಲ್ಲಿ ವಿವರಿಸುವ ಪ್ರಯತ್ನ ಮಾಡುತ್ತೇನೆ. ಮೊದಲನೆಯದಾಗಿ, 18,000ಕ್ಕೂ ಮಿಕ್ಕಿ PG ಸೀಟುಗಳು ಬಾಕಿ ಉಳಿದಿರುವುದು ಯಾಕೆ?

ಭಾರತ ಸರ್ಕಾರ ಏಕಾಏಕಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು, ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳು, ವ್ಯವಸ್ಥೆಗಳು ಅದೇ ವೇಗದಲ್ಲಿ ಸುಧಾರಿಸುತ್ತಿಲ್ಲ.

ಜೊತೆಗೆ ಈ ಸ್ನಾತಕೋತ್ತರ ಸೀಟುಗಳಲ್ಲಿ ಅಂದಾಜು 60- 70% ಸೀಟುಗಳು ಖಾಸಗಿ ವಲಯದ ಹಿಡಿತದಲ್ಲಿವೆ. ಅಲ್ಲಿ ಒಂದೊಂದು ಸೀಟು 70-80ಲಕ್ಷ ರೂ.ಗಳಿಂದ 3-4 ಕೋಟಿ ಬೆಲೆ ಬಾಳುತ್ತವೆ. ಹಾಗಾಗಿ ಪರೀಕ್ಷೆ ಬರೆದು ರೀಸನೆಬಲ್ ಅಂಕಗಳು ಬಂದರೂ ಕೋಟಿಗಟ್ಟಲೆ ಬಿಚ್ಚದೇ ಸೀಟು ಸಿಗದು. ಕೋಟಿಗಟ್ಟಲೆ ಸುರಿದು ಸ್ನಾತಕೋತ್ತರ ಪದವಿ ಪಡೆಯಬಲ್ಲವರು ನಮ್ಮಲ್ಲಿ ಎಷ್ಟು ಜನ ಇದ್ದಾರೆ. ಇನ್ನು ನಾನ್-ಕ್ಲಿನಿಕಲ್ ಸೀಟುಗಳೂ (ಫಿಸಿಯಾಲಜಿ, ಅನಾಟಮಿ ಇತ್ಯಾದಿ) ಹೆಚ್ಚಿನ ಬೇಡಿಕೆ ಹೊಂದಿರುವುದಿಲ್ಲ. ಹಲವೆಡೆ ಸವಲತ್ತು-ಶಿಕ್ಷಕರು, ರೋಗಿಗಳು ಇಲ್ಲ. ಇದು ಒಟ್ಟು ಮಾರುಕಟ್ಟೆ ಸನ್ನಿವೇಶ. ಈ ಕಾರಣಕ್ಕಾಗಿ ಸೀಟುಗಳು ಖಾಲಿ ಉಳಿದಿವೆ. ಇದಕ್ಕೆ ಮೂಲ ಕಾರಣ ಅಸಂತುಲಿತ ಅಭಿವೃದ್ಧಿಯ ಕಲ್ಪನೆ. ಸಾಮರ್ಥ್ಯ, ಆಸಕ್ತಿ, ಬಯಕೆ ಇರುವವರಿಗೆ ಸೀಟು ಎಟುಕದ ಮತ್ತು ಕೇವಲ ದುಡ್ಡಿದ್ದರೆ ಮಾತ್ರ ಸೀಟು ಕೊಡುವ ವಿಚಿತ್ರ ಸನ್ನಿವೇಶ ಇದು. ಯಾರಿಗಾದರೂ ಸಿಟ್ಟು ಹುಟ್ಟಿಸುತ್ತದೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಇರಬಹುದಾದ ಸಿಟ್ಟನ್ನು ಮೀಸಲಾತಿಯ ಕಡೆಗೆ ತಿರುಗಿಸುವ ಸ್ಪಿನ್ ಆಟದಂತೆ ಈ confidential ನೋಟೀಸು ಹೊರಬಿದ್ದಿರುವ ಘಟನೆ ಕಾಣಿಸುತ್ತಿದೆ. ಮೀಸಲಾತಿ ಸೀಟುಗಳಲ್ಲೂ ಖಾಸಗಿ ಕಾಲೇಜುಗಳಲ್ಲಿ, ಡೀಮ್ಡ್ ವಿವಿಗಳಲ್ಲಿ ದೊಡ್ಡ ರಿಯಾಯಿತಿಯೇನೂ ಇರದು. ಒಟ್ಟಿನಲ್ಲಿ ದುಡ್ಡುಕೊಡಿ-ಡಿಗ್ರಿ ಭಾಗ್ಯ ಪಡೆಯಿರಿ ಯೋಜನೆ. ಉನ್ನತ ಶಿಕ್ಷಣ ಖಾಸಗೀಕರಣದ, ಜಾಗತೀಕರಣದ ತಪ್ಪು ಹಾದಿಯ ಈ ನೀತಿ, ಮುಂದಿನ ದಿನಗಳಲ್ಲಿ ತರಲಿರುವ ಅಪಾಯ ಇದು. ಇನ್ನು ಈ ಖಾಲಿ ಜಾಗಗಳಿಗೆ ವಿದೇಶೀ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಇಲ್ಲಿ ಹೆಚ್ಚಿನ ಫೀ ಪಡೆದು ಅವರಿಗೆ ಸ್ನಾತಕೋತ್ತರ ಪದವಿಗಳನ್ನು ಕೊಟ್ಟರೂ ಅಚ್ಚರಿ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+