ಮತ್ತೊಂದು ragging : ಬೆತ್ತಲು ಮಾಡಿ ಬಚ್ಚಲು ತೊಳಿಸಿದರು

Posted By:
Subscribe to Oneindia Kannada

ತಿರುವನಂತಪುರಂ, ಡಿಸೆಂಬರ್ 20 : ವಿದ್ಯಾರ್ಥಿಯೊಬ್ಬನಿಗೆ ಕೊಡಬಾರದ ಚಿತ್ರಹಿಂಸೆ ನೀಡಿ ಆತನ ಮೂತ್ರಕೋಶವೇ ಹಾಳಾಗುವ ಹಾಗೆ ಮಾಡಿದ ಕೆಲವೇ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬೆತ್ತಲೆ ಮಾಡಿ ಬಚ್ಚಲು ತೊಳೆಸಿದ ಘಟನೆ ನಡೆದಿದೆ.

ಮಂಜೇರಿಯಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಹೊಸದಾಗಿ ಸೇರಿಕೊಂಡ 42 ವಿದ್ಯಾರ್ಥಿಗಳ ಬಟ್ಟೆಯನ್ನು ಸಂಪೂರ್ಣವಾಗಿ ಬಿಚ್ಚಿಸಿ ಅವರಿಂದ ಪುರುಷರ ಶೌಚಾಲಯವನ್ನು ತೊಳೆಸಿದ್ದಲ್ಲದೆ, ನಲ್ಲಿಯಲ್ಲಿ ಬರುವ ಹೊಲಸು ನೀರನ್ನು ಕುಡಿಯುವಂತೆ ಹಿರಿಯ ವಿದ್ಯಾರ್ಥಿಗಳು ಮಾಡಿದ್ದಾರೆ.

ಈ ಕಾರಣಕ್ಕಾಗಿ 21 ಹಿರಿಯ ವಿದ್ಯಾರ್ಥಿಗಳನ್ನು ವಿಚಾರಣೆ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ತಮ್ಮ ಬಟ್ಟೆ ಬಿಚ್ಚಿಸಿ ಅನುಚಿತವಾಗಿ ಹಿರಿಯ ವಿದ್ಯಾರ್ಥಿಗಳು ನಡೆದುಕೊಂಡಿದ್ದಾರೆ ಎಂದು ಮೊದಲನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಜಂಟಿ ದೂರು ನೀಡಿದ್ದರು.

MBBS students stripped naked, made to clean toilets

ಕಿರಿಯ ವಿದ್ಯಾರ್ಥಿಗಳು ನೀಡಿರುವ ಆರೋಪ ಸಾಬೀತಾದರೆ ಚಿತ್ರಹಿಂಸೆ ನೀಡಿದ ಎಲ್ಲ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೇ ತೆಗೆದುಹಾಕಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾಲೇಜಿನ ಪ್ರಿನ್ಸಿಪಾಲ್ ಎಂ ಮೋಹನನ್ ಅವರು ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ನಟ್ಟಕೋಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐವರು ಹಿರಿಯ ವಿದ್ಯಾರ್ಥಿಗಳು ನೀಡಿದ ಹಿಂಸೆಯಿಂದಾಗಿ ಓರ್ವನ ಮೂತ್ರಕೋಶಗಳೇ ಹಾಳಾಗಿವೆ. ಎಲ್ಲ ಐದು ಹಿರಿಯ ವಿದ್ಯಾರ್ಥಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಘಟನೆ ಕುರಿತಂತೆ ವಿಚಾರಣೆ ನಡೆಸಿ ವರದಿ ನೀಡಬೇಕೆಂದು ಶಿಕ್ಷಣ ಇಲಾಖೆಗೆ ಸರಕಾರ ಆದೇಶ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A government medical college in Manjeri of Kerala has suspended 21 of its students following allegations of ragging. All senior MBBS students have been accused of tormenting 42 first year students in the name of ragging. ಮತ್ತೊಂದು ragging
Please Wait while comments are loading...