ಮಸೂದ್‌ ಬಂಧನ : ಪಾಕ್ ಕಣ್ಣಾಮುಚ್ಚಾಲೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 16 : ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಬಂಧನದ ವಿಚಾರದಲ್ಲಿ ಪಾಕಿಸ್ತಾನ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಅಜರ್‌ನನ್ನು ವಶಕ್ಕೆ ಪಡೆದಿರುವುದಾಗಿ ಪಾಕ್ ಹೇಳುತ್ತಿದೆ. ಆದರೆ, ಜೈಷ್-ಎ-ಮೊಹಮ್ಮದ್ ಸಂಘಟನೆ ಈ ಹೇಳಿಕೆಯನ್ನು ತಳ್ಳಿಹಾಕಿದೆ.

ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನನ್ನು ವಶಕ್ಕೆ ಪಡೆದಿರುವುದಾಗಿ ಹೇಳಿತ್ತು. ಆದರೆ, ಭಾರತ ಇದಕ್ಕೆ ಸಾಕ್ಷಿ ಕೇಳಿದೆ. [ನಿಜಕ್ಕೂ ಪಾಕ್ ಮಸೂದ್ ವಶಕ್ಕೆ ಪಡೆದಿದೆಯೇ?]

maulana masood azhar

ಮಸೂದ್‌ ಅಜರ್‌ನನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಕ್ ಮಾಧ್ಯಮಗಳು ಬುಧವಾರ ಹೇಳಿದ್ದವು. ಪಾಕಿಸ್ತಾನದ ಸಚಿವ ರಾನಾ ಸನಾವುಲ್ಲಾ ಅವರು ಸಹ ಇದನ್ನು ಖಚಿತ ಪಡಿಸಿದ್ದಾರೆ. ಆದರೆ, ಉಗ್ರ ಸಂಘಟನೆ ಅಜರ್‌ನನ್ನು ವಶಕ್ಕೆ ಪಡೆದಿಲ್ಲ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. [ಮಸೂದ್ ಯಾರು?]

ಉಗ್ರ ಮಸೂದ್ ವಶಕ್ಕೆ ಪಡೆದಿರುವ ವಿಚಾರದಲ್ಲಿ ಪಾಕ್ ಹಿಂದೆ ಮಾಡಿದಂತೆಯೇ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದೆ. 26/11ರ ಮುಂಬೈ ದಾಳಿ ನಡೆದಾಗಲೂ ಉಗ್ರ ಹಫೀಜ್‌ನನ್ನು ವಶಕ್ಕೆ ಪಡೆದಿರುವುದಾಗಿ ಹೇಳಿ ಪಾಕ್ ದಾರಿ ತಪ್ಪಿಸಿತ್ತು. ಈಗಲೂ ಇಂತಹ ಹೇಳಕೆಗಳನ್ನೇ ನೀಡುತ್ತಿದೆ. ["ಭಾರತದ ಸೇನೆ ವೈರಿಗಳ ಸದೆ ಬಡಿಯಲು ಸಿದ್ಧ"]

ವಶಕ್ಕೆ ಪಡೆದಿಲ್ಲ : ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ತಮ್ಮ ನಾಯಕನನ್ನು ಬಂಧಿಸಿಲ್ಲ ಅಥವ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಒಂದು ವೇಳೆ ಪಾಕ್ ಮಸೂದ್ ವಶಕ್ಕೆ ಪಡೆದರೆ ಜಿಹಾದಿಗಳಿಗೆ ಹೋರಾಟ ಮಾಡಲು ಮತ್ತಷ್ಟು ಸ್ಫೂರ್ತಿ ಸಿಗಲಿದೆ ಎಂದು ಉರ್ದುವಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are still in business is what the Jaish-e-Mohammad had to say in a statement. The statement was aimed at refuting news reports which originated from Pakistan that their chief, Maulana Masood Azhar had been arrested.
Please Wait while comments are loading...