ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಸಂಸ್ಥೆಗಳಲ್ಲಿ ಹೆರಿಗೆ ರಜೆ ವಿಸ್ತರಣೆ : ಮೇನಕಾ ಗಾಂಧಿ

By Mahesh
|
Google Oneindia Kannada News

ನವದೆಹಲಿ, ಡಿ. 30: ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ. 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಕಾರ್ವಿುಕ ಸಚಿವಾಲಯ ಕೂಡಾ ಒಪ್ಪಿಗೆ ನೀಡಿದೆ.

ಹೆರಿಗೆ ರಜೆ ವಿಸ್ತರಣೆ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಕಾರ್ವಿುಕ ಸಚಿವಾಲಯಕ್ಕೆ ಮನವಿ ಮಾಡಿತ್ತು. ಅಪೌಷ್ಟಿಕತೆ, ಅತಿಸಾರ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಲು ಕನಿಷ್ಠ 6 ತಿಂಗಳ ಕಾಲ ಹಾಲುಣಿಸುವುದು ಅನಿವಾರ್ಯವಾಗಿದೆ ಎಂದು ಸೂಚಿಸಲಾಗಿತ್ತು.

Maternity leave in private sector increase to 26 weeks : Maneka Gandhi

ಖಾಸಗಿ ಮತ್ತು ಸರ್ಕಾರಿ ನೌಕರಿಯಲ್ಲಿರುವವರಿಗೆ ಹೆರಿಗೆ ರಜೆ ಅವಧಿಯನ್ನು 32 ವಾರ(8 ತಿಂಗಳು)ಕ್ಕೆ ಹೆಚ್ಚಿಸುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರೆ, ಇದಕ್ಕೆ ಕಾರ್ಮಿಕ ಸಚಿವಾಲಯ ಇನ್ನೂ ಒಪ್ಪಿಗೆ ಮುದ್ರೆ ಒತ್ತಿಲ್ಲ.

1972ರ ಕೇಂದ್ರ ನಾಗರಿಕ ಸೇವಾ ನಿಯಮಗಳ ಪ್ರಕಾರ ಸರ್ಕಾರಿ ನೌಕರರಿಗೆ 6 ತಿಂಗಳ ಕಾಲ ಹೆರಿಗೆ ರಜೆ ತೆಗೆದುಕೊಳ್ಳಬಹುದಾಗಿದೆ. ಅದರ ಜತೆಗೆ ಮಗುವಿಗೆ 18 ವರ್ಷಗಳಾಗುವವರೆಗೆ ಯಾವುದೇ ಅವಧಿಯಲ್ಲಿ 2 ವರ್ಷಗಳ ಕಾಲ ಮಗುವಿನ ಪಾಲನೆ ರಜೆ ಹಾಕಬಹುದಾಗಿದೆ. ಇದರಲ್ಲಿ 365 ದಿನಗಳ ವೇತನವನ್ನು ಸಂಪೂರ್ಣವಾಗಿ ನೀಡಿದರೆ, ಉಳಿದ 365 ದಿನಗಳ ವೇತನದಲ್ಲಿ ಶೇ.80ರಷ್ಟನ್ನು ನೀಡಲಾಗುತ್ತದೆ.(ಒನ್ ಇಂಡಿಯಾ ಸುದ್ದಿ)

English summary
Women and Child Development Minister Maneka Gandhi Monday said the Ministry of Labour has agreed to increase maternity leave to six-and-a-half months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X