ಚಾಕು ತೋರಿಸಿ ಗಂಡನ ಸ್ನೇಹಿತರಿಂದಲೇ ಅತ್ಯಾಚಾರ
ಮೀರತ್, ಅ.19: 30 ವರ್ಷದ ವಿವಾಹಿತ ಮಹಿಳೆಯೊಬ್ಬಳಿಗೆ ಚಾಕು ತೋರಿಸಿ ಬೆದರಿಸಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ಮೀರತ್ ಸಮೀಪದ ಕಾನ್ ಕರ್ ಖೇಡಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಗಂಡನ ಸ್ನೇಹಿತರೇ ಕೃತ್ಯ ಎಸಗಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದ್ದು ಅವರಿಂದ ವಿಡೀಯೋ ಕ್ಲೀಪ್ ವೊಂದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಒಳಗಾದ ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು ತನ್ನ ಗಂಡನ ಸ್ನೇಹಿತರಾದ ನದೀಮ್ ಮತ್ತು ಆರಿಫ್ ಅಕ್ಟೋಬರ್ 10 ರಂದು ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಇವರಿಬ್ಬರು ಸಮೀಪದ ಶೋಭಾಪುರ್ ನಿವಾಸಿಗಳು ಎಂದು ತಿಳಿಸಿದ್ದಳು.[ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ...]

ಮಹಿಳೆ ಮನೆಯಲ್ಲಿ ಒಬ್ಬಳೆ ಇದ್ದಾಗ ಆಗಮಿಸಿದ ಕಾಮುಕರು ಕೃತ್ಯ ಎಸಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮೋದಿ ನಗರದ ಯುವಕನೊಬ್ಬನನ್ನು ಮದುವೆಯಾಗಿದ್ದ ಮಹಿಳೆ ಕೆಲ ದಿನಗಳ ಹಿಂದೆ ತನ್ನ ತಂದೆಯ ಮನೆಯಾದ ಕಾನ್ ಕರ್ ಖೇಡಾಕ್ಕೆ ಬಂದಿದ್ದಳು ಎಂದು ಪೊಲೀಸ್ ಅಧಿಕಾರಿ ಮಹಾವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.[ಕೆಲಸ ಅರಸಿ ಬಂದವಳ ಮೇಲೆ ಸಂಬಂಧಿಯಿಂದ ಅತ್ಯಾಚಾರ]
ವಿಡಿಯೋ ಕ್ಲಿಪ್ ಇಟ್ಟುಕೊಂಡು ಮಹಿಳೆಯನ್ನು ಮತ್ತೆ ಬೆದರಿಸಿ ಅತ್ಯಾಚಾರ ಮಾಡಲು ಯತ್ನಿಸಿದ್ದರು. ನಿನ್ನ ಗಂಡನಿಗೆ ಈ ವಿಷಯ ಹೇಳುತ್ತೇನೆ ಎಂದು ಅನೇಕ ಬಾರಿ ಹೆದರಿಸಿದ್ದರು. ಈ ಎಲ್ಲ ದಾಖಲೆಗಳ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications