ಮಧ್ಯಪ್ರದೇಶ: ಮದುವೆಗೆ ಹೊರಟಿದ್ದ 21 ಜನರ ದುರ್ಮರಣ
ಸಿಧಿ, ಏಪ್ರಿಲ್ 18: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸಾನ್ ನದಿಯಲ್ಲಿ ಮಿನಿ ಟ್ರಕ್ ವೊಂದು ಉರುಳಿದ ಪರಿಣಾಮ 21 ಜನರು ಮೃತರಾದ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಹಲವರು ವಾಹನದೊಳಗೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಟ್ರಕ್ ಸಿಂಗ್ರೌಲಿ ಜಿಲ್ಲೆಯಿಂದ ಹೊರಟು ಸಿಧಿ ಜಿಲ್ಲೆಯಲ್ಲಿ ದುವೆ ಕಾರ್ಯಕ್ರಮವೊಂದಕ್ಕೆ ಜನರನ್ನು ಕೊಂಡೊಯ್ಯುತ್ತಿತ್ತು.

ಚಾಲಕನ ನಿಯಂತ್ರಣ ತಪ್ಪಿ ಸುಮಾರು 60-70 ಅಡಿ ಎತ್ತರದಿಂದ ನದಿ ದಂಡೆಯ ಮೇಲೆ ಬಿದದಿದ್ದರಿಂದ ಈ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications