ಹರ್ಯಾಣ ಸುಂದರಿಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ಪಟ್ಟ
ಹರ್ಯಾಣದ ಚೆಲುವೆ ಮನುಷಿ ಚಿಲ್ಲಾರ್ ಅವರಿಗೆ ಪ್ರತಿಷ್ಠಿತ ಮಿಸ್ ಇಂಡಿಯಾ ವರ್ಲ್ಡ್ ಗೌರವ. ಮುಂಬೈನಲ್ಲಿ ಭಾನುವಾರ ರಾತ್ರಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿಜೇತೆಯಾದ ಮನುಷಿ.
ಮುಂಬೈ, ಜೂನ್ 26: ಹರ್ಯಾಣದ ಮನುಷಿ ಚಿಲ್ಲಾರ್ ಎಂಬ ಸುಂದರಿ ಈ ಬಾರಿಯ ಪ್ರತಿಷ್ಠಿತ ಮಿಸ್ ಇಂಡಿಯಾ ವರ್ಲ್ಡ್ 2017 ಗೌರವಕ್ಕೆ ಪಾತ್ರರಾಗಿದ್ದಾರೆ.
ಮುಂಬೈನ ಯಶ್ ರಾಜ್ ಸಿನಿಮಾ ಸ್ಟುಡಿಯೋದಲ್ಲಿ ಭಾನುವಾರ ರಾತ್ರಿ ನಡೆದ ಫೆಮಿನಾ ಮಿಸ್ 2017 ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮನುಷಿ ಚಿಲ್ಲಾರ್ ಅವರು ವಿಜೇತೆಯಾಗಿ ಹೊರಹೊಮ್ಮಿದರು. 2016ರ ಇದೇ ಪ್ರಶಸ್ತಿ ಗೆದ್ದಿದ್ದ ಸ್ಟಿಫಾನಿ ಡೆಲ್ ವ್ಯಾಲೆ ಅವರು ಮನುಷಿ ಅವರಿಗೆ ಮಿಸ್ ಇಂಡಿಯಾ ಕಿರೀಟ ತೊಡಿಸಿ ಸನ್ಮಾನಿಸಿದರು.

ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜಮ್ಮು-ಕಾಶ್ಮೀರದ ಸನಾ ದುವಾ ಅವರು ಮೊದಲ ರನ್ನರ್ ಅಪ್ ಆದರೆ, ಬಿಹಾರದ ಪ್ರಿಯಾಂಕಾ ಕುಮಾರಿ ಅವರು ದ್ವಿತೀಯ ರನ್ನರ್ ಅಪ್ ಆದರು.
ಸ್ಪರ್ಧೆಯಲ್ಲಿ ಒಟ್ಟು ಮೂವತ್ತು ಸುಂದರಿಯರು ಭಾಗವಹಿಸಿದ್ದರು.












Click it and Unblock the Notifications