ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋಜ್ ಮುಕುಂದ್ ಭಾರತ ಸೇನೆಯ ಭಾವಿ ಸೇನಾ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಭಾರತ ಸೇನೆಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಡಿಸೆಂಬರ್ 31 ಕ್ಕೆ ನಿವೃತ್ತರಾಗುತ್ತಿದ್ದು, ಶಕ್ತಿಶಾಲಿ ಸ್ಥಾನಕ್ಕೆ ಮನೋಜ್ ಮುಕುಂದ್ ಅವರು ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.

ಲೆಫ್ಟಿನಂಟ್ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಪ್ರಸ್ತುತ ಪೂರ್ವ ವಲಯದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ, ಈ ಸೇನಾ ವಿಭಾಗವು 4000 ಕಿ.ಮೀ ವ್ಯಾಪ್ತಿಯ ಭಾರತ-ಚೀನಾ ಗಡಿ ಪ್ರದೇಶದ ಸಂರಕ್ಷಣಾ ಕಾರ್ಯ ನಿರ್ವಹಿಸುತ್ತಿದೆ.

ಭಾರತೀಯ ವಾಯು ಸೇನೆಯ ಮುಂದಿನ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ಭಾರತೀಯ ವಾಯು ಸೇನೆಯ ಮುಂದಿನ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ

37 ವರ್ಷ ಸೇನೆಯಲ್ಲಿ ಸೇವೆ ಮಾಡಿರುವ ಮನೋಕ್ ಮುಕುಂದ್, ಸೇನೆಯ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶಾಂತಿ, ಯುದ್ಧ ಎರಡೂ ಸಂದರ್ಭದಲ್ಲಿ ಅವರು ಸೇನೆಯನ್ನು ಶಕ್ತವಾಗಿ ಮುನ್ನಡೆಸಿದ್ದಾರೆ.

Manoj Mukund Narvane Be Next Army Chief

ಮನೋಜ್ ಮುಕುಂದ್ ಅವರು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಅನ್ನು ಮುನ್ನಡೆಸಿದ್ದಾರೆ. ಜೊತೆಗೆ ಶ್ರೀಲಂಕಾದಲ್ಲಿ 'ಶಾಂತಿ ಸೇನೆ'ಯನ್ನೂ ಮನೋಜ್ ಮುನ್ನಡೆಸಿದ್ದಾರೆ. ಮಯನ್ಮಾರ್‌ ನಲ್ಲಿ ಭಾರತ ರಾಯಭಾರಿ ಕಚೇರಿಯ ಭಾಗವಾಗಿದ್ದ ಭದ್ರತಾ ಪಡೆಯನ್ನೂ ಮನೋಜ್ ಮುನ್ನಡೆಸಿದ್ದಾರೆ.

ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ ವಿಸ್ತರಣೆ ಸ್ವಾಗತಿಸಿದ ಚೀನಾ ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ ವಿಸ್ತರಣೆ ಸ್ವಾಗತಿಸಿದ ಚೀನಾ

ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಗೌರವಗಳಿಗೆ ಪ್ರಾಪ್ತರಾಗಿರುವ ಮನೋಜ್ ಮುಕುಂದ್ ಅವರು ಭಾರತೀಯ ಸೇನೆಯ ಅತಿ ಮುಖ್ಯ ಸ್ಥಾನವನ್ನು ವಹಿಸಿಕೊಳ್ಳುವ ಪೂರ್ಣ ಸಂಭವ ಇದೆ.

English summary
Lt General Manoj Mukund Narvane will be next Army Chief. Present army chief Bipin Rawat will retire from service on December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X