Manmohan Singh: ಪಾಕಿಸ್ತಾನದಲ್ಲಿ ಹುಟ್ಟಿದ್ದ ಮನಮೋಹನ್ ಸಿಂಗ್ ಭಾರತದ ಪ್ರಧಾನಿ ಆಗಿದ್ದೇಗೆ?
ಮನಮೋಹನ್ ಸಿಂಗ್ ಅವರ ಹೆಸರು ಕಿವಿಗೆ ಬಿದ್ದ ತಕ್ಷಣ ನೆನಪಿಗೆ ಬರುವುದು ಅವರ ಸರಳತನ & ಆರ್ಥಿಕತೆ ವಿಚಾರದಲ್ಲಿ ಅವರಿಗೆ ಇದ್ದ ಪಾಂಡಿತ್ಯ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೂರಾರು ಸಾಧನೆ ಮಾಡಿ, ಭಾರತದ ಆರ್ಥಿಕತೆ ಬೆಳವಣಿಗೆ ದೊಡ್ಡ ಕೊಡುಗೆಯನ್ನ ಕೂಡ ನೀಡಿದ್ದಾರೆ. ಹೀಗೆ ಸತತ 10 ವರ್ಷ ಕಾಲ ಭಾರತದ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಹುಟ್ಟಿದ್ದು ಪಾಕಿಸ್ತಾನದಲ್ಲಿ ಅನ್ನೋ ಕುತೂಹಲದ ಸಂಗತಿ ನಿಮಗೆ ಗೊತ್ತೆ?
ಅದು 1992 ಕಾಲಘಟ್ಟ, ಭಾರತದ ಆರ್ಥಿಕ ಸ್ಥಿತಿಗತಿ ತೀರಾ ಕುಸಿತ ಕಾಣುತ್ತಿತ್ತು. ಭಾರತದ ಆರ್ಥಿಕತೆ ಕುಸಿತ, ಅತಂಕವನ್ನ ಕೂಡ ಹುಟ್ಟುಹಾಕಿತ್ತು. ಆಗ ಅಮೆರಿಕ ಇಡೀ ಜಗತ್ತಿನ ಬಾಸ್ ಆಗಿದ್ದ ಕಾಲ. ಯುರೋಪ್ & ಅಮೆರಿಕದ ಕೈಯಲ್ಲಿ ಇಡೀ ಜಾಗತಿಕ ಆರ್ಥಿಕತೆ ಇತ್ತು ಎಂಬ ಆರೋಪ ಆಗಿನ ಕಾಲಘಟ್ಟದಲ್ಲಿ ಇತ್ತು. ಆದರೆ ಅದೆಲ್ಲವನ್ನೂ ಒಡೆದು ಹಾಕಿ, ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಮಹಾನ್ ವ್ಯಕ್ತಿ ಮನಮೋಹನ್ ಸಿಂಗ್ ಆಗಿದ್ದರು. ಹಾಗಾದ್ರೆ, ಪಾಕಿಸ್ತಾನದಲ್ಲಿ ಹುಟ್ಟಿದ್ದ ಮನಮೋಹನ್ ಸಿಂಗ್ ಭಾರತದ ಪ್ರಧಾನಿ ಆಗಿದ್ದೇಗೆ?

ಪಾಕಿಸ್ತಾನದಲ್ಲಿ ಹುಟ್ಟಿದ್ದರು ಮನಮೋಹನ್ ಸಿಂಗ್!
1992ರ ಸಮಯದಲ್ಲೇ ಭಾರತದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು ಮನಮೋಹನ್ ಸಿಂಗ್ ಅವರು. ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2004 ರಿಂದ 2014ರ ತನಕ ಭಾರತದ ಪ್ರಧಾನಿಯಾಗಿ ಕೂಡ ಕೆಲಸ ಮಾಡಿ ಸಾಕಷ್ಟು ಸುಧಾರಣೆ ತಂದಿದ್ದರು.
ಭಾರತ ಆರ್ಥಿಕ ಸ್ಥಿತಿ ಕೂಡ ಮನಮೋಹನ್ ಸಿಂಗ್‌ರ ಕಾಲದಲ್ಲಿ, ಸಾಕಷ್ಟು ದೊಡ್ಡ ಸುಧಾರಣೆ ಕಂಡಿತ್ತು. ಇದೀಗ ಮನಮೋಹನ್ ಸಿಂಗ್ ಅವರ ಅಗಲಿಕೆ ನೋವು ತರಿಸಿದ್ದು, ಭಾರತೀಯರು ಕಂಬನಿ ಮಿಡಿದಿದ್ದಾರೆ. ಹಾಗಾದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪಾಕಿಸ್ತಾನ ನೆಲದ ಜೊತೆ ಇದ್ದ ನಂಟು ಎಂತಹದ್ದು? ಪಾಕಿಸ್ತಾನದ ಯಾವ ಪ್ರಾಂತ್ಯದಲ್ಲಿ ಮನಮೋಹನ್ ಸಿಂಗ್ ಅವರು ಜನಿಸಿದ್ದರು? ಮುಂದೆ ಓದಿ.
1947ರ ಸ್ವಾತಂತ್ರ್ಯಕ್ಕೂ ಮೊದಲು....
ಅದು 1932ರ ಸೆಪ್ಟೆಂಬರ್ 26, ಆ ದಿನ ಭಾರತದ ಆರ್ಥಿಕತೆಯ ಲೆಜೆಂಡ್ ಮನಮೋಹನ್ ಸಿಂಗ್ ಅವರು ಜನಿಸಿದ್ದರು. ಆಗಿನ್ನೂ ಭಾರತ & ಪಾಕಿಸ್ತಾನ ಬೇರೆ ಬೇರೆ ಆಗಿರಲಿಲ್ಲ. ಅಖಂಡ ಭಾರತ ಅಸ್ತಿತ್ವದಲ್ಲಿ ಇದ್ದ ಸಮಯದಲ್ಲಿ, ಪಾಕಿಸ್ತಾನದ ಈಗಿನ ಭೂಭಾಗ ಗಾಹ್ ಭಾಗದಲ್ಲಿ ಮನಮೋಹನ್ ಸಿಂಗ್ ಅವರು ಜನಿಸಿದ್ದರು.
ಹೀಗೆ ಪಾಕಿಸ್ತಾನದ ಈಗಿನ ಭೂಭಾಗದಲ್ಲಿ ಜನಿಸಿ ಮುಂದೆ ಭಾರತದ ಪ್ರಧಾನಿ ಕೂಡ ಆದರು. 1947ರ ಸಮಯದಲ್ಲಿ, ಭಾರತ & ಪಾಕಿಸ್ತಾನ ಎಂದು ದೇಶ ವಿಭಜನೆ ಮಾಡಿ ಹೊರಟ ಬ್ರಿಟೀಷರ ನಿರ್ಧಾರದ ಪರಿಣಾಮ ಕಿಚ್ಚು ಹೊತ್ತಿತ್ತು. ಹೀಗೆ ಪಾಕಿಸ್ತಾನದ ಭೂಭಾಗದಲ್ಲಿ ವಾಸವಿದ್ದ ಮನಮೋಹನ್ ಸಿಂಗ್ ಅವರ ಕುಟುಂಬವು, ಭಾರತಕ್ಕೆ ವಲಸೆ ಬಂದು ನೆಲಸಿದರು.
ಅಖಂಡ ಭಾರತದಲ್ಲೇ ಅವರು ಜನಿಸಿದ್ದು!
ಈ ರೀತಿ ಪಾಕಿಸ್ತಾನದ ಭೂಭಾಗದಲ್ಲಿ ಹುಟ್ಟಿದ್ದರೂ ಆಗ ಅಖಂಡ ಭಾರತವೇ ಅಸ್ತಿತ್ವದಲ್ಲಿ ಇತ್ತು, ಹೀಗಾಗಿ ಮನಮೋಹನ್ ಸಿಂಗ್ ಅವರು ಜನಿಸಿದ್ದು ಪಾಕಿಸ್ತಾನದಲ್ಲಿ ಅಲ್ಲ ಭಾರತದ ನೆಲದಲ್ಲೇ ಎಂಬ ವಾದ ಕೂಡ ಇದೆ. ಇದೆಲ್ಲಾ ಏನೇ ಇದ್ದರೂ, ಮನಮೋಹನ್ ಸಿಂಗ್ ಅವರು ಇಡೀ ಜಗತ್ತು ಕಂಡ ಅತ್ಯುತ್ತಮ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಜಗತ್ತಿನಾದ್ಯಂತ ತೀವ್ರ ಸಂತಾಪ ವ್ಯಕ್ತವಾಗಿದೆ.












Click it and Unblock the Notifications