ಆಸ್ತಿಗೂ ಆಧಾರ್ ಜೋಡಣೆ ಕಡ್ಡಾಯ ಮಾಡುವ ಕಾಲ ದೂರವಿಲ್ಲ!
Recommended Video

ಕಪ್ಪು ಹಣ ನಿಯಂತ್ರಿಸುವುದಕ್ಕಾಗಿ ನೋಟು ನಿಷೇಧ ಮಾಡಲಾಯಿತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಏಕೆಂದರೆ ನಗದು ರೂಪದಲ್ಲಿ ಕಪ್ಪು ಹಣ ಇರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಲಾಗಿರುತ್ತದೆ ಎಂಬುದು ಹಲವರ ಅಭಿಪ್ರಾಯ ಆಗಿತ್ತು.
ಇನ್ನು ಕೇಂದ್ರ ಸರಕಾರ, ಅಪನಗದೀಕರಣವು ಕಪ್ಪು ಹಣ ನಿಯಂತ್ರಿಸುವಲ್ಲಿನ ಮೊದಲ ಹೆಜ್ಜೆ. ಇನ್ನೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿತ್ತು. ಆ ದೊಡ್ಡ ನಿರ್ಧಾರ ಅಂದರೆ ಕಪ್ಪು ಹಣ ನಿಯಂತ್ರಣಕ್ಕೆ ಸ್ಥಿರಾಸ್ತಿ ಮೇಲೆ ಕಣ್ಣಿರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರೊಬ್ಬರು ಇಶಾರೆ ನೀಡಿದ್ದಾರೆ.
ಅದರ ಪ್ರಕಾರ ಆಸ್ತಿ ವ್ಯವಹಾರಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡುವ ಪ್ರಸ್ತಾವದ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಈ ರೀತಿ ಆಧಾರ್ ಜೋಡಣೆ ಮಾಡುವುದರಿಂದ ಬೇನಾಮಿ ಆಸ್ತಿ ಗುರುತಿಸುವುದು ಸರಳವಾಗುತ್ತದೆ ಎಂದು ಹೇಳಿದ್ದಾರೆ.
ಜಗತ್ತಿನಲ್ಲೇ ನಗದು ಸಂಪೂರ್ಣವಾಗಿ ಬಳಸದ ಆರ್ಥಿಕತೆ ಯಾವುದೂ ಇಲ್ಲ. ಆದರೆ ತೀರಾ ದೊಡ್ಡ ಮೊತ್ತದ ವ್ಯವಹಾರವೂ ನಗದು ಮೂಲಕವೇ ಆಗಬೇಕು ಅಂತೇನೂ ಇಲ್ಲ. ಪಾರದರ್ಶಕ ಹಾಗೂ ಕಡಿಮೆ ಪ್ರಮಾಣದ ನಗದು ವ್ಯವಹಾರದ ಕಡೆಗೆ ಸಾಗುವುದು ನಮ್ಮ ಉದ್ದೇಶ ಎಂದು ಕೇಂದ್ರ್ ಸಚಿವ ಪುರಿ ಹೇಳಿದ್ದಾರೆ.

ಈಗಲೇ ಘೋಷಣೆ ಇಲ್ಲ
ಆಧಾರ್ ಜೋಡಣೆ ಮಾಡುವುದು ತುಂಬ ಒಳ್ಳೆ ಆಲೋಚನೆ. ಆದರೆ ಈ ಬಗ್ಗೆ ಏನನ್ನೂ ಘೋಷಣೆ ಮಾಡುವುದಿಲ್ಲ. ನಾವು ಈಗಾಗಲೇ ಬ್ಯಾಂಕ್ ಖಾತೆ ಸೇರಿದಂತೆ ಇತರ ಕಡೆಗಳಲ್ಲಿ ಆಧಾರ್ ಜೋಡಣೆ ಕಡ್ಡಾಯ ಮಾಡಿದ್ದೇವೆ. ಆಸ್ತಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೂಡ ಇದನ್ನು ವಿಸ್ತರಿಸಬಹುದು ಎಂದಿದ್ದಾರೆ.

ಬೇನಾಮಿ ಆಸ್ತಿ ಮೇಲಿನ ದಾಳಿಯ ಭಾಗ
ಬೇನಾಮಿ ಆಸ್ತಿಗಳ ಮೇಲೆ ದಾಳಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಈಗಾಗಲೇ ಸೂಚನೆ ನೀಡಿದ್ದಾರೆ. ಆಧಾರ್ ಜೋಡಣೆ ಆ ಕಾರ್ಯಾಚರಣೆಯ ಒಂದು ಭಾಗವಾಗಬಹುದು.

ಪಾರದರ್ಶಕತೆ ತರುವ ಯತ್ನ
ಆಧಾರ್ ಹಾಗೂ ಆಸ್ತಿ ಜೋಡಣೆಯಿಂದ ಆರ್ಥಿಕತೆಯಲ್ಲಿ ಪಾರದರ್ಶಕತೆ ಬರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುರಿ, ಖಂಡಿತಾ ಆಗುತ್ತದೆ. ಈ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ ಎಂದಿದ್ದಾರೆ.

ಆಸ್ತಿ ವ್ಯವಹಾರದ ಮೇಲೆ ಕಣ್ಗಾವಲು
ಇಬ್ಬರು ವ್ಯಕ್ತಿಗಳ ಮಧ್ಯದ ವ್ಯವಹಾರ ಖಂಡಿತಾ ಪಾರದರ್ಶಕವಾಗಿರುತ್ತದೆ. ಆದರೆ ದೊಡ್ಡ ಮೊತ್ತದ ಆಸ್ತಿ ವ್ಯವಹಾರ ಹಾಗೂ ವಿಮಾನ ಪ್ರಯಾಣದ ಟಿಕೆಟ್ ಗಳ ಮೇಲೆ ಕಣ್ಗಾವಲು ಇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications