• search

ತಾಯಿಯ ಶವವನ್ನು ಬೈಕ್‌ನಲ್ಲಿ ಕಟ್ಟಿ ಸಾಗಿಸಿದ ಮಗ: ವೈರಲ್ ವಿಡಿಯೋ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಟಿಕಾಮ್‌ಗಡ, ಜುಲೈ 11: ವಾಹನ ಸೌಲಭ್ಯ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ ಕಾರಣಕ್ಕೆ ತಾಯಿಯ ಮೃತದೇಹವನ್ನು ಮಗ ತನ್ನ ಬೈಕ್‌ನಲ್ಲಿಯೇ ಕಟ್ಟಿಕೊಂಡು ಸಾಗಿಸಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಟಿಕಾಮ್‌ಗಡ ಜಿಲ್ಲೆಯಲ್ಲಿ ನಡೆದಿದೆ.

    ಮಸ್ತಾಪುರ ಗ್ರಾಮದ ಕುನ್ವಾರಿ ಭಾಯಿ ಎಂಬಾಕೆ ಭಾನುವಾರ ಹಾವು ಕಡಿತಕ್ಕೆ ಒಳಗಾಗಿದ್ದರು. ಸಮೀಪದ ಮೋಹನಗಡದಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

    ತಂದೆಯ ಶವವನ್ನು ಸೈಕಲ್ ನಲ್ಲಿ ಕೊಂಡೊಯ್ದ ಮಕ್ಕಳು!

    ಅಲ್ಲಿಂದ 35 ಕಿ.ಮೀ. ದೂರದಲ್ಲಿರುವ ಟಿಕಾಮ್‌ಗಡ ಜಿಲ್ಲಾಕೇಂದ್ರಕ್ಕೆ ಶವವನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಸ್ಥಳೀಯ ಪೊಲೀಸರು ಆಕೆಯ ಮಗ ರಾಜೇಶ್‌ಗೆ ಸೂಚಿಸಿದ್ದರು.

    man tied mother body to bike, drives it for postmortem

    ಆದರೆ, ಮಾನವೀಯತೆ ಮರೆತ ಆಸ್ಪತ್ರೆ ಅಧಿಕಾರಿಗಳು ಆತನಿಗೆ ಮೃತದೇಹ ಸಾಗಿಸಲು ವಾಹನ ನೀಡಲು ನಿರಾಕರಿಸಿದರು.

    ಇದರಿಂದ ಸಂಬಂಧಿ ನೆರವಿನಿಂದ ರಾಜೇಶ್ ತಾಯಿಯ ಮೃತದೇಹವನ್ನು ಬೈಕ್‌ಗೆ ಕಟ್ಟಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾನೆ.

    ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಆತನ ಹಳ್ಳಿಗೆ ಸಾಗಿಸಲು ಜಿಲ್ಲಾಸ್ಪತ್ರೆ ವಾಹನ ಸೌಲಭ್ಯ ಒದಗಿಸಿತ್ತು.

    ತಾಯಿಯನ್ನು ಉಳಿಸಿಕೊಳ್ಳಲು ಮೊದಲು ಆಸ್ಪತ್ರೆಗೆ ಕರೆದುತರುವ ಬದಲು ಆತ ದೇವಸ್ಥಾನಕ್ಕೆ ಸಾಗಿಸಿದ್ದ. ಬಳಿಕ ಆಸ್ಪತ್ರೆಗೆ ಕರೆದುತಂದಿದ್ದ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    A man tied his mother's dead body on a motorcycle to take it for postmortem, after hospital administration denies a hearse.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more