ಪಟಾಕಿ ಸಿಡಿಸುವುದನ್ನು ತಡೆದಿದ್ದಕ್ಕೆ ಹೊಡೆದು ಕೊಂದ ಕ್ರೂರಿಗಳು
Recommended Video

ನಲ್ಬರಿ, ಜುಲೈ, 12: ಪಟಾಕಿ ಸಿಡಿಸುವುದನ್ನು ವಿರೋಧಿಸಿದಕ್ಕೆ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಥಳಿಸಿ ಕೊಂದ ಘಟನೆ ಅಸ್ಸಾಂನ ನಲ್ಬರಿಯಲ್ಲಿ ಬುಧವಾರ ನಡೆದಿದೆ.
ಘುರತ್ತಲ್ ಎಂಬಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ವೇಳೆ ಪಟಾಕಿ ಹೊಡೆಯುವುದನ್ನು ತಡೆದಿದ್ದಕ್ಕೆ ಮನಬಂದಂತೆ ಹೊಡೆದು ಕೊಲ್ಲಲಾಗಿದೆ.
ತಮ್ಮ ಮನೆಯ ಸಮೀಪ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಟಾಕಿ ಹೊಡೆಯುತ್ತಿದ್ದ ಮಗುವೊಂದನ್ನು ಜತಿನ್ ದಾಸ್ ಎಂಬುವವರು ತಡೆದಿದ್ದರು.

ಈ ವೇಳೆ ಅವರು ಮಗುವಿಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಮದುವೆ ಸಮಾರಂಭದಲ್ಲಿ ಹಾಜರಿದ್ದ ಜನರು ಜತಿನ್ ದಾಸ್ ಅವರ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ಅವರು ಮೃತಪಟ್ಟಿದ್ದಾರೆ.
ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯರು ಮದುವೆ ಸ್ಥಳದ ಮೇಲೆ ದಾಳಿ ಮಾಡಿ ಅಲಂಕಾರ, ಮದುವೆ ಮಂಟಪಗಳನ್ನು ಧ್ವಂಸ ಮಾಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಧು ಮತ್ತು ವರನ ಕುಟುಂಬವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications