ಟಿಸಿಎಸ್‌ನ ಕೆಲಸ ಬಿಟ್ಟು ಅಕ್ಕಿ ವ್ಯಾಪಾರ ಆರಂಭಿಸಿದ ವ್ಯಕ್ತಿ : ಉದ್ಯಮದಿಂದ ಸಂಪಾದಿಸುತ್ತಿರುವುದು 25 ಲಕ್ಷ ರೂ
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ನಿರ್ವಹಣಾ ಅಧ್ಯಯನಗಳನ್ನು ಪೂರ್ಣಗೊಳಿಸಿದ ನಂತರ ಪ್ರಮುಖ ಕಂಪನಿಯಲ್ಲಿ ಕೆಲಸ ಪಡೆಯುವ ಕನಸು ಕಾಣುತ್ತಾರೆ. ವಿಶೇಷವಾಗಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಸಮಯದಲ್ಲಿ ಟಿಸಿಎಸ್‌ನಂತಹ ಕಂಪನಿಯಿಂದ ಆಫರ್ ಬಂದರಂತೂ ಮುಗಿದೇ ಹೋಯಿತು. ಹಿಂದೆ ಮುಂದೆ ಯೋಚಿಸದೆ ಆ ಆಫರ್ ಅನ್ನು ಒಪ್ಪಿಕೊಂಡು ಬಿಡುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಇದಕ್ಕೆ ವಿರುದ್ಧವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂ X ನಲ್ಲಿನ ವೈರಲ್ ಪೋಸ್ಟ್ ಪ್ರಕಾರ, ಈ ಯುವಕ ಕಾರ್ಪೊರೇಟ್ ಉದ್ಯೋಗಕ್ಕಿಂತ ಅಕ್ಕಿ ವ್ಯವಹಾರಕ್ಕೆ ಆದ್ಯತೆ ನೀಡಿದ್ದಾನೆ. ಆರಂಭದಲ್ಲಿ, ಈ ಯುವಕನ ನಿರ್ಧಾರವನ್ನು ಎಲ್ಲರೂ ಸೇರಿ ಪ್ರಶ್ನಿಸಿದ್ದರಉ. ಆದರೆ, ಈಗ ಹುಡುಗನ ಅದೊಂದು ನಿರ್ಧಾರ ಆತನ ಜೀವನವನ್ನೇ ಬದಲಾಯಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಜನರು ಉದ್ಯೋಗ ಮತ್ತು ವ್ಯವಹಾರದ ನಡುವೆ ಹೋಲಿಕೆಗಳನ್ನು ಪ್ರಾರಂಭಿಸಿದ್ದಾರೆ.

ಟಿಸಿಎಸ್ ಆಫರ್ ಬಿಟ್ಟು ತನ್ನದೇ ದಾರಿ ಆರಿಸಿಕೊಂಡ ವ್ಯಕ್ತಿ
ಈ ವಿಷಯವನ್ನು ಅಂಕಿತ್ ಪಾಂಡೆ ಎನ್ನುವವರು ಶೇರ್ ಮಾಡಿದ್ದಾರೆ. ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಸಮಯದಲ್ಲಿ ಅವರ ಸ್ನೇಹಿತನೊಬ್ಬನಿಗೆ ಟಿಸಿಎಸ್‌ನಲ್ಲಿ ಕೆಲಸ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕೆಲಸ ಸಿಕ್ಕಿದಾಗ ಕುಟುಂಬ ಮತ್ತು ಪರಿಚಯಸ್ಥರು ಅದನ್ನು ಸುರಕ್ಷಿತ ಭವಿಷ್ಯವೆಂದು ಪರಿಗಣಿಸಿ ಕೆಲಸಕ್ಕೆ ಸೇರಿಕೊಳ್ಳುವುದೇ ಒಳ್ಳೆಯದು ಎನ್ನುವ ಸಲಹೆ ಕೂಡಾ ನೀಡಿದ್ದರಂತೆ. ಆದರೆ, ಕೆಲಸ ಸಿಕ್ಕಿದ ಹುಡುಗನ ಯೋಚನೆ ಬೇರೆಯೇ ಆಗಿತ್ತು. ಅವನು ಉದ್ಯೋಗವನ್ನು ಒಪ್ಪಿಕೊಳ್ಳುವ ಬದಲು ತನ್ನದೇ ಆದ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದನು. ಆರಂಭದಲ್ಲಿ, ಹುಡುಗನ ನಿರ್ಧಾರವನ್ನು ಟೀಕಿಸಿದವರೇ ಹೆಚ್ಚು. ಅನಾವಶ್ಯಕವಾಗಿ ಜೀವನದ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರಿಂದ ನೇರವಾಗಿ ಖರೀದಿಸಲು ಯೋಜನೆ
ಈ ಪೋಸ್ಟ್ ಪ್ರಕಾರ, ಆ ಹುಡುಗ ಅಕ್ಕಿ ವ್ಯವಹಾರವನ್ನು ಆರಂಭಿಸಲು ನಿರ್ಧರಿಸಿದನು. ಹಳ್ಳಿ ಹಳ್ಳಿಗೆ ಹೋಗಿ ರೈತರಿಂದ ನೇರವಾಗಿ ಅಕ್ಕಿಯನ್ನು ಖರೀದಿಸಲು ಪ್ರಾರಂಭಿಸಿದನು. ಇದಾದ ನಂತರ ರೈತರು ಮಧ್ಯವರ್ತಿಗಳ ಮೇಲಿನ ಅವಲಂಬನೆಯಿಂದ ತಪ್ಪಿಸಿಕೊಳ್ಳುವಂತಾಯಿತು. ರೈತರಿಂದ ಅಕ್ಕಿಯನ್ನು ಖರೀದಿಸಿದ ನಂತರ ಅಕ್ಕಿಯನ್ನು ಸ್ವಚ್ಛಗೊಳಿಸಿ, ಪ್ಯಾಕ್ ಮಾಡಿ ತನ್ನದೇ ಆದ ಬ್ರಾಂಡ್ ಅನ್ನು ಹೊರ ತಂದನು. ಅವನು ಕ್ರಮೇಣ ತನ್ನ ಬ್ರಾಂಡ್‌ನ ಅಕ್ಕಿಯನ್ನು ಬೇರೆ ಬೇರೆ ಪ್ರದೇಶಗಳಿಗೆ ಪೂರೈಸುವುಕ್ಕೆ ಮುಂದಾಗುತ್ತಾನೆ.
ಸುಮಾರು 200 ಅಂಗಡಿಗಳಿಗೆ ವಿಸ್ತರಿಸಿದ ನೆಟ್‌ವರ್ಕ್
ಇಂದು ಈ ಅಕ್ಕಿ ವ್ಯಾಪಾರದ ನೆಟ್‌ವರ್ಕ್ ಸುಮಾರು 200 ಚಿಲ್ಲರೆ ಅಂಗಡಿಗಳಿಗೆ ವಿಸ್ತರಿಸಿದೆಯಂತೆ. ಈ ಅಂಗಡಿಗಳು ನಿಯಮಿತವಾಗಿ ಮಾಸಿಕ ಅಕ್ಕಿ ಸರಬರಾಜು ಮಾಡುತ್ತವೆ. ರೈತರಿಂದ ಖರೀದಿಯಿಂದ ಹಿಡಿದು ಪ್ಯಾಕೇಜಿಂಗ್ ಮತ್ತು ಅಂಗಡಿಗಳಿಗೆ ತಲುಪಿಸುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ನಿರ್ವಹಿಸುತ್ತಿದ್ದರು. ಇದು ಅವರ ವ್ಯವಹಾರದಲ್ಲಿ ಸ್ಥಿರ ಬೆಳವಣಿಗೆಗೆ ಕಾರಣವಾಗಿದೆ.
ಈ ಪೋಸ್ಟ್ ವ್ಯವಹಾರದ ಸಂಪೂರ್ಣ ವಿವರವನ್ನು ಸಹ ಹಂಚಿಕೊಳ್ಳುತ್ತದೆ. ರೈತರಿಂದ ಪ್ರತಿ ಕೆಜಿಗೆ ಸುಮಾರು 35 ರೂ.ಗೆ ಅಕ್ಕಿಯನ್ನು ಖರೀದಿಸಲಾಗುತ್ತದೆ. ಪ್ಯಾಕಿಂಗ್ ವೆಚ್ಚ ಪ್ರತಿ ಕೆಜಿಗೆ 3 ರೂ. ಮತ್ತು ಸಾಗಣೆ ವೆಚ್ಚವು ಸುಮಾರು 2 ರೂ. ಆಗಿದೆ. ಇದರರ್ಥ ಒಟ್ಟು ವೆಚ್ಚವು ಪ್ರತಿ ಕೆಜಿಗೆ ಸುಮಾರು 40 ರೂ.ಆಗುತ್ತದೆ. ಈ ಪ್ಯಾಕ್ ಮಾಡಿದ ಅಕ್ಕಿಯನ್ನು ನಂತರ ಅಂಗಡಿಯವರಿಗೆ ಪ್ರತಿ ಕೆಜಿಗೆ 50 ರೂ.ಗೆ ಮಾರಾಟ ಮಾಡಲಾಗುತ್ತದೆ. ನಂತರ ಅಂಗಡಿಯವರು ಅದನ್ನು ಗ್ರಾಹಕರಿಗೆ ಪ್ರತಿ ಕೆಜಿಗೆ ಸುಮಾರು 55 ರಿಂದ 57 ರೂ.ಗೆ ಮಾರಾಟ ಮಾಡುತ್ತಾರೆ. ಹೀಗಾಗಿ, ಪ್ರತಿ ಕೆಜಿಯಲ್ಲಿ ಸಿಗುವ ಲಾಭ ಸುಮಾರು 10 ರೂ.
ಪ್ರತಿ ತಿಂಗಳು ಸಾವಿರಾರು ಕಿಲೋ ಅಕ್ಕಿ ಸರಬರಾಜು
ವೈರಲ್ ಪೋಸ್ಟ್ ಪ್ರಕಾರ, ಆ ಹುಡುಗ ಪ್ರತಿ ತಿಂಗಳು ಸುಮಾರು 200 ಕ್ವಿಂಟಾಲ್ ಅಕ್ಕಿಯನ್ನು ಮಾರುಕಟ್ಟೆಗೆ ಪೂರೈಸುತ್ತಾನೆ. ಇದರ ಆಧಾರದ ಮೇಲೆ, ಅವನ ವಾರ್ಷಿಕ ಆದಾಯ ಸುಮಾರು 25 ಲಕ್ಷ ಎಂದು ಅಂದಾಜಿಸಲಾಗಿದೆ. ಆದರೆ, ಈ ಅಂಕಿಅಂಶಗಳನ್ನು ಯಾವುದೇ ಸ್ವತಂತ್ರ ಮೂಲವು ದೃಢೀಕರಿಸಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಆರಂಭ
ಈ ಪೋಸ್ಟ್ ವೈರಲ್ ಆದ ನಂತರ, ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವವರು ಮಾತ್ರ ಹೆಚ್ಚಿನ ಪ್ರತಿಫಲವನ್ನು ಪಡೆಯುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಈ ಕೆಲಸ ಎಲ್ಲರಿಂದಲೂ ಸುಲಭವಲ್ಲ ಎಂದವರೂ ಅನೇಕರು. ಇಲ್ಲಿ ಹಣವನ್ನು ಹೂಡಿಕೆ ಮಾಡುವುದರ ಜೊತೆಗೆ, ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು, ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದಕ್ಕೆ ಸ್ಥಿರವಾದ ಕಠಿಣ ಪರಿಶ್ರಮದ ಅಗತ್ಯವಿದೆ.
ಉದ್ಯೋಗ ಮತ್ತು ವ್ಯವಹಾರದ ಹೋಲಿಕೆಯ ಕುರಿತು ಚರ್ಚೆ
ಈ ಪೋಸ್ಟ್ ಮತ್ತೊಮ್ಮೆ ಉದ್ಯೋಗಗಳು ಮತ್ತು ವ್ಯವಹಾರಗಳ ಕುರಿತ ಚರ್ಚೆಯನ್ನು ಹುಟ್ಟುಹಾಕಿದೆ. ಉದ್ಯೋಗಗಳು ಸ್ಥಿರ ಮಾಸಿಕ ವೇತನವನ್ನು ನೀಡುತ್ತವೆ, ಇದಕ್ಕೆ ಬದಲಾಗಿ ವ್ಯವಹಾರಗಳು ಹೆಚ್ಚಿನ ಅಪಾಯವನ್ನು ಒಳಗೊಂಡಿರುತ್ತವೆ ಎನ್ನುವುದು ಕೆಲವರ ವಾದ.
My friend got a placement at TCS.
— Ankit Pandey (@iamankitpande) July 24, 2026
He rejected it.
Everyone said he was making the biggest mistake of his life.
Today, he earns around ₹25 lakh a year selling rice.
He buys rice directly from farmers across multiple villages and states, cleans it, packs it under his own… pic.twitter.com/93Ih45YckG
ಯಶಸ್ಸು ಕೇವಲ ಕೆಲಸದಿಂದಲೇ ಬರುವುದಿಲ್ಲ
ಈ ಕಥೆ ನಿಜವೋ ಅಥವಾ ಕೇವಲ ವೈರಲ್ ಹೇಳಿಕೆಯೋ ಎನ್ನುವುದು ಪ್ರಶ್ನೆಯಾಗಿದೆ. ಇಂದಿಗೂ ಲಕ್ಷಾಂತರ ಯುವಕರು ಉತ್ತಮ ಉದ್ಯೋಗದ ಕನಸು ಕಾಣುತ್ತಾರೆ. ಆದರೆ ಅನೇಕರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು ಬಯಸುತ್ತಾರೆ. ಎರಡೂ ಮಾರ್ಗಗಳು ತಮ್ಮದೇ ಆದ ಸವಾಲುಗಳು ಮತ್ತು ಪ್ರಯೋಜನಗಳನ್ನು ಹೊಂದಿವೆ. ಉದ್ಯೋಗವು ಭದ್ರತೆಯನ್ನು ನೀಡುತ್ತದೆ. ಆದರೆ ವ್ಯವಹಾರದಲ್ಲಿ ಹೆಚ್ಚಿನ ಅಪಾಯವನ್ನು ಒಳಗೊಂಡಿರುತ್ತದೆ.
ಪ್ರಸ್ತುತ, ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಹೇಳಿಕೆಗಳನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದರೆ, ಈ ಕಥೆಯು ಜನರು ಸರಿಯಾದ ಯೋಜನೆ, ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಸಾಂಪ್ರದಾಯಿಕ ಮಾರ್ಗಗಳಿಂದ ವಿಮುಖರಾದಾಗಲೂ ಯಶಸ್ಸನ್ನು ಸಾಧಿಸಬಹುದು ಎಂದು ಪರಿಗಣಿಸುವಂತೆ ಮಾಡಿದೆ.


Click it and Unblock the Notifications
