ಮುಂಬೈ: ಮಹಿಳೆಯರ ಪ್ರತ್ಯೇಕ ರೈಲು ಕೋಚ್‌ಗೆ ಬಲವಂತವಾಗಿ ಪ್ರವೇಶಿಸಿದ ವ್ಯಕ್ತಿ: ಮುಂದೇನಾಯ್ತು ವಿಡಿಯೋ ನೋಡಿ..

ದೆಹಲಿ ಮೆಟ್ರೋ ಮತ್ತು ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಮುಂಬೈ ಲೋಕಲ್ ರೈಲಿನ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಡ್ರಗ್ಸ್ ಸೇವಿಸುತ್ತಿರುವ ದೃಶ್ಯ ಕಂಡುಬಂದಿದೆ.

ಆ ವ್ಯಕ್ತಿ ಮಹಿಳೆಯರ ಪ್ರತ್ಯೇಕ ರೈಲು ಕೋಚ್‌ಗೆ ಬಲವಂತವಾಗಿ ಪ್ರವೇಶಿಸಿದನು. ನಂತರ ಫುಟ್ಬೋರ್ಡ್ನಲ್ಲಿ ಡ್ರಗ್ಸ್ ಸೇವಿಸಿದ್ದಾನೆ. ಈ ವೇಳೆ ಮಹಿಳೆಯರು ಅತ್ಯಂತ ಶಾಂತಿಯುತವಾಗಿ ಕುಳಿತು ಮೂಗು ಮತ್ತು ಬಾಯಿಗೆ ಕರವಸ್ತ್ರ ಮುಚ್ಚಿಕೊಂಡಿರುವುದು ಕಂಡುಬಂದಿದೆ. ಈ ಘಟನೆಯ ವಿಡಿಯೋ ಕೆಲವೇ ಸಮಯದಲ್ಲಿ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು ಜನರು ಇದನ್ನು ಖಂಡಿಸುತ್ತಿದ್ದಾರೆ. ರೈಲಿನಲ್ಲಿದ್ದ ಮತ್ತೋರ್ವವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಅವರ ಟ್ವೀಟ್ ಪ್ರಕಾರ ಘಟನೆ ಸೆಪ್ಟೆಂಬರ್ 1ರಂದು ನಡೆದಿದೆ.

Maharashtra

ಟ್ವಿಟರ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೋ 'ಸಿಸ್ಟಂ ಬದಲಾಗಬೇಕು' ಎಂಬ ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಇದು ಅಧಿಕಾರಿಗಳ ಗಮನವನ್ನೂ ಸೆಳೆದಿದೆ. ವಿಡಿಯೋದ ಶೀರ್ಷಿಕೆಯಲ್ಲಿ ರೈಲ್ವೆ ಸಚಿವಾಲಯ, ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರು ಈ ದೃಶ್ಯವನ್ನು ಗಮನಿಸಿ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಈ ಪೋಸ್ಟ್ ಆನ್‌ಲೈನ್ ಇಂಟರ್ನೆಟ್ ಬಳಕೆದಾರರನ್ನು ಮಾತ್ರವಲ್ಲದೆ ರಾಜಕಾರಣಿಗಳು ಮತ್ತು ಪೊಲೀಸರ ಗಮನ ಸೆಳೆದಿದೆ. ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ, ಸೆಂಟ್ರಲ್ ರೈಲ್ವೆಯ ಅಧಿಕೃತ ಹ್ಯಾಂಡಲ್ ತಕ್ಷಣವೇ ಈ ವಿಷಯವನ್ನು ಗಮನಿಸುವಂತೆ ರೈಲ್ವೆ ವ್ಯವಸ್ಥಾಪಕರನ್ನು ವಿನಂತಿಸಿದೆ. ಇದರೊಂದಿಗೆ ಮುಂಬೈ ಪೊಲೀಸರು ಕೂಡ ಘಟನೆಯ ತನಿಖೆ ಆರಂಭಿಸಿ ರೈಲ್ವೇ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಅಧಿಕಾರಿಗಳ ಹೊರತಾಗಿ ಲೋಕಸಭೆ ಸಂಸದೆ ಮತ್ತು ಎನ್‌ಸಿಪಿ ಹಂಗಾಮಿ ಅಧ್ಯಕ್ಷೆ ಸುಪ್ರಿಯಾ ಸುಳೆ ಕೂಡ ವೈರಲ್ ವೀಡಿಯೊಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಮರಾಠಿಯಲ್ಲಿ ಹೀಗೆ ಬರೆದಿದ್ದಾರೆ, 'ಈ ವ್ಯಕ್ತಿ ಮಹಿಳೆಯರ ಪ್ರತ್ಯೇಕ ಕೋಚ್‌ಗೆ ಪ್ರವೇಶಿಸಿ ಮಾದಕ ದ್ರವ್ಯ ಸೇವನೆ ಮಾಡಿರುವುದು ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯುವಕರು ಈ ವಸ್ತುಗಳೊಂದಿಗೆ ಸುಲಭವಾಗಿ ಪ್ರವೇಶ ಮಾಡುವುದು ಖಂಡನೀಯ' ಎಂದು ಬರೆದಿದ್ದಾರೆ.

ಇಂತಹ ಚಟುವಟಿಕೆಗಳನ್ನು ಪರಿಹರಿಸಲು ರೈಲ್ವೆ ಭದ್ರತೆ ಮತ್ತು ಮುಂಬೈ ಪೊಲೀಸರು ಪರಿಣಾಮಕಾರಿಯಾಗಿ ಸಹಕರಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು. ರೈಲ್ವೆ ಸಚಿವರು ಮತ್ತು ಮಹಾರಾಷ್ಟ್ರ ಗೃಹ ಸಚಿವರು ಈ ವಿಡಿಯೋವನ್ನು ಗಮನಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+