ಉತ್ತರ ಪ್ರದೇಶದಲ್ಲಿ ಕಾಲುವೆಗುರುಳಿದ ಬಸ್ : ಒಂದು ಸಾವು
ಸಂಬಲ್ (ಉತ್ತರ ಪ್ರದೇಶ), ಜೂನ್ 8: 12 ಕ್ಕೂ ಹೆಚ್ಚು ಜನರನ್ನು ಕೊಂಡೊಯ್ಯುತ್ತಿದ್ದ ಬಸ್ ವೊಂದು ಕಾಳುವೆಗೆ ಉರುಳಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸಂಬಲ್ ಎಂಬಲ್ಲಿ ನಡೆದಿದೆ.
ಒಬ್ಬ ವ್ಯಕ್ತಿ ಮೃತಪಟ್ಟರೆ ಉಳಿದ ಪ್ರಯಾಣಿಕರೆಲ್ಲರರೂ ಗಂಭೀರ ಗಾಯಗೊಂಡಿದ್ದು, ಹತ್ತಿರದದ ಆಸ್ಪತ್ರೆಗೆ ಸೇರಿಸಲಾಗಿದೆ. ಮನೋತಾ ಸೇತುವೆಯ ಬಳಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.[ಉತ್ತರ ಪ್ರದೇಶ: ಲಾರಿ-ಬಸ್ ನಡುವೆ ಡಿಕ್ಕಿ, 22 ಜನರು ಸ್ಥಳದಲ್ಲಿಯೇ ಸಾವು]

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಜೂನ್ 5 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 22 ಪ್ರಯಾಣಿಕರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications