ಉತ್ತರ ಪ್ರದೇಶ: ಲಾರಿ-ಬಸ್ ನಡುವೆ ಡಿಕ್ಕಿ, 22 ಜನರು ಸ್ಥಳದಲ್ಲಿಯೇ ಸಾವು
ಬರೇಲಿ (ಉತ್ತರ ಪ್ರದೇಶ), ಜೂನ್ 05 : ಇಲ್ಲಿನ ಬರೇಲಿ ಬಳಿ ಲಾರಿ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 22 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸೋಮವಾರ ಮಧ್ಯರಾತ್ರಿ 01 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 24 ಬರೇಲಿ ಬಳಿ ಲಾರಿ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬಳಿಕ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ 22 ಜನರು ಸ್ಥಳದಲ್ಲಿಯೇ ಸಾವನ್ನಿಪ್ಪಿದ್ದು, 17 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಕೆಲ ಪ್ರಯಾಣಿಕರು ಕಿಟಕಿಯಿಂದ ಹೊರ ಬರಲು ಪ್ರಯತ್ನಿಸಿದರು. ಇನ್ನು ನಿದ್ರೆಗೆ ಜಾರಿದ್ದ ಕೆಲವರು ಬೆಂಕಿಗೆ ಆಹುತಿಯಾಗಿದ್ದಾರೆ.
17 dead in a collision between truck and a bus in Uttar Pradesh's Bareilly; both the vehicles caught fire on collision pic.twitter.com/5KgpW8lMAQ
— ANI UP (@ANINewsUP) June 5, 2017












Click it and Unblock the Notifications