ನಾಗ್ಪುರ: ಗೋಮಾಂಸ ಸಾಗಣೆ ಆರೋಪ, ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

Posted By:
Subscribe to Oneindia Kannada

ನಾಗ್ಪುರ, ಜುಲೈ 13 : ದೇಶದ ವಿವಿಧೆಡೆ ಗೋರಕ್ಷಣೆ ಹೆಸರಿನಲ್ಲಿ ದಾಳಿಗಳು ನಡೆಯುತ್ತಿರುವಂತೆಯೇ, ಗೋ ಭಕ್ತಿ ಹೆಸರಲ್ಲಿ ಜನರ ಹತ್ಯೆಯನ್ನು ಒಪ್ಪಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದರೂ ಸಹ ಗೋ ಸಂಕರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಅಲ್ಲಲ್ಲಿ ಕೊಲೆ ಹಾಗೂ ಹಿಂಸಾಚಾರಗಳು ನಡೆಯುತ್ತಲೇ ಇವೆ. ಇದಕ್ಕೆ ನಿದರ್ಶನ ಇಲ್ಲಿದೆ.

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯೊಬ್ಬರ ಮೂರ್ನಾಲ್ಕು ಮಂದಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಸಮೀಪದ ಭಾರ್ಸಿಂಗಿ ಎಂಬಲ್ಲಿ ಸಲೀಮ್ ಶಾ ಎಂಬುವರ ಮೇಲೆ ಬುಧವಾರ ಹಲ್ಲೆ ನಡೆದಿದ್ದು, ಹಲ್ಲೆಯ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಜಾರ್ಖಂಡ್: ಹಸು ಸತ್ತಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಜನ

Man beaten up in Nagpur for allegedly carrying beef, four arrested

ಸಲೀಮ್ ಅವರನ್ನು ಕೆಳಗೆ ತಳ್ಳಿ ಮೂರ್ನಾಲ್ಕು ಮಂದಿ ಕಾಲಿನಿಂದ ಒದ್ದಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. 'ನಾನು ಮಾಂಸ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಅದು ಗೋಮಾಂಸ ಆಗಿರಲಿಲ್ಲ. ಈ ವಿಷಯವನ್ನು ಆ ಗುಂಪಿನಲ್ಲಿದ್ದವರಿಗೆ ಎಷ್ಟು ಹೇಳಿದರೂ ಅವರು ಅದನ್ನು ಕೇಳಿಸಿಕೊಳ್ಳದೆ ನನ್ನ ಮೇಲೆ ಹಲ್ಲೆ ನಡೆಸಿದರು' ಎಂದು ಸಲೀಮ್ ತಿಳಿಸಿದ್ದಾರೆ.

ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಲೀಮ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. 'ಸಲೀಮ್ ತೆಗೆದುಕೊಂಡು ಹೋಗುತ್ತಿದ್ದ ಮಾಂಸವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man was beaten up by locals in Nagpur's Bharsingi area on suspicion of carrying beef. The incident reportedly took place on Wednesday (July 12).
Please Wait while comments are loading...