ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಗೆ ನ್ಯಾಯಾಂಗ ಬಂಧನ

ತಿರುವನಂತಪುರಂ, ಜುಲೈ 11: ದಕ್ಷಿಣ ಭಾರತದ ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸೂಪರ್ ಸ್ಟಾರ್ ದಿಲೀಪ್ ಸೋಮವಾರ ಬಂಧಿತರಾಗಿದ್ದರು. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಿಲೀಪ್ ರನ್ನು ಸೋಮವಾರ ಸಂಜೆ ಅಂಗಮಾಲೈ ನ ಮ್ಯಾಜಿಸ್ಟೇಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಮಂಗಳವಾರ ಬೆಳಿಗ್ಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Malayalam superstar Dileep remanded to judicial custody

ದಕ್ಷಿಣ ಭಾರತದ ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೊದಲಿನಿಂದಲೂ ದಿಲೀಪ್ ಹೆಸರು ಕೇಳಿ ಬಂದಿತ್ತು. ನಂತರ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಒಂದು ವಾರದ ಹಿಂದೆ ಅವರನ್ನು ಬರೋಬ್ಬರಿ 13 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಜತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ದಿಲೀಪ್ ಹೇಳಿದ್ದರು.

ಇದೀಗ ಸೋಮವಾರ ಮತ್ತೆ ವಿಚಾರಣೆಗೆ ಒಳಪಡಿಸಿ ಕೊನೆಗೆ ಬಂಧಿಸಲಾಗಿದೆ. ಕಿರುಕುಳ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪವನ್ನು ದಿಲೀಪ್ ಮೇಲೆ ಹೊರಿಸಲಾಗಿದೆ. ಪಲ್ಸರ್ ಸುನಿ ಜತೆ ದಿಲೀಪ್ ಇರುವ ಫೊಟೋವನ್ನು ಆಧಾರವಾಗಿಟ್ಟುಕೊಂಡು ಈ ಬಂಧನ ನಡೆಸಲಾಗಿದೆ.

ಈ ಹಿಂದೆ ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಪ್ರಕರಣದಲ್ಲಿ ಸಂಚು ನಡೆದಿದೆ ಎಂದು ಆರೋಪಿಸಿದ್ದರು. ಇನ್ನು ವಿಚಾರಣೆ ವೇಳೆಯೂ ಪಲ್ಸರ್ ಸುನಿ ಹಾಗೂ ಇತರ ಆರೋಪಿಗಳು ದಿಲೀಪ್ ಪಾತ್ರವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಫೆಬ್ರವರಿಯಲ್ಲಿ ನಡೆದ ಹೈಪ್ರೊಫೈಲ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ಚಿತ್ರ ನಟಿಯನ್ನು ಆಕೆಯದೇ ಕಾರಿನಲ್ಲಿ ಅಪಹರಣ ನಡೆಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+