ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಯರ ಮುಂದೆ ನಗ್ನತೆ ಪ್ರದರ್ಶನ: ಮಲಯಾಳಂ ನಟನ ವಿರುದ್ಧ ಪ್ರಕರಣ

|
Google Oneindia Kannada News

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಇಬ್ಬರು ಶಾಲಾ ಬಾಲಕಿಯರ ಮುಂದೆ ಅಸಭ್ಯ ವರ್ತನೆ ಆರೋಪದ ಮೇಲೆ ಮಲಯಾಳಂ ಚಲನಚಿತ್ರ ನಟ ಶ್ರೀಜಿತ್ ರವಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ಮತ್ತು 14 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತರ ಬಾಲಕಿಯರ ಪೋಷಕರು ದೂರಿನ ಆಧಾರದ ಮೇಲೆ ತ್ರಿಶೂರ್ ಪಶ್ಚಿಮ ಪೊಲೀಸರು ಶ್ರೀಜಿತ್ (46) ಎಂಬಾತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಜುಲೈ 4ರಂದು ಸೋಮವಾರ ತ್ರಿಶೂರ್‌ನ ಅಯ್ಯಂತೋಲ್ ಪ್ರದೇಶದ ಎಸ್‌ಎನ್ ಪಾರ್ಕ್‌ನಲ್ಲಿ ಕಪ್ಪು ಕಾರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮಕ್ಕಳ ಮುಂದೆ ನಗ್ನತೆಯನ್ನು ಪ್ರದರ್ಶಿಸಿದ್ದಾರೆ.

ತಮ್ಮ ತನಿಖೆಯ ಸಮಯದಲ್ಲಿ, ಕಾರನ್ನು ಪತ್ತೆಹಚ್ಚಲು ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಆ ಕಾರು ಶ್ರೀಜಿತ್ ಅವರ ಮಾಲೀಕತ್ವವನ್ನು ಹೊಂದಿದೆ ಎಂದು ತಿಳಿದುಬಂದಿದೆ. "ದೂರು ನೀಡಿದ ಮಕ್ಕಳು ಆರೋಪಿಯನ್ನು ಗುರುತಿಸಿದ್ದಾರೆ. ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಹಿರಿಯ ನಟ ಟಿ ಜಿ ರವಿ ಅವರ ಪುತ್ರರಾಗಿರುವ ಶ್ರೀಜಿತ್ ವಿರುದ್ಧ ಪೋಕ್ಸೋ ಕಾಯ್ದೆಯ 11 (1) ಮತ್ತು 12 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಶ್ರೀಜಿತ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. 2016 ರಲ್ಲಿ ಸುಮಾರು 15 ಶಾಲೆಗೆ ಹೋಗುತ್ತಿದ್ದ ಹುಡುಗಿಯರ ಗುಂಪಿನ ಮುಂದೆ ಗುಪ್ತಾಂಗಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ಮತ್ತು ಅವರ ಫೋಟೋಗಳನ್ನು ತೆಗೆದ ಆರೋಪದ ಮೇಲೆ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂ ಪೊಲೀಸರು ಅವರನ್ನು ಬಂಧಿಸಿದ್ದರು. ಆಗ ಆರೋಪವನ್ನು ನಿರಾಕರಿಸಿದ್ದ ಶ್ರೀಜಿತ್‌ಗೆ ಜಾಮೀನು ನೀಡಲಾಗಿತ್ತು.

ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಪ್ರಸಿದ್ಧ SN ಪಾರ್ಕ್ ಕೇರಳದ ತ್ರಿಶೂರ್‌ನ ಆಯಂತೋಲ್ ಪ್ರದೇಶದಲ್ಲಿದೆ. ಈ ಉದ್ಯಾನವನಕ್ಕೆ ಸ್ಥಳೀಯ ಮಹಿಳೆಯರು, ಹುಡುಗಿಯರು ಮತ್ತು ಹುಡುಗರು ಬಂದು ಹೋಗುತ್ತಾರೆ. ರಾತ್ರಿ ಪಾರ್ಕ್ ಗೆ ಹೋದ ನಟ ಶ್ರೀಜಿತ್ ರವಿ ಗಲಾಟೆ ಮಾಡಿದ್ದಾರೆ. ಪಾರ್ಕ್ ಗೆ ಹೋದ ಖ್ಯಾತ ನಟ ಶ್ರೀಜಿತ್ ರವಿ ಕಾರಿನಿಂದ ಇಳಿದು ಪ್ಯಾಂಟ್ ಕಳಚಿದ್ದಾರೆ.

ಶ್ರೀಜಿತ್ ರವಿ ಪಾರ್ಕ್‌ನಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ನೋಡಿ ಸನ್ನೆ ಮಾಡಿದ್ದಾನೆ. ಶ್ರೀಜಿತ್ ರವಿ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅಲ್ಲಿಂದ ಕಾರಿನಲ್ಲಿ ಹೊರಟು ಹೋಗಿದ್ದಾನೆ. ಉದ್ಯಾನದಲ್ಲಿ ನಡೆದ ಘಟನೆಯನ್ನು ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದಾಗ ಪೋಷಕರು ಆಘಾತಕ್ಕೊಳಗಾಗಿದ್ದಾರೆ.

ಸಂತ್ರಸ್ತರು ಮಾಹಿತಿ ನೀಡಿದ ಬಳಿಕ ತ್ರಿಶೂರ್ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಎಸ್‌ಎನ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರು ನಟ ಶ್ರೀಜಿತ್ ರವಿ ಅವರ ಕಾರಿನ ಸಂಖ್ಯೆಯನ್ನು ಗುರುತಿಸಿದ್ದಾರೆ. ಪೊಲೀಸರು ಬೆಳಗ್ಗೆ ಶ್ರೀಜಿತ್ ರವಿ ಮನೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

2016ರಲ್ಲೂ ಅದನ್ನೇ ಮಾಡಿದ್ದ ಶ್ರೀಜಿತ್ ರವಿ

2016ರಲ್ಲೂ ಅದನ್ನೇ ಮಾಡಿದ್ದ ಶ್ರೀಜಿತ್ ರವಿ

ನಾನು ಪಾರ್ಕ್ ಬಳಿ ಅನುಚಿತವಾಗಿ ವರ್ತಿಸಿದ್ದು ನಿಜ, ಅನಾರೋಗ್ಯದಿಂದ ಬಳಲುತ್ತಿದ್ದು, ಆ ಸಂದರ್ಭದಲ್ಲಿ ಮದ್ಯ ಸೇವಿಸಿದ್ದರಿಂದ ಹೀಗೆ ಮಾಡಿದ್ದೇನೆ ಎಂದು ಮಲಯಾಳಂ ನಟ ಶ್ರೀಜಿತ್ ರವಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲಯಾಳಂನ ಜನಪ್ರಿಯ ನಟ ಶ್ರೀಜಿತ್ ರವಿ ವಿರುದ್ಧ ತ್ರಿಶೂರ್ ಪೊಲೀಸರು ಫೋಕ್ಸೋ ಕಾಯ್ದೆಯ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಶ್ರೀಜಿತ್ ರವಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧರಾಗಿದ್ದಾರೆ.

ಮಲಯಾಳಂ ನಟ ಶ್ರೀಜಿತ್ ರವಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. 2016ರಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯರ ಜತೆ ಅನುಚಿತವಾಗಿ ವರ್ತಿಸಿದ್ದ. ಆ ವೇಳೆ ಶ್ರೀಜಿತ್ ರವಿ ನಿಲ್ಲಿಸಿದ್ದ ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಫೋಕ್ಸೋ ಕಾಯ್ದೆಯಡಿ ಬಂಧನ

ಫೋಕ್ಸೋ ಕಾಯ್ದೆಯಡಿ ಬಂಧನ

2016ರಲ್ಲಿ ಶ್ರೀಜಿತ್ ರವಿ ಪರಾರಿಯಾಗಿದ್ದರು. ಜೊತೆಗೆ ಘಟನೆಯನ್ನು ಅಲ್ಲಗಳೆದಿದ್ದರು. ಆ ಸಂದರ್ಭದಲ್ಲಿ ಆ ಏರಿಯಾದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ನಾನು ಅದೇ ಏರಿಯಾದಲ್ಲಿ ಇದ್ದೇನೆ ಆದರೆ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ ಎಂದು ನುಣುಚಿಕೊಂಡರು. ಯಾರೋ ತಮ್ಮ ಕಾರನ್ನು ತೆಗೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದು, ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಜಿತ್ ರವಿ ಅಂದು ಹೇಳಿದ್ದರು.

ಅಂದು ದಾಖಲಾಗಿದ್ದ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಸಂತ್ರಸ್ತ ಶ್ರೀಜಿತ್ ರವಿ ಹೆಸರಿಲ್ಲ, ಕಪ್ಪು ಬಟ್ಟೆಯಲ್ಲಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮತ್ತೊಮ್ಮೆ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸಿರುವುದು ಸಂಚಲನ ಮೂಡಿಸಿದೆ.

ಪೋಷಕ ಮತ್ತು ಖಳನಾಯಕನ ಪಾತ್ರ ಮಾಡಿದ ರವಿ

ಪೋಷಕ ಮತ್ತು ಖಳನಾಯಕನ ಪಾತ್ರ ಮಾಡಿದ ರವಿ

ವಿದ್ಯಾರ್ಹತೆಯ ಮೂಲಕ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಶ್ರೀಜಿತ್ 2005 ರಿಂದ 60 ಕ್ಕೂ ಹೆಚ್ಚು ಮಲಯಾಳಂ ಚಲನಚಿತ್ರಗಳಲ್ಲಿ ಪೋಷಕ ಮತ್ತು ಖಳನಾಯಕನ ಪಾತ್ರಗಳಲ್ಲಿ ಹೆಸರು ಮಾಡಿದ್ದಾರೆ. ಅವರು ಒಂದೆರಡು ತಮಿಳು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪುಣ್ಯಲನ್ ಅಗರಬತ್ತೀಸ್, ಗೋಧಾ ಮತ್ತು ರಾಮಲೀಲಾ ಅವರ ಕೆಲವು ಗಮನಾರ್ಹ ಚಿತ್ರಗಳಾಗಿವೆ. ಕೆಲವು ಸಿನಿಮಾಗಳಲ್ಲಿ ತಮ್ಮ ತಂದೆ ಟಿ ಜಿ ರವಿಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ.

English summary
Malayalam film actor Sreejith Ravi was arrested on Thursday on charges of indecent behavior in front of two schoolgirls in Kerala's Thrissur district, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X