ಐಐಎಸ್‌ಸಿ ಓಪನ್ ಡೇ: ಮಾರ್ಚ್ 7ರಂದು ಬೆಂಗಳೂರಿನ ಸಿ.ವಿ.ರಾಮನ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ: ಪರ್ಯಾಯ ಮಾರ್ಗಗಳ ವಿವರ
ಬೆಂಗಳೂರು, ಮಾರ್ಚ್ 6: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಶನಿವಾರ (ಮಾರ್ಚ್ 7) 'ಓಪನ್ ಡೇ' ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಹಿನ್ನೆಲೆ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗಾದ್ರೆ, ಯಾವೆಲ್ಲಾ ಮರ್ಗಗಳಲ್ಲಿ ದಟ್ಟಣೆ ಇರಲಿದೆ ಹಾಗೂ ಪರ್ಯಾಯ ಮಾರ್ಗಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
'ಓಪನ್ ಡೇ' ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಈ ಸಮಯದಲ್ಲಿ ಹೆಚ್ಚು ಜನಸಂದಣಿ ಮತ್ತು ವಾಹನಗಳ ದಟ್ಟಣೆ ಇರಲಿದೆ. ಆದ್ದರಿಂದ ಸಾರ್ವಜನಿಕರು ಸಿ.ವಿ.ರಾಮನ್ ರಸ್ತೆಯಲ್ಲಿ ಸಂಚರಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವುದು ಸೂಕ್ತ ಎಂದು ತಿಳಿಸಲಾಗಿದೆ.

ವಿಶೇಷ ಶಟಲ್ ಬಸ್‌ಗಳ ವ್ಯವಸ್ಥೆ
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬರುವ ನಿರೀಕ್ಷೆಯಿದೆ. ಹೀಗಾಗಿ, ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪೊಲೀಸರು ಮನವಿ ಮಾಡಿದ್ದಾರೆ. ಶಾಲೆಗಳ ಬಸ್‌ಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು 'ಪ್ಯಾಲೇಸ್ ಗ್ರೌಂಡ್ಸ್'ನ ಕೃಷ್ಣ ವಿಹಾರ್ ಗೇಟ್ ನಂಬರ್ 1ರಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಐಐಎಸ್ಸಿ (IISc) ಆವರಣಕ್ಕೆ ಹೋಗಲು ವಿಶೇಷ ಶಟಲ್ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳನ್ನು ಐಐಎಸ್ಸಿ ಜಿಮ್ಖಾನಾ ಮೈದಾನದಲ್ಲಿ ನಿಲ್ಲಿಸಬಹುದು.
ಪರ್ಯಾಯ ಮಾರ್ಗಗಳು
ಯಶವಂತಪುರದಿಂದ ಬಳ್ಳಾರಿ ರಸ್ತೆಗೆ ಮತ್ತು ಬಳ್ಳಾರಿ ರಸ್ತೆಯಿಂದ ಯಶವಂತಪುರದ ಕಡೆಗೆ ಹೋಗುವವರು ಸಿ.ವಿ. ರಾಮನ್ ರಸ್ತೆಯನ್ನು ಬಳಸುವ ಬದಲು ಪರ್ಯಾಯ ದಾರಿಗಳನ್ನು ಬಳಕೆ ಮಾಡುವಂತೆ ಕೋರಲಾಗಿದೆ. '5K ಸೇಫ್-ಎ-ಥಾನ್' (ರಸ್ತೆ ಸುರಕ್ಷತಾ ಕಾರ್ಯಕ್ರಮ) ಹಿನ್ನೆಲೆಯಲ್ಲಿ ಕಸ್ತೂರಬಾ ರಸ್ತೆಯಲ್ಲಿ ನಾಳೆ ಅಂದರೆ ಶನಿವಾರ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ ಎಂದು ಕೂಡ ವರದಿ ಆಗಿದೆ.












Click it and Unblock the Notifications