ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿ ತಿರಸ್ಕೃತ
ಮಲಯಾಳಂ ನಟ ದಿಲೀಪ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರ. ಅರ್ಜಿಯನ್ನು ತಿರಸ್ಕೃತಗೊಳಿಸಿದ ಕೇರಳ ಹೈಕೋರ್ಟ್. ಜುಲೈ 24ರವರೆಗೆ ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದಿಲೀಪ್.
ತಿರುವನಂತಪುರಂ, ಜುಲೈ 15: ಪೊಲೀಸ್ ಬಂಧನದಲ್ಲಿರುವ ಮಲಯಾಳಂ ನಟ ದಿಲೀಪ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಶನಿವಾರ, ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ದಿಲೀಪ್ ಅರ್ಜಿಯನ್ನು ತಿರಸ್ಕಾರ ಮಾಡಿತಲ್ಲದೆ, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜು. 24ರವರೆಗೆ ವಿಸ್ತರಿಸಿದೆ.

ಮಲಯಾಳಂ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದ ಮೇರೆಗೆ ದಿಲೀಪ್ ಬಂಧನಕ್ಕೊಳಗಾಗಿದ್ದಾರೆ.












Click it and Unblock the Notifications