Apple IPhone: ಮೇಕ್ ಇನ್ ಇಂಡಿಯಾ ಕನಸಿಗೆ ಪುಷ್ಠಿ: ಭಾರತದಲ್ಲೇ ತಯಾರಾಗುತ್ತಿದೆ 7ರಲ್ಲಿ 1 ಐಫೋನ್
ಭಾರತದ ಮುಡಿಗೆ ಮತ್ತೊಂದು ಗರಿ ಸಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಕನಸಿಗೆ ಜೀವ ತುಂಬಿದ್ದರು. ಈ ಕನಸು ಈಗ ಅಂಬೆಗಾಲು ಇಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿಷ್ಠಿತ ಕಂಪನಿಗಳು ಭಾರತದಲ್ಲಿ ತಮ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿವೆ. ಅಲ್ಲದೆ ಹಲವು ಕಂಪನಿಗಳು ಭಾರತದಲ್ಲಿನ ಘಟಕಗಳಲ್ಲಿ ಕಾರ್ಯ ಆರಂಭಿಸಿವೆ.
ಮೇಕ್ ಇನ್ ಇಂಡಿಯಾ ಎಂಬ ಕನಸು ಇಷ್ಟು ವೇಗವಾಗಿ ಹಬ್ಬುತ್ತದೆ ಎಂದು ಯಾರು ಊಹಿಸರಲು ಸಾಧ್ಯವೇ ಇಲ್ಲ. ಪ್ರತಿಷ್ಠಿತ ಸ್ಮಾರ್ಟ್‌ಫೋನ್ ಕಂಪನಿ ಐ-ಫೋನ್ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಯಶಸ್ಸು ಕಂಡಿದೆ. ಈ ಘಟಕಕ್ಕೆ ಸಂಬಂಧಿಸಿದ ಸುದ್ದಿಯೊಂದು ಬಂದಿದ್ದು, ದೇಶವಾಸಿಗಳು ಹೆಮ್ಮೆ ಪಡುವಂತಾಗಿದೆ.

ವರದಿ ನೀಡಿದ್ದು ಯಾರು?
ಪ್ರಧಾನಿ ಮೋದಿ ಕಂಡ ಕನಸು ದಿಟ್ಟ ಹೆಜ್ಜೆಯಲ್ಲಿ ಸಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕದ ಆಪಲ್ ಕಂಪನಿ ಪ್ರತಿ ಏಳನೇ ಐಫೋನ್ ಭಾರತದಲ್ಲಿ ತಯಾರಾಗುತ್ತದೆ ಎಂದು ತಿಳಿಸಿತ್ತು. ಅಲ್ಲದೆ 2023 ಹಾಗೂ 24ರ ಸಾಲಿನಲ್ಲಿ ಆಪಲ್ ಭಾರತದಲ್ಲಿ 14 ಮಿಲಿಯನ್ ಡಾಲರ್ ಫೋನ್‌ಗಳನ್ನು ತಯಾರಿಸಿದೆ. ಭಾರತದಲ್ಲಿ ಆಪಲ್‌ನ ಐಫೋನ್ 12 ರಿಂದ 15ರ ವರೆಗೆ ವಿವಿಧ ಮಾಡೆಲ್‌ಗಳನ್ನು ತಯಾರಿಸಲಾಗುತ್ತಿದೆ.
ಭರತದಲ್ಲಿರುವ ಐಫೋನ್ ಘಟಕವು ಕಳೆದ ಹಣಕಾಸಿನ ವರ್ಷದಲ್ಲಿ 14 ಮಿಲಿಯನ್ ಡಾಲರ್ ಬೆಲೆಯ ಫೋನ್‌ಗಳನ್ನು ಅಸೆಂಬಲ್ ಮಾಡಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಬುಧವಾರ ವರದಿ ಮಾಡಿದೆ. ಈ ವಿಷಯದಲ್ಲಿ ತಜ್ಞರನ್ನು ಉಲ್ಲೇಖಿಸಿ, ವಿಶ್ವದ ಆಪಲ್ ಉತ್ಪಾದಿಸುವ ಎಲ್ಲಾ ಐಫೋನ್‌ಗಳಲ್ಲಿ ಶೇಕಡಾ 14 ರಷ್ಟು ಭಾರತದಲ್ಲಿ ಮಾತ್ರ ತಯಾರಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಂದರೆ ಆಪಲ್‌ನ ಪ್ರತಿ 7 ನೇ ಐಫೋನ್ ಅನ್ನು ಇಲ್ಲಿ ತಯಾರಿಸಲಾಗುತ್ತಿದೆ.
ಬ್ಲೂಮ್‌ಬರ್ಗ್ ವರದಿಯು ಆಪಲ್‌ನ ಗುತ್ತಿಗೆ ತಯಾರಿಕಾ ಕಂಪನಿಗಳಾದ ಫಾಕ್ಸ್‌ಕಾನ್ ಸುಮಾರು 67% ರಷ್ಟು ಫೋನ್‌ಗಳನ್ನು ತಯಾರಿಸುತ್ತದೆ. ಭಾರತದಲ್ಲಿ ಸುಮಾರು 17 ಪ್ರತಿಷತ್ ಐಫೋನ್‌ಗಳನ್ನು ತಯಾರಾಗುತ್ತಿವೆ. Wistron Corp0 ಸಂಸ್ಥೆಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಉಳಿದ ಫೋನ್‌ಗಳನ್ನು ತಯಾರಿಸಿದೆ. ಈ ಕಂಪನಿಯ ಕರ್ನಾಟಕ ಘಟಕವನ್ನು ಕಳೆದ ವರ್ಷ ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ.

ಅಮೆರಿಕ, ಚೀನಾ ಮುಸುಕಿನ ಗುದ್ದಾಟ
ಚೀನಾ ಮತ್ತು ಅಮೆರಿಕ ನಡುವೆ ಕೆಲವು ಸಮಯದಿಂದ ಭೌಗೋಳಿಕ ರಾಜಕೀಯ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಆಪಲ್ ತನ್ನ ಪೂರೈಕೆ ಸರಪಳಿಯನ್ನು ವಿಸ್ತರಿಸಲು ಚೀನಾವನ್ನು ಬಿಟ್ಟು ಬೇರೆ ದೇಶಗಳಲ್ಲೂ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ಚೀನಾ ವಿಶ್ವದ ಅತಿದೊಡ್ಡ ಐಫೋನ್ ಉತ್ಪಾದನಾ ಕೇಂದ್ರವಾಗಿ ಉಳಿದಿದೆ.
ದಕ್ಷಿಣ ರಾಜ್ಯ ತಮಿಳುನಾಡಿನ ಚೆನ್ನೈ ಬಳಿ ಇರುವ ತನ್ನ ಏಕೈಕ ಐಫೋನ್ ಉತ್ಪಾದನಾ ಘಟಕದ ನಿಯಂತ್ರಣವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲು ಪೆಗಾಟ್ರಾನ್ ಮಾತುಕತೆ ನಡೆಸುತ್ತಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಕಳೆದ ಸೋಮವಾರ ವರದಿ ಮಾಡಿತ್ತು. ಈ ಮಾತುಕತೆ ಮುಂದುವರಿದ ಹಂತ ತಲುಪಿದೆ.
ಭಾರತದಲ್ಲಿ ಉತ್ಪಾದನೆ ಹೆಚ್ಚಾಗಲು ಕಾರಣವೇನು?
ಭಾರತದಲ್ಲಿ ಹೆಚ್ಚು ಐಫೋನ್‌ಗಳನ್ನು ತಯಾರಿಸುವುದರ ಹಿಂದಿನ ಕಾರಣವೆಂದರೆ ಆಪಲ್ ಆಪಲ್ ಚೀನಾದ ಮೇಲೆ ಅವಲಂಬಿತವಾಗಲು ಬಯಸುವುದಿಲ್ಲ. ಅದಕ್ಕಾಗಿಯೇ ಆಪಲ್ ಇತರ ದೇಶಗಳಲ್ಲಿಯೂ ಫೋನ್ ಮಾಡಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಭಾರತವು ಇನ್ನೂ ಅಗ್ಗದ ಚೀನೀ ಬ್ರ್ಯಾಂಡ್‌ಗಳಿಂದ ಪ್ರಾಬಲ್ಯ ಹೊಂದಿದೆ ಮತ್ತು ಆಪಲ್ ತನ್ನ ಫೋನ್‌ಗಳಲ್ಲಿ ಕೇವಲ 6% ಅನ್ನು ಮಾತ್ರ ಮಾರಾಟ ಮಾಡುತ್ತದೆ. ಇನ್ನೂ, ಭಾರತದಲ್ಲಿ ಹೆಚ್ಚು ಐಫೋನ್‌ಗಳನ್ನು ತಯಾರಿಸುವುದು ಆಪಲ್ ಚೀನಾದಿಂದ ದೂರ ಸರಿಯಲು ಪ್ರಯತ್ನಿಸುತ್ತಿದೆ ಎಂಬುದರ ಸಂಕೇತವಾಗಿದೆ.












Click it and Unblock the Notifications