Lok Sabha Election Result: ಯೋಗಿ ರಾಜ್ಯದಲ್ಲಿ ಬಿಜೆಪಿಗೆ ಆಘಾತ?
ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಉತ್ತರ ಪ್ರದೇಶ ಸಹಾಯ ಮಾಡಿತ್ತು. 79 ಕ್ಷೇತ್ರಗಳಲ್ಲಿ ಎನ್‌ಡಿಎ ಬರೋಬ್ಬರಿ 64 ಕ್ಷೇತ್ರಗಲ್ಲಿ ಗೆಲುವು ಸಾಧಿಸಿತ್ತು.
2024ರ ಚುನಾವಣೆಯಲ್ಲಿ ಕೂಡ ಬಿಜೆಪಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು, ಆದರೆ ಆರಂಭಿಕ ಹಂತದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದ್ದು, ಸಮಾಜವಾದಿ ಪಕ್ಷ ಭಾರಿ ಪೈಪೋಟಿ ನೀಡುತ್ತಿದೆ.

ಆರಂಭಿಕ ಹಂತದ ಮತ ಎಣಿಕೆಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ನರೇಂದ್ರ ಮೋದಿ ಕೂಡ ಹಿನ್ನಡೆ ಸಾಧಿಸಿದ್ದರು. ಬಳಿಕ ಅವರು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರಿಗಿಂತ ಅಲ್ಪ ಮುನ್ನಡೆ ಪಡೆದುಕೊಂಡಿದ್ದಾರೆ.
10 ಗಂಟೆ ವೇಳೆಗೆ ಮತ ಎಣಿಕೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರೆ, ಸಮಾಜವಾಗಿ ಪಕ್ಷ 29 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಕಾಂಗ್ರೆಸ್ 7, ರಾಷ್ಟ್ರೀಯ ಲೋಕ ದಳ 2 ಮತ್ತು ಆಜಾದ್ ಸಮಾಜವಾದಿ ಪಕ್ಷ 1 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ.












Click it and Unblock the Notifications