ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ನೀಡಲು ಬಯಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

|
Google Oneindia Kannada News

ಮುಂಬೈ, ಜನವರಿ 23: ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಹೇಳಿಕೆಗಾಗಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ನಿಂದ ಟೀಕೆಗೆ ಒಳಗಾದ ಬಳಿಕ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಗೆ ಭೇಟಿ ನೀಡಿದಾಗ ರಾಜ್ಯಪಾಲರು ಪ್ರತ್ಯೇಕವಾಗಿ ಭೇಟಿ ಮಾಡಿ ಅಧಿಕಾರದಿಂದ ಕೆಳಗಿಳಿಯಲು ಮುಂದಾಗಿದ್ದು, ನನ್ನ ಉಳಿದ ಜೀವನವನ್ನು ಓದಲು, ಬರೆಯಲು ನಾನು ಬಯಸುತ್ತೇನೆ ಎಂದು ರಾಜ್ಯಪಾಲರು ಪ್ರಧಾನಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಶ್ಯಾರಿ ಅವರು ರಾಜೀನಾಮೆ ನೀಡಲು ಬಯಸುತ್ತಿರುವುದಾಗಿ ಅವರು ಖಚಿತಪಡಿಸಿದ್ದಾರೆ.

Himachal Pradesh election results 2022: ಬಿಜೆಪಿ ಹಿನ್ನೆಡೆಗೆ ಕಾರಣ ಏನು? ಇಲ್ಲಿದೆ ವಿವರHimachal Pradesh election results 2022: ಬಿಜೆಪಿ ಹಿನ್ನೆಡೆಗೆ ಕಾರಣ ಏನು? ಇಲ್ಲಿದೆ ವಿವರ

ಸಂತರು, ಸಮಾಜ ಸುಧಾರಕರು ಮತ್ತು ವೀರ ಹೋರಾಟಗಾರರ ನಾಡಾದ ಮಹಾರಾಷ್ಟ್ರದಂತಹ ಮಹಾನ್ ರಾಜ್ಯದ ರಾಜ್ಯಪಾಲರಾಗಿ ಆಗಿ ಸೇವೆ ಸಲ್ಲಿಸಲು ನನಗೆ ಸಂಪೂರ್ಣ ಗೌರವ ಮತ್ತು ಸಮ್ಮತಿ ಇದೆ ಎಂದು ಕೊಶ್ಯಾರಿ ಹೇಳಿದರು.

Maharashtra Governor Bhagat Singh Koshyari wants to resign

ಕಳೆದ 3 ವರ್ಷಗಳಿಂದ ಮಹಾರಾಷ್ಟ್ರದ ಜನರಿಂದ ನಾನು ಪಡೆದ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಯವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸುವ ಮತ್ತು ನನ್ನ ಉಳಿದ ಜೀವನವನ್ನು ಓದುವಿಕೆ, ಬರವಣಿಗೆ ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯುವ ನನ್ನ ಬಯಕೆಯನ್ನು ನಾನು ಅವರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ನಾನು ಯಾವಾಗಲೂ ಪ್ರಧಾನ ಮಂತ್ರಿಯಿಂದ ಪ್ರೀತಿ ಮತ್ತು ವಾತ್ಸಲ್ಯವನ್ನು ಸ್ವೀಕರಿಸುತ್ತೇನೆ. ಈ ವಿಷಯದಲ್ಲೂ ನಾನು ಅದೇ ರೀತಿ ಸ್ವೀಕರಿಸುತ್ತೇನೆ ಎಂದು ರಾಜ್ ಭಾವನ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕೊಶ್ಯಾರಿ ಹೇಳಿದ್ದಾರೆ.

Maharashtra Governor Bhagat Singh Koshyari wants to resign

ನವೆಂಬರ್‌ನಲ್ಲಿ ಔರಂಗಾಬಾದ್‌ನಲ್ಲಿ ನಡೆದ ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ, ಮೊದಲು ನಿಮ್ಮ ಐಕಾನ್ ಯಾರು ಎಂದು ಕೇಳಿದಾಗ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಉತ್ತರವಾಗಿದ್ದರು. ಮಹಾರಾಷ್ಟ್ರದಲ್ಲಿ, ನೀವು ಬೇರೆಡೆ ನೋಡಬೇಕಾಗಿಲ್ಲ. ಏಕೆಂದರೆ ಇಲ್ಲಿ ಹಲವಾರು ಐಕಾನ್‌ಗಳಿವೆ. ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ಕಾಲದಲ್ಲಿದ್ದರೆ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇಂದಿನ ನಾಯಕರಾಗಿದ್ದಾರೆ ಎಂದು ಕೋಶ್ಯಾರಿ ಹೇಳಿದ್ದರು. ಎಂವಿಎ ಮುಂಬೈನಲ್ಲಿ ಅವರ ವಿರುದ್ಧ ಬೃಹತ್ ಮೋರ್ಚಾವನ್ನು ಕೂಡ ನಡೆಸಿತ್ತು.

English summary
Maharashtra Governor Bhagat Singh Koshyari has expressed his desire to step down after coming under fire from the opposition Maha Vikas Aghadi (MVA) for his remarks about Chhatrapati Shivaji Maharaj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X