Maharashtra Election: ನಟಿ ಜೆನಿಲಿಯಾ ಡಿಸೋಜ ಪತಿ ರಿತೇಶ್ ದೇಶಮುಖ್ ಪವರ್‌ಫುಲ್ ಸ್ಪೀಚ್ ವೈರಲ್!
ಅವರು ಭರ್ಜರಿ ಸ್ಪೀಚ್ ಕೊಟ್ಟಿದ್ದಾರೆ. ಮಹಾರಾಷ್ಟ್ರ ಚುನಾವಣೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಈ ಹಂತದಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳು ಸಹ ಭರ್ಜರಿ ಹಾಗೂ ಕೊನೆಯ ಹಂತದ ಚುನಾವಣೆ ಪ್ರಚಾರ ಸಭೆಗಳನ್ನು ಸಹ ಆಯೋಜಿಸಿತ್ತಿವೆ. ರಿತೇಶ್ ಅವರು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅವರ ಮಗ ಸಹ ಹೌದು. ಅವರು ರಾಜಕೀಯವನ್ನು ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬೆಳೆದಿದ್ದಾರೆ.
ವಿಲಾಸರಾವ್ ದೇಶಮುಖ ಅವರ ಮಗ ರಿತೇಶ್ ದೇಶಮುಖ್. ವಿಲಾಸರಾವ್ ಅವರು ಮಾಹಾರಾಷ್ಟ್ರದ 14ನೇ ಮುಖ್ಯಮಂತ್ರಿಯಾಗಿದ್ದರು. ಇದೀಗ ರಿತೇಶ್ ಅವರ ಸಹೋದರ ಧೀರಜ್ ದೇಶಮುಖ್ ಸಹ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಮಹಾರಾಷ್ಟ್ರದ ಲಾತೂರ್ ಗ್ರಾಮಾಂತರ ಪ್ರದೇಶದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ಅವರ ಸಹೋದರನ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿರುವ ರಿತೇಶ್ ಅವರು ಬಿಜೆಪಿಯ ಮೇಲೆ ಮುಗಿ ಬಿದಿದ್ದಾರೆ.

ಧರ್ಮ ಅಲ್ಲ ನಿಮ್ಮ ಪಕ್ಷ ಅಪಾಯದಲ್ಲಿದೆ: ಧರ್ಮ ಅಲ್ಲ ನಿಮ್ಮ ಪಕ್ಷ ಅಪಾಯದಲ್ಲಿ ಇದೆ ಎಂದು ರಿತೇಶ್ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ವಾಸ್ತವವಾಗಿ ಯಾರು ನಮ್ಮ ಧರ್ಮ ಅಪಾಯದಲ್ಲಿ ಇದೆ ಎನ್ನುತ್ತಾರೋ ಅದು ನಿಜವಲ್ಲ. ಯಾವ ಧರ್ಮವೂ ದೇಶದಲ್ಲಿ ಅಪಾಯದಲ್ಲಿ ಇಲ್ಲ. ಅಪಾಯದಲ್ಲಿ ಇರುವುದು ಈ ರೀತಿ ಪ್ರಚಾರ ಹಾಗೂ ಧರ್ಮ ಹೆಸರಿನಲ್ಲಿ ಮತ ಹಾಕುವಂತೆ ಕೇಳುತ್ತಿದ್ದಾರಲ್ಲ ಅವರ ಪಕ್ಷ ಮಾತ್ರ ಎಂದು ಬಿಜೆಪಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸಲಿದೆ ಎನ್ನುವ ಮಾತು ಇದೆ. ನಾನು ನನ್ನ ಧರ್ಮದ ಬಗ್ಗೆ ನಂಬಿಕೆ ಹಾಗೂ ಗೌರವವನ್ನು ಹೊಂದಿದ್ದೇನೆ. ಆದರೆ, ಯಾರು ಧರ್ಮ ಅಪಾಯದಲ್ಲಿ ಇದೆ ಎಂದು ಹೇಳುತ್ತಿದ್ದಾರೋ ಅವರ ಮಾತುಗಳನ್ನು ನಂಬುವ ಅವಶ್ಯಕತೆ ಇಲ್ಲ. ಭ್ರಮೆಗಳಿಗೆ ಬಲಿಯಾಗಬೇಡಿ ಎಂದಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯೂ ಧರ್ಮವನ್ನು ಪಾಲಿಸಬೇಕು ಹಾಗೂ ಪ್ರೀತಿಸಬೇಕು. ಆದರೆ, ಯಾವುದಾದರೂ ಪಕ್ಷ ಧರ್ಮ ಅಪಾಯದಲ್ಲಿ ಇದೆ ಎಂದರೆ ನಂಬಲೇ ಬಾರದು. ಶ್ರೀಕೃಷ್ಣ ಹೇಳಿರುವಂತೆ ಮಾಡುವ ಕೆಲಸವೇ (ಕರ್ಮ) ಧರ್ಮವಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಧರ್ಮ ಪಾಲನೆ ಮಾಡುವವರು ಎಂದು ಕರೆಯುತ್ತಾರೆ ಎಂದಿದ್ದಾರೆ. ಧರ್ಮದ ಬಗ್ಗೆ ಮಾತನಾಡುವವರಿಗೆ ನಮ್ಮ ಧರ್ಮವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಎಂದಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಲಾತೂರ್ ಮಾದರಿ ಶಿಕ್ಷಣ ಪ್ರಸಿದ್ಧಿ ಗಳಿಸಿದೆ. ಆದರೆ, ಇಲ್ಲಿ ವಿದ್ಯಾಭ್ಯಾಸ ಪೂರೈಸಿರುವವರಿಗೆ ಉದ್ಯೋಗಾವಕಾಶಗಳೇ ಸಿಗುತ್ತಿಲ್ಲ ಎಂದು ರಿತೇಶ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ: ಮಹಾರಾಷ್ಟ್ರದಲ್ಲಿ ಇನ್ನು ಹತ್ತು ದಿನಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಇದೇ 20ಕ್ಕೆ ಒಂದೇ ಹಂತದಲ್ಲಿ ಇಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಸಣ್ಣ ಪಕ್ಷಗಳು ಹಾಗೂ ಇಬ್ಭಾಗವಾಗಿರುವ ಪ್ರಮುಖ ಪಕ್ಷಗಳ ಬಣಗಳು ಸಹ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿವೆ. ಆದರೆ, ಬಿಜೆಪಿ - ಕಾಂಗ್ರೆಸ್ ಮೈತ್ರಿ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆಗೆ ಇಳಿದಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿವೆ. ಹೀಗಾಗಿ, ಈ ಪಕ್ಷಗಳ ನಡುವೆ ಹಲವು ವಿಧಾನಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇದೆ.












Click it and Unblock the Notifications