ಮಹಾರಾಷ್ಟ್ರ ಚುನಾವಣೆ: ಬಿಜೆಪಿ - ಮಿತ್ರ ಪಕ್ಷಗಳ ನಡುವೆ ಕಚ್ಚಾಟ, ದಂಗಾದ ಬಿಜೆಪಿ ಹೈಕಮಾಂಡ್!
ಮಹಾರಾಷ್ಟ್ರ ಚುನಾವಣೆಗೆ ಇನ್ನು ಸರಿಯಾಗಿ ಕೇವಲ 5 ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಬಿಜೆಪಿಯ ಮಿತ್ರಪಕ್ಷಗಳ ನಡುವೆಯೇ ಭಾರೀ ಮುಜುಗರದ ಪ್ರಸಂಗ ಎದುರಾಗುತ್ತಿದೆ. ಬಿಜೆಪಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇವೆ. ಮಹಾಯುತಿ ಎನ್ನುವ ಹೆಸರು ಈ ಮಿತ್ರ ಪಕ್ಷಗಳಿಗೆ ಇವೆ. ಮಹಾಯಿತಿಯ ಭಾಗವಾಗಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಹಾಗೂ ಬಿಜೆಪಿ ನಾಯಕರ ನಡುವೆ ಬೆಂಕಿ ಹೊತ್ತುಕೊಂಡಿದೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರು ನೀಡಿರುವ ಹೇಳಿಕೆ ಇದೀಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಇದೇ 20ಕ್ಕೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 5 ದಿನಗಳು ಬಾಕಿ ಉಳಿದಿರುವಾಗ ಎಬ್ಬರು ಪ್ರಮುಖ ನಾಯಕರ ನಡುವೆ ನಡೆದಿರುವ ವಾಕ್ಸಮರ ಬಿಜೆಪಿ ಹೈಕಮಾಂಡ್‌ಗೆ ಹೊಸ ತಲೆನೋವನ್ನೇ ಸೃಷ್ಟಿ ಮಾಡಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳಿಗೆ ಟಾಂಗ್ ನೀಡುವುದಕ್ಕೆ ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿ"ಬಾಟಂಗೆ ತೋ ಕಟೆಂಗೆ (ವಿಭಜನೆಯೇ ವಿನಾಶ)" ಎನ್ನುವ ಘೋಷಣೆಯನ್ನು ಪ್ರಯೋಗಿಸುತ್ತಿದೆ. ಇದರ ಅರ್ಥ ವಿರೋಧ ಪಕ್ಷಗಳು (ಮಹಾವಿಕಾಸ್ ಅಘಾಡಿ) ಮಹಾರಾಷ್ಟ್ರದ ಜನರನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿವೆ.
ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ವಿರೋಧ ಪಕ್ಷಗಳು ನಮ್ಮನ್ನು ವಿಭಜನೆ ಮಾಡುವುದಕ್ಕೆ ಬಿಡಬಾರದು ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ಇದೀಗ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಅಜಿತ್ ಪವಾರ್ ಅವರ ಬಣವೇ ಈ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದು. ಬಿಜೆಪಿ ಮೈತ್ರಿ ಪಕ್ಷಗಳ ಈ ನಡವಳಿಕೆ ವಿರೋಧ ಪಕ್ಷ ಹಾಗೂ ಜನರ ಮುಂದೆ ನಗೆಪಾಟಲಿಗೆ ಗುರಿಯಾಗಿದೆ.
"ಬಾಟಂಗೆ ತೋ ಕಟೆಂಗೆ (ವಿಭಜನೆಯೇ ವಿನಾಶ)" ಎನ್ನುವ ಘೋಷಣೆಗೆ ಮಹಾರಾಷ್ಟ್ರದಲ್ಲಿ ಅವಕಾಶ ಇಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹೇಳಿದ್ದಾರೆ. ಇದಕ್ಕೆ ಮತ್ತೊಬ್ಬ ಉಪ ಮುಖ್ಯ (ಮಹಾರಾಷ್ಟ್ರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು) ದೇವೇಂದ್ರ ಫಡ್ನವಿಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯು (ಅಜಿತ್ ಪವಾರ್ ಬಣ) ಹೆಚ್ಚು ಜನ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ನಡುವೆ ಬಿಜೆಪಿಯ ಉಗ್ರ ಹಿಂದುತ್ವದಿಂದ ಅಜಿತ್‌ನೇತೃತ್ವದ ಮಿತ್ರ ಪಕ್ಷವು ಅಂತರ ಕಾಪಾಡಿಕೊಳ್ಳುತ್ತಿದೆ. ಈ ಬೆಳವಣಿಗೆ ಬಿಜೆಪಿ ನಾಯಕರನ್ನು ಕೆಣಕಿಸಿದೆ.

ಇದೀಗ ಈ ಬಗ್ಗೆ ಮಾತನಾಡಿರುವ ದೇವೇಂದ್ರ ಫಡ್ನಿವೀಸ್ ಅವರು ಅಜಿತ್ ಪವಾರ್ ಅವರು, ಅವರ ಹಿಂದಿನ ಮಿತ್ರರ ಪ್ರಭಾವದಿಂದ (ಮೂಲ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರದ ಪ್ರಚಾರ ರ್ಯಾಲಿಯಲ್ಲಿ "ಬಟೇಂಗೆ ತೋ ಕಿಟೆಂಗೆ" (ನಾವು ವಿಭಜಿತರಾದರೆ ಮುಗಿಸುತ್ತಾರೆ) ಎಂಬರ್ಥದಲ್ಲಿ ಮಾತನಾಡಿದ್ದರು. ಬಿಜೆಪಿಯು ಈ ಘೋಷಾವಾಕ್ಯವನ್ನೇ ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡಿದೆ. ಭಾರೀ ಜಾಹೀರಾತು ಸಹ ನೀಡುತ್ತಿದೆ. ಆದರೆ, ಅಜಿತ್ ಪವಾರ್ ಅವರ ಹೇಳಿಕೆ ಬಿಜೆಪಿಗೆ ನುಂಗಲಾಗದ ಬಿಸಿ ತುಪ್ಪವಾಗಿದೆ.












Click it and Unblock the Notifications