Maharashtra assembly election 2024: ಸೇಡು ತೀರಿಸಿಕೊಂಡಿದ್ದೇವೆ ಪೋಸ್ಟರ್ ವೈರಲ್
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಶೀಘ್ರ ಮಾಹಿತಿ ನೀಡುವುದಾಗಿ ಭಾರತೀಯ ಚುನಾವಣಾ ಆಯೋಗವು ಸಹ ಹೇಳಿದೆ. ಈ ನಡುವೆ ಬಿಜೆಪಿ ಮಹಾರಾಷ್ಟ್ರ ಚುನಾವಣೆಗೆ ಹೊಸ ಮಾದರಿಯ ಸಿದ್ಧತೆಯೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಮಹಾರಾಷ್ಟ್ರದ ಪ್ರಮುಖ ನಾಯಕ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ.
ಇಲ್ಲಿನ ಬದ್ಲಾಪುರ್ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಸಣ್ಣ ಹೆಣ್ಣುಮಕ್ಕಳ ಮೇಲೆ ಕಸಗುಡಿಸುವ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿದ್ದ. ಈ ಆರೋಪಿ ಮಹಾರಾಷ್ಟ್ರದ ಪೊಲೀಸರ ಎನ್ಕೌಂಟರ್ ಮಾಡಲಾಗಿತ್ತು. ಇದೀಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಹಾಗೂ ನಾವು ಸೇಡು ತೀರಿಸಿಕೊಂಡಿದ್ದೇವೆ ಎನ್ನುವ ಪೋಸ್ಟರ್‌ಗಳು (ಫ್ಲೆಕ್ಸ್‌ಗಳು) ವೈರಲ್ ಆಗಿವೆ. ಈ ಫ್ಲೇಕ್ಸ್‌ನಲ್ಲಿ ದೇವೇಂದ್ರ ಫಡ್ನವೀಸ್ ಬಂದೂಕು ಗುರಿ ಇಟ್ಟಿರುವ ಚಿತ್ರವನ್ನು ಬಳಸಲಾಗಿದೆ.

ನಾವು ಸೇಡು ತೀರಿಸಿಕೊಂಡಿದ್ದೇವೆ ಎನ್ನುವ ಪೋಸ್ಟ್
ಈ ಪೋಸ್ಟರ್‌ನಲ್ಲಿ ನಾವು ಸೇಡು ತೀರಿಸಿಕೊಂಡಿದ್ದೇವೆ ಎಂದು ಬರೆಯಲಾಗಿದೆ. ಅಲ್ಲದೇ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅವರ ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ಚಿತ್ರವು ಸಹ ಇದೆ. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಆದರೆ, ಈ ಪೋಸ್ಟರ್‌ನಲ್ಲಿ ಬೇರೆ ಯಾವುದೇ ಪಕ್ಷದ ನಾಯಕರ ಚಿತ್ರ ಇಲ್ಲ. ಈ ಮೂಲಕ ಮಿತ್ರ ಪಕ್ಷಗಳನ್ನು ಬಿಜೆಪಿ ಸೈಡ್ ಲೈನ್ ಮಾಡುತ್ತಿದೆಯೇ ಎನ್ನುವ ಪ್ರಶ್ನೆಯೂ ಎದುರಾಗಿದೆ.
ದೇವೇಂದ್ರ ಫಡ್ನವೀಸ್ ಪ್ರಚಾರದ ಭಾಗ ?
ಈ ರೀತಿ ಪೋಸ್ಟರ್‌ಗಳು ಕಾಣಿಸಿಕೊಳ್ಳುತ್ತಿರುವುದು ದೇವೇಂದ್ರ ಫಡ್ನವೀಸ್ ಅವರ ಪ್ರಚಾರದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಕಳೆ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಏಕಾಂಗಿಯಾಗಿ 105 ಸೀಟುಗಳನ್ನು ಗೆದಿತ್ತು. ಆದರೆ, ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮುಂದೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ, ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಉಪ ಮುಖ್ಯಮಂತ್ರಿಯಾಗುವುದಕ್ಕೂ ಹಿಂದೇಟು ಹಾಕಿದ್ದ ಅವರನ್ನು ಬಿಜೆಪಿ ಹೈಕಮಾಂಡ್ ಒತ್ತಾಯದ ಮೇಲೆ ಉಪ ಮುಖ್ಯಮಂತ್ರಿಯಾಗುವುದಕ್ಕೆ ಒಪ್ಪಿಸಿತ್ತು. ಆದರೆ, ಈಚೆ ನಡೆದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟುಗಳು ಸಿಕ್ಕಿರಲಿಲ್ಲ.
ಮುಂದುವರಿದು ಈಗ ವಿಧಾನಸಭೆ ಚುನಾವಣೆಗೆ ಸಿದ್ಧತೆ ಪ್ರಾರಂಭವಾಗಿರುವಾಗ ಬಿಜೆಪಿಯ ನಾಯಕನನ್ನು ಮುನ್ನೆಲೆಗೆ ತರುತ್ತಿಲ್ಲ. ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಹೊಸ ಮುಖವನ್ನು ಹುಡುಕುತ್ತಿದೆಯೇ ಎನ್ನುವ ಪ್ರಶ್ನೆಯೂ ಎದುರಾಗಿದೆ. ಮಿತ್ರ ಹಾಗೂ ಸಣ್ಣ ಪಕ್ಷಗಳು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಮ್ಮ ಪಕ್ಷದಿಂದಲೇ ಆಗಲಿದ್ದಾರೆ ಎಂದು ಘೋಷಿಸುತ್ತಿವೆಯಾದರೂ, ಬಿಜೆಪಿ ಈ ನಿಟ್ಟಿನಲ್ಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದೀಗ ಫಡ್ನವೀಸ್ ಬಗ್ಗೆ ಜೋರು ಚರ್ಚೆ ನಡೆದಿದೆ.












Click it and Unblock the Notifications