ಮಹಾರಾಷ್ಟ್ರ: ಯುಎಸ್ ಅಧ್ಯಕ್ಷರಂತೆ ಪ್ರಧಾನಿ ಮೋದಿ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದಾರೆ: ರಾಗಾ

ಮುಂಬೈ, ನವೆಂಬರ್ 16: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ವೇದಿಕೆ ಅಲಂಕರಿಸಿದ್ದಾರೆ. ಕೇರಳ ವಯನಾಡು ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಬೆನ್ನಲ್ಲೆ, ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ. ಪ್ರಧಾನಿ ಮೋದಿಯವರು 'ಜ್ಞಾಪಕ ಶಕ್ತಿ ಕಳೆದುಕೊಳ್ಳುವ' ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಶನಿವಾರ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ನಡೆ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ರೀತಿಯಲ್ಲಿ ನರೆಂದ್ರ ಮೋದಿಯವರು ಜ್ಞಾಪಕ ಶಕ್ತಿ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ.

Maharashtra Assembly Election 2024 PM Modi has Suffer Memory Loss Rahul Gandhi

ಜಾತಿ ಗಣತಿ ಕುರಿತು ನನ್ನ ಸಹೋದರಿ (ಪ್ರಿಯಾಂಕಾ ಗಾಂಧಿ) ಅವರು ಮಾತನಾಡಿದ್ದಾರೆ. ಅದರ ಕುರಿತು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ಜಾತಿ ಗಣತಿ ಬಗ್ಗೆಯೇ ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ. ಸಂಸತ್‌ನಲ್ಲಿ ನಾನೂ ಪ್ರಸ್ತಾಪಿಸಿದ್ದೇನೆ. ಜಾತಿ ಗಣತಿ ಮಾಡಲಾಗುವುದು. ಅದಷ್ಟೇ ಅಲ್ಲದೇ, ಮೀಸಲಾತಿ ಮೇಲಿನ ಶೇಕಡಾ 50ರ ಮಿತಿಯನ್ನು ತೆಗೆದು ಹಾಕುವುದಾಗಿ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಝಾರ್ಖಂಡ್‌ನಲ್ಲಿ ಕಾಂಗ್ರೆಸ್ ನೇತೃತ್ವದ I.N.D.I.A ಸೇರಿದಂತೆ ಮೈತ್ರಿಕೂಟ ಪಕ್ಷವು ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ನಾನು ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ನಾನು ಜಾತಿ ಗಣತಿಗೆ ವಿರೋಧಿ ಅಂತಲೂ ಹೇಳುತ್ತಾರೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು.

ಪ್ರಧಾನಿ ಜಾತಿ ಗಣತಿ ವಿರೋಧಿ: ರಾಗಾ

ಪ್ರಧಾನಿ ನರೇಂದ್ರ ಮೋದಿಯವರು ಜಾತಿ-ಗಣತಿಗೆ ವಿರೋಧಿ ಆಗಿದ್ದರಿಂದ ಇಷ್ಟೊಂದು ವರ್ಷ ಗಣತಿ ತಡವಾಗಿದೆ. ವಿರೋಧಿಸದೇ ಇದ್ದಿದ್ದರೆ 5 ರಿಂದ 7 ವರ್ಷಗಳ ಹಿಂದೆಯೇ ಜಾತಿ ಗಣತಿ ಮಾಡುತ್ತಿದ್ದರು ಎಂದು ಅವರು ಟಾಂಗ್ ನೀಡಿದರು.

ಮಹಾರಾಷ್ಟ್ರದ ವೇದಿಕೆಯಲ್ಲಿ ಗುಡುಗಿದ್ದ ಪ್ರಿಯಾಂಕಾ ಗಾಂಧಿಯವರು ಇಂದು ಶನಿವಾರ ಶಿರಡಿಯಲ್ಲಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ಅವರಿಗೆ ಸವಾಲು ಹಾಕಿ ಜಾತಿ ಗಣತಿ ನಡೆಸಲಾಗುವುದು ಎಂದು ನೇರವಾಗಿ ಚಾಲೆಂಜ್ ಮಾಡಿದ್ದಾರೆ.

ಮಹಾ ಕಣದಲ್ಲಿದ್ದಾರೆ ಒಟ್ಟು 4,136 ಅಭ್ಯರ್ಥಿಗಳು

ನವೆಂಬರ್ 20 ರಂದು ಒಂದೇ ಹಂತದಲ್ಲಿ ಮಹಾರಾಷ್ಟ್ರದ 288 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಟ್ಟು 4,136 ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ ಬಾರಿ (2019) ಚುನಾವಣೆಯಲ್ಲಿ 3,239 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಭಾರಿ ಶೇಕಡಾ 27.7 ರಷ್ಟು ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಅದರಲ್ಲಿ 2,086 ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ ಎಂದು ನಾಮಪತ್ರ ಹಿಂಪಡೆಯುವುದು ಕೊನೆಗೊಳ್ಳುತ್ತಿದ್ದಂತೆ ರಾಜ್ಯ ಚುನಾವಣೆ ಆಯೋಗದ ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿತು. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+