maharashtra assembly election 2024: ಮಹಾರಾಷ್ಟ್ರದಲ್ಲಿ ಲಾಪತಾ ಲೇಡೀಸ್ ಅಭಿಯಾನ ಪ್ರಾರಂಭಿಸಿದ ಕಾಂಗ್ರೆಸ್‌, ಏನಿದು

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಇದರ ನಡುವೆ ವಿವಿಧ ಪಕ್ಷಗಳು ಭಿನ್ನವಾಗಿ ಪ್ರಚಾರ ನಡೆಸುತ್ತಿವೆ. ಇದೀಗ ಕಾಂಗ್ರೆಸ್‌ ಪಕ್ಷವು ವಿಧಾನಸಭೆ ಚುನಾವಣೆ ಪ್ರಚಾರದ ಭಾಗವಾಗಿ "ಲಾಪತಾ ಲೇಡೀಸ್" (Laapataa Ladies) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಮೂಲಕ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಬೃಹತ್‌ ಅಭಿಯಾನವನ್ನು ಪ್ರಾರಂಭಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ದಿನಾಂಕ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ಈ ನಡುವೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿವೆ. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವು ಲಾಪತಾ ಲೇಡೀಸ್ (ಕಾಣೆಯಾದ ಮಹಿಳೆಯರು) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಗಳಾದ ಅಜಿತ್‌ ಪವಾರ್‌ ಮತ್ತು ದೇವೇಂದ್ರ ಫಡ್ನವೀಸ್‌ ಅವರನ್ನು ಹೋಲುವಂತಹ ಚಿತ್ರವನ್ನೂ ಸಹ ಪೋಸ್ಟರ್‌ನಲ್ಲಿ ಬಳಸಲಾಗಿದೆ.

maharashtra assembly election 2024 Congress launched missing ladies campaign in Maharashtra

ಏನಿದು ಲಾಪತಾ ಲೇಡೀಸ್ ಅಭಿಯಾನ, ಈಗ ಯಾಕೆ ?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇದೆ. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವು ಲಾಪತಾ ಲೇಡೀಸ್ ಅಭಿಯಾನ ಶುರು ಮಾಡಿದೆ. ಲಾಪತಾ ಲೇಡೀಸ್‌ ಎಂದರೆ ಕಾಣೆಯಾದ ಹೆಂಗಸರು ಎಂದರ್ಥ. ಮಹಾರಾಷ್ಟ್ರದಾದ್ಯಂತ ಈ ಮಾದರಿಯ ಪೋಸ್ಟರ್‌ಗಳನ್ನು ಕಾಂಗ್ರೆಸ್‌ ಅಂಟಿಸುತ್ತಿದೆ. ಈ ಪೋಸ್ಟರ್‌ನಲ್ಲಿ ಒಂದೇ ವರ್ಷದಲ್ಲಿ 64,000 ಸಾವಿರ ಮಹಿಳೆಯರ ನಾಪತ್ತೆ ಎಂದು ಉಲ್ಲೇಖಿಸಲಾಗಿದೆ. ಮಹಿಳೆಯರ ರಕ್ಷಣೆ ವಿಚಾರದಲ್ಲಿ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್‌ ದೂರಿದೆ. ಮಹಾರಾಷ್ಟ್ರದಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಮರಾಠಿಯಲ್ಲಿ ಒಂದು ವರ್ಷದಲ್ಲಿ 64,000 ಸಾವಿರ ಮಹಿಳೆಯರ ನಾಪತ್ತೆಯಾಗಿದ್ದಾರೆ ಎಂದು ಬರೆಯಲಾಗಿದೆ. ಕಾಂಗ್ರೆಸ್‌ ಪಕ್ಷವು ಮಹಾರಾಷ್ಟ್ರದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಳೆದ ವರ್ಷ ಮಾಹಿತಿ ನೀಡಿದ್ದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಮುಖಂಡ ದೇವೇಂದ್ರ ಫಡ್ನವೀಸ್ ಅವರು, ಮಹಾರಾಷ್ಟ್ರದಲ್ಲಿ ಕಾಣೆಯಾದ ಶೇಕಡ 10 ರಷ್ಟು ಮಹಿಳೆಯರು ಮನೆಗೆ ಹಿಂದಿರುಗುವುದಿಲ್ಲ ಎಂದು ಹೇಳಿದ್ದರು.

maharashtra assembly election 2024 Congress launched missing ladies campaign in Maharashtra

ಮುಂದುವರಿದು ಮಹಿಳೆಯರ ಸುರಕ್ಷತೆ ಆದ್ಯತೆಯ ವಿಷಯವಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ 64 ಸಾವಿರ ಹುಡುಗಿಯರು ಹಾಗೂ ಮಹಿಳೆಯರು ಕಾಣೆಯಾಗುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಕೋವಿಡ್‌ ಸಮಯದಲ್ಲೂ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಿದ್ದು ವರದಿಯಾಗಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರ ನೀಡಿದ ದಾಖಲೆ ಹಾಗೂ ಮಾಹಿತಿಯ ಆಧಾರದ ಮೇಲೆ (ಸರ್ಕಾರದ ಅಂಕಿ - ಅಂಶ) ಮಹಾಯುತಿ ಸರ್ಕಾರದ ಮೇಲೆ (ಸಮ್ಮಿಶ್ರ ಸರ್ಕಾರ) ತಿರುಗಿ ಬಿದ್ದಿದೆ.

ಈಚೆಗೆ ಮಹಾರಾಷ್ಟ್ರದ ಬದ್ಲಾಪುರ್ ಎನ್ನುವ ಪ್ರದೇಶದಲ್ಲಿ ಇಬ್ಬರು ಬಾಲಿಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ಕೌಂಟರ್‌ ಮಾಡಿದ್ದರು. ಈಚೆಗೆ ಬದ್ಲಾಪುರ್ ಬದ್ಲಾ (ಬದ್ಲಾಪುರದ ಘಟನೆಗೆ ಪ್ರತೀಕಾರ) ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ಹೇಳಿತ್ತು. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಪೋಸ್ಟರ್‌ ವೈರಲ್‌ ಆಗಿತ್ತು. ಇದೀಗ ಕಾಂಗ್ರೆಸ್‌ ಪಕ್ಷವು ಲಾಪತಾ ಲೇಡೀಸ್‌ ಪೋಸ್ಟರ್‌ಗಳು ವೈರಲ್ ಆಗಿವೆ.

ಲಾಪತಾ ಲೇಡೀಸ್ ಎಂದರೇನು: ಲಾಪತಾ ಲೇಡೀಸ್‌ ಎನ್ನುವ ಚಿತ್ರವೊಂದು ಈಚೆಗೆ ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಇಬ್ಬರು ಮಹಿಳೆಯರು ಕಾಣೆಯಾಗುವ ವಿಷಯವನ್ನು ಪ್ರಧಾನವಾಗಿ ಇರಿಸಿಕೊಂಡು ಚಿತ್ರದ ಕಥೆಯನ್ನು ಎಣೆಯಲಾಗಿತ್ತು. ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ವಿಷಯ, ಅವರಿಗೆ ಇರುವ ಮಿತಿಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಈ ಚಿತ್ರವನ್ನು ಆಸ್ಕರ್‌ಗೂ ಎಂಟ್ರಿ ಕೊಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+