Maharashtra Assembly Election 2024: ಮಹಾರಾಷ್ಟ್ರ ಜನರಿಗೆ "ಬಂಪರ್ ಫ್ರೀ ಗಿಫ್ಟ್‌": ಇಂದಿನಿಂದಲೇ ಜಾರಿ, ಟೋಲ್‌ ಶುಲ್ಕ ಫ್ರೀ

ಮಹಾರಾಷ್ಟ್ರ ಚುನಾವಣೆ ದಿನಾಂಕ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆ ಇದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಜನರಿಗೆ ಬಂಪರ್ ಗಿಫ್ಟ್‌ವೊಂದನ್ನು ನೀಡಿದೆ. ಇಂದಿನಿಂದಲೇ ಈ ಗಿಫ್ಟ್‌ ರಾಜ್ಯದ ಜನರಿಗೆ ಸಿಗಲಿದೆ. ಇಂದು ರಾತ್ರಿಯಿಂದಲೇ ಪ್ರಮುಖ ಹೆದ್ದಾರಿಗಳಲ್ಲಿ ಟ್ರೋಲ್‌ಫ್ರೀ (ಟೋಲ್‌ ಶುಲ್ಕ ಪಾವತಿ ಇಲ್ಲ) ಮಾಡಲಾಗಿದೆ. ಏನಿದು ಚುನಾವಣಾ ಗಿಮಿಕ್ ಎನ್ನುವ ವಿವರ ಇಲ್ಲಿದೆ.

ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗಳ ನಂತರ ದೇಶದ ದೊಡ್ಡ ಹಾಗೂ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರತೀಯ ಚುನಾವಣಾ ಆಯೋಗವು ಯಾವುದೇ ಕ್ಷಣದಲ್ಲಾದರೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ನಡುವೆ ಮಹಾರಾಷ್ಟ್ರ ಜನರಿಗೆ ಮಹಾರಾಷ್ಟ್ರ ಸರ್ಕಾರ ಬಂಪರ್‌ ಗಿಫ್ಟ್‌ ಕೊಟ್ಟು ಜನರನ್ನು ಖುಷಿಪಡಿಸಿದೆ.

Maharashtra Assembly Election 2024 Bumper gift to people of Maharashtra Effective from today

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನಾಂಕಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೀಗ ಸಮ್ಮಿಶ್ರ ಸರ್ಕಾರವು ಮತದಾರರನ್ನು ಸೆಳೆಯುವುದಕ್ಕೆ ಭಾರೀ ಸರ್ಕಸ್‌ ಹಾಗೂ ಫ್ರೀ ಗಿಫ್ಟ್‌ಗಳನ್ನು ಕೊಡುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಮುಖ ಐದು ಹೆದ್ದಾರಿಗಳಲ್ಲಿ ಟ್ರೋಲ್ ಫ್ರೀ ಮಾಡಿ ಆದೇಶ ಮಾಡಿದೆ. ಈ ಆದೇಶವು ಸೋಮವಾರದಿಂದಲೇ ಜಾರಿಗೆ ಬರಲಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಭಾರೀ ವಾಹನಗಳ ಸಂಚಾರವಿದೆ. ಈ ವಾಹನ ಸವಾರರು ಹಾಗೂ ಮತದಾರರನ್ನು ಮೆಚ್ಚಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮಹಾರಾಷ್ಟ್ರದ ಹೃದಯಭಾಗವಾಗಿರುವ ಮುಂಬೈನ ಐದು ಪ್ರಮುಖ ಟೋಲ್ ಫ್ರೀ ಮಾಡಲಾಗಿದೆ. ಐದು ಪ್ರಮುಖ ಟೋಲ್‌ ಬೂತ್‌ಗಳ ಆಗಮನ ಹಾಗೂ ನಿರ್ಗಮನ ಇಂದು ರಾತ್ರಿ 12ರಿಂದ (ಅಕ್ಟೋಬರ್‌ 14)ಲೇ ಫ್ರೀ... ಆಗಲಿದೆ. ಐದು ಪ್ರಮುಖ ಟೋಲ್‌ ಬೂತ್‌ಗಳಲ್ಲಿ ಬೈಕ್‌ ಸೇರಿದಂತೆ ವಿವಿಧ ವಾಹನಗಳಿಗೆ (ಲಘು ವಾಹನಗಳಿಗೆ) ಸಂಪೂರ್ಣ ಟೋಲ್ ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಾದರೂ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಈ ನಡುವೆ ಸೋಮವಾರ ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ್‌ ಮೀಟಿಂಗ್‌ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Maharashtra Assembly Election 2024 Bumper gift to people of Maharashtra Effective from today

ಮಹಾರಾಷ್ಟ್ರ ಸರ್ಕಾರ ನೀಡಿದ ಕಾರಣವೇನು: ಇನ್ನು ಮುಂಬೈನಲ್ಲಿ ಪ್ರಮುಖ ಟೋಲ್‌ಗಳಲ್ಲಿ ಟೋಲ್‌ ಫ್ರೀ ಮಾಡಿರುವುದಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೀಡುರುವ ಕಾರಣವೂ ಅಚ್ಚರಿಯಿಂದ ಕೂಡಿದೆ. ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಜನತೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕದೆ ಹಾಗೂ ಜನ ಬೇಗ ಮನೆ ಸೇರುವ ಉದ್ದೇಶದಿಂದ ಟೋಲ್‌ ಫ್ರೀ ಮಾಡಲಾಗಿದೆ ಎಂದು ಹೇಳಿದ್ದಾರೆ.

ಐದು ಟೋಲ್‌ಗಳು ಯಾವುವು: ಕರ್ನಾಟಕದಲ್ಲಿ ಹೆಚ್ಚು ವಾಹನ ಸಂಚಾರ ಹಾಗೂ ಟ್ರಾಫಿಕ್‌ ಜಾಮ್‌ ಇರುವಂತೆಯೆ, ಮಹಾರಾಷ್ಟ್ರದಲ್ಲಿ ಮುಂಬೈನಲ್ಲೂ ಭಾರೀ ಟ್ರಾಫಿಕ್‌ ಜಾಮ್‌ ಹಾಗೂ ವಾಹನಗಳ ಸಂಚಾರ ಇದೆ. ಇದೀಗ ಮಹಾರಾಷ್ಟ್ರದಲ್ಲಿ ಚುನಾವಣೆಯ ಭಾಗವಾಗಿ ಟೋಲ್ ಫ್ರೀ ನೀಡಲಾಗಿದ್ದರೂ, ಇದರಿಂದ ಜನರಿಗೆ ಅನುಕೂಲವೇ ಆಗಲಿದೆ. ಐದು ಪ್ರಮುಖ ಟೋಲ್‌ಗಳ ವಿವರ ಈ ರೀತಿ ಇದೆ. ಮುಂಬೈನ ಐದು ಪ್ರಮುಖ ಟೋಲ್‌ಗಳಾದ ದಹಿಸರ್, ಮುಲುಂಡ್ ವೆಸ್ಟ್ (ಎಲ್‌ಬಿಎಸ್ ರಸ್ತೆ), ವಾಶಿ, ಏರೋಲಿ ಹಾಗೂ ಮುಲುಂಡ್ ಈಸ್ಟ್ ಟೋಲ್ ಬೂತ್‌ಗಳು ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+