IRCTC: ಮಹಾಕುಂಭ ಗ್ರಾಮ ಟೆಂಟ್ ಸಿಟಿ ನಿರ್ಮಾಣ: ಯಾತ್ರಿಕರಿಗೆ ಸಕಲ ಸೌಕರ್ಯಗಳು ಇಲ್ಲಿವೆ, ಬುಕ್ಕಿಂಗ್ ಹೇಗೆ?
ನವದೆಹಲಿ, ಜನವರಿ 10: ಭಾರತೀಯ ರೈಲ್ವೆ ಸೇವೆಯ ಪ್ರಮುಖ ಭಾಗವೇ ಆಗಿರುವ ಮತ್ತು ಪ್ರಯಾಣಿಕರಿಗೆ ಅಗತ್ಯ ಸೇವೆ ಪೂರೈಸುತ್ತಿರುವ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) 'ಮಹಾಕುಂಭ ಮೇಳ 2025'ದ ಯಾತ್ರಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಿದೆ. ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್‌ನಲ್ಲಿ 'ಮಹಾಕುಂಭ ಗ್ರಾಮ - IRCTC ಟೆಂಟ್ ಸಿಟಿ' ನಿರ್ಮಿಸಿ ಯಾತ್ರಿಕರ ಸ್ವಾಗತಕ್ಕೆ ಸಜ್ಜಾಗಿದೆ.
ರೈಲ್ವೆ ಪ್ರಯಾಣ, ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ, ಟಿಕೆಟ್ ಬುಕ್ಕಿಂಗ್, ಊಟೋಪಚಾರ, ಪ್ರವಾಸೋದ್ಯಮ ವಿಭಾಗದಲ್ಲಿ ಕಾರ್ಯ ನಿರತ IRCTC ಟೆಂಟ್ ಸಿಟಿ ಮೂಲಕ ಯಾತ್ರಿಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನೈನಿಯ ಸೆಕ್ಟರ್ -25 ಅರೈಲ್ ರಸ್ತೆಯಲ್ಲಿರುವ ತ್ರಿವೇಣಿ ಸಂಗಮದಿಂದ ಕೇವಲ 3.5 ಕಿ.ಮೀ ದೂರದಲ್ಲಿ ಟೆಂಟ್‌ಗಳನ್ನು ನಿರ್ಮಿಸಿದೆ.

ಹೆಸರೇ ಹೇಳುವಂತೆ ಕುಂಭ ಗ್ರಾಮದಲ್ಲಿ ಯಾತ್ರಿಕರಿಗೆ ಊಟೋಪಚಾರ ಮಾತ್ರವಲ್ಲದೇ, ಸ್ನಾನಗೃಹ, ಶೌಚಾಲಯಗಳು, ವಸತಿ ಸೌಕರ್ಯ, ವಾರದ ಏಳು ದಿನವು ಹಗಲು ರಾತ್ರಿ (24/7) ಬಿಸಿ ಮತ್ತು ತಣ್ಣೀರಿನ ವ್ಯವಸ್ಥೆ ಇದೆ. ಸೂಪರ್ ಡಿಲಕ್ಸ್ ಟೆಂಟ್‌ಗಳು ಮತ್ತು ವಿಲ್ಲಾ ಟೆಂಟ್‌ಗಳು ಇಲ್ಲಿವೆ. ಬೆಡ್, ಟವೆಲ್ ವಸ್ತಿ ಮೂಲಕ ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿದೆ. ಈ ಮೂಲಕ IRCTC ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.
ಟೆಂಟ್‌ನಲ್ಲಿ ಹೆಚ್ಚುವರಿ ಮತ್ತು ವಿಶಾಲ ಜಾಗಕ್ಕೂ ವ್ಯವಸ್ಥೆ ಮಾಡಿದ್ದಾರೆ. ಮಹಾಕುಂಭ ಮೇಳಕ್ಕೆ ಬರುವವರಿಗೆ ಆರಾಮದಾಯಕ, ಮನೆಯ ಅನುಭವ ನೀಡುವಂತೆ ವ್ಯವಸ್ಥೆ ಮಾಡಿದೆ. ಈ ಟೆಂಟ್‌ಗಳನ್ನು ಯಾರು ಬೇಕಾದರೂ ಬುಕ್ ಮಾಡಬಹುದಾಗಿದೆ ಎಂದು IRCTC ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಟೆಂಟ್ ತಾತ್ಕಾಲಿಕವಾದರೂ ಅತ್ಯಾಧುನಿಕ ವಸತಿ ಸೌಕರ್ಯಗಳನ್ನು ಹೊಂದಿವೆ. ಆಧುನಿಕ ಶೌಚ, ಸ್ನಾನ ಸೌಲಭ್ಯಗಳು ಇಲ್ಲಿವೆ. ಅತಿಥಿಗಳಿಗೆ ಅನುಕೂಲವಾಗುವಂತೆ ಟೆಂಟ್ ಸಿಟಿಯನ್ನು ತ್ರಿವೇಣಿ ಘಾಟ್‌ಗೆ ಸಮೀಪದಲ್ಲಿ ನಿರ್ಮಿಸಲಾಗಿದೆ. ಈ ಮೂಲಕಆಧಾತ್ಮಿಕ ಪ್ರಯಾಣವನ್ನು ಮತ್ತಷ್ಟು ಸುಖಮಯವಾಗಿಸುವ ಪ್ರಯತ್ನ ಇದಾಗಿದೆ.

ಯಾತ್ರಿಕರ ಸುರಕ್ಷತೆಗೆ ಆದ್ಯತೆ
ಸುರಕ್ಷತೆಗೆ ವಿಚಾರದಲ್ಲಿ ಯಾವುದೇ ಅಳುಕು ಹುಟ್ಟಬಾರದೆಂಬ ಕಾರಣಕ್ಕೆ ಸಿಸಿಟಿವಿ ಅಳವಡಿಕೆ ಂಆಡಲಿದ್ದು, ಅವು 24/7 ಕಣ್ಗಾವಲು ಮಾಡಲಿವೆ. ಅತಿಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಎಲ್ಲ ಸಮಯದಲ್ಲೂ ಅತಿಥಿಗಳು ಲಭ್ಯವಾಗುವಂತೆ ಮಹಾ ಕುಂಭ ಗ್ರಾಮ ಪ್ರಥಮ ಚಿಕಿತ್ಸಾ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿದೆ. ಎಂತಹದ್ದೆ ತುರ್ತು ವೇಳೆ ಇಲ್ಲಿ ವೈದ್ಯ ಸಿಬ್ಬಂದಿ ನೆರವಿಗೆ ಧಾವಿಸುವಂತೆ ನೋಡಿಕೊಳ್ಳಲಾಗುತ್ತಿದೆ.
ಮಹಾಕುಂಭ ಗ್ರಾಮ್ ಟೆಂಟ್ ಸಿಟಿ ಕುರಿತು..
ಮಹಾಕುಂಭ ಗ್ರಾಮ್ ಟೆಂಟ್ ಸಿಟಿಯ ಸೇವೆ ಬೇಕಾದಲ್ಲಿ ನೀವು ನೇರ ಬುಕಿಂಗ್ ಮಾಡಲು ಅವಕಾಶ ಇದೆ. IRCTC ಯ ರೈಲು ಪ್ರವಾಸ ಪ್ಯಾಕೇಜ್ ಹಾಗೂ ಭಾರತ್ ಗೌರವ್ ರೈಲುಗಳ ಮೂಲಕ ಯಾತ್ರಿಕರಿಗೆ ಪ್ರಯಾಣ ಸೇವೆ ನೀಡುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ, ಇಲ್ಲವೇ ಮುಂಚಿತವಾಗಿ ಬುಕ್ಕಿಂಗ್ ಮಾಡಲು IRCTC ಸಂಖ್ಯೆ 8076025236 ಗೆ ಸಂಪರ್ಕಿಸಬೇಕು. ಅಥವಾ [email protected] ಗೆ ಇಮೇಲ್ ಸಂದೇಶ ಕಳುಹಿಸುವಂತೆ ಕೋರಿದೆ.
'ಮಹಾಕುಂಭ ಟೆಂಟ್ ಸಿಟಿ 2025' ಬುಕ್ಕಿಂಗ್ ಹೇಗೆ?
ಮಹಾಕುಂಭ ಗ್ರಾಮ್ ಟೆಂಟ್ ಸಿಟಿಗಾಗಿ ಬುಕ್ ಮಾಡುವವರು ಮೊದಲು ಇಲ್ಲಿ ನೀಡಲಾಗಿರುವ ಅಧಿಕೃತ ವೆಬ್‌ಸೈಟ್ www.irctctourism.com/mahakumbhgram ಗೆ ಭೇಟಿ ನೀಡಬೇಕು. ಈ ವೆಬ್‌ಸೈಟ್‌ನಲ್ಲಿ ಈಗಾಗಲೇ ಬುಕ್ಕಿಂಗ್ ಆರಂಭಿಸಲಾಗಿದೆ.
IRCTC 'ಮಹಾಕುಂಭ ಟೆಂಟ್ ಸಿಟಿ'ಬುಕ್ಕಿಂಗ್ ವಿಧಾನ
* ಮೊದಲು IRCTC ವೆಬ್‌ಸೈಟ್‌ಗೆ www.irctctourism.com/mahakumbhgram ಭೇಟಿ ನೀಡಿ.
* ನಂತರ ನಿಮ್ಮ ಬ್ರೌಸರ್‌ನಲ್ಲಿ www.irctctourism.com/mahakumbhgram URL ಅನ್ನು ನಮೂದಿಸಿ ಅಧಿಕೃತ IRCTC ಮಹಾಕುಂಭ ಟೆಂಟ್ ಸಿಟಿ ಪುಟ ತೆರೆಯಬೇಕು.
* ಪುಟ ತೆರೆಯುತ್ತಿದ್ದಂತೆ IRCTC ಪಾಸವರ್ಡ್ ಹಾಕಿ ನೀವು ಲಾಗಿನ್ ಆಗಬೇಕು. (ಹೊಸದಾಗಿ ಲಾಗಿನ್ ಆಗುವವರು ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ ಸಹಿತ ಗೆಸ್ಟ್ ಪ್ರವೇಶಕರ ಮೂಲಕ ಲಾಗಿನ ಆಗಬೇಕು)
* ಪುಟ ತೆರೆಯುತ್ತಿದ್ದಂತೆ 'ಈಗಲೇ ಬುಕ್ ಮಾಡಿ" ಆಯ್ಕೆಯನ್ನು ಆಯ್ದುಕೊಳ್ಳಬೇಕು.
* ಇಲ್ಲಿ ಕಾಣುವ ಮಹಾಕುಂಭ ಗ್ರಾಮ ಮುಖಪುಟದಲ್ಲಿ 'ಬುಕ್ಕಿಂಗ್' ಮೇಲೆ ಕ್ಲಿಕ್ ಮಾಡಿ ಮುಂದುವರಿಯಬೇಕು.
* ನಂತರ ಅಲ್ಲಿ ಕೇಳಲಾಗುವ ನಿಮ್ಮ ವಸತಿ ವಿವರಗಳನ್ನು ನಮೂದಿಸಿ.
* ನಿಮ್ಮ ವಾಸ್ತವ್ಯ ಹೊಂದಾಣಿಕೆಯ ಸಮಯ ದಿನಾಂಕ, ಸ್ಥಳ, ಚೆಕ್ ಇನ್ ಮತ್ತು ಚೆಕ್ ಔಟ್ ಮಾಹಿತಿ ನೀಡಬೇಕು. ಕೊಠಡಿಗಳ ಸಂಖ್ಯೆಗಳು ನಿಮಗೆ ವೆಬ್‌ಸೈಟ್‌ನಲ್ಲಿ ಕಾಣಿಸುತ್ತವೆ.
* ಯಾವ ವಿಧದ ಟೆಂಟ್ ನಿಮಗೆ ಸರಿಹೊಂದುದಂತೆ ಎಂದು ನೋಡಿಕೊಂಡು ಬುಕ್ಕಿಂಗ್ ಮಾಡಬೇಕು. ನಿಮ್ಮ ಹಣಕಾಸು ಸಾಮರ್ಥ್ಯಕ್ಕೆ ಹೊಂದುವಂತೆ ನೀವು ಸೂಪರ್ ಡಿಲಕ್ಸ್ ಟೆಂಟ್‌ಗಳು ಮತ್ತು ವಿಲ್ಲಾ ಟೆಂಟ್‌ಗಳನ್ನು ಬುಕ್ ಮಾಡಲು ಅವಕಾಶ ಇದೆ.
* ಇದೆಲ್ಲ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನಿಮ್ಮ ಪೂರ್ತಿ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಹಾಗೂ ಅಲ್ಲಿ ಕೇಳುವ ವೈಯಕ್ತಿಕ ಮಾಹಿತಿ ನೀಡಬೇಕು.
* ವಿಳಾಸ ಭರ್ತಿ ಬಳಿಕ ಒಮ್ಮೆ ಪರಿಶೀಲಿಸಿಕೊಂಡು ನಂತರ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, UPI ಇನ್ನಿತರ ಡಿಜಿಟಲ್ ಆಯ್ಕೆಗಳ ಮೂಲಕ ಟೆಂಟ್‌ಗಳ ಹಣ ಪಾವತಿಸಿ ನೀವು ಬುಕ್ಕಿಂಗ್ ಮಾಡಿಕೊಳ್ಳಬೇಕು.
* ಹಣ ಪಾವತಿ ಆಗುತ್ತಿದ್ದಂತೆ ನೀವು ಬುಕ್ಕಿಂಗ್ ಖಚಿತತೆಯ ಇಮೇಲ್, ಸಂದೇಶ ನಿಮಗೆ ಬರುತ್ತದೆ. ಹೆಚ್ಚಿನ ಮಾಹಿತಿಗೆ ಮೇಲೆ ನೀಡಲಾದ ಸಂಖ್ಯೆಗೆ ಕರೆ ಮಾಡಿ, ಇಲ್ಲವೇ ಮೆಲ್ ವಿಳಾಸಕ್ಕೆ ಮೇಲ್ ಮಾಡಿ.












Click it and Unblock the Notifications