Maha Kumbh 2025: ಪ್ರಯಾಗ್ ರಾಜ್‌ನಲ್ಲಿ ಇದಕ್ಕಾಗಿ ಭಾರಿ ಡಿಮ್ಯಾಂಡ್!
ಮಹಾ ಕುಂಭ ಮೇಳ ಪ್ರಾರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದ್ದು ಕೋಟ್ಯಂತರ ಭಕ್ತರೂ ಪವಿತ್ರ ಧರ್ಮ ಸ್ನಾನ ಮಾಡಲು ಪ್ರಯಾಗ್‌ರಾಜ್ ಕಡೆಗೆ ಆಗಮಿಸುತ್ತಿದ್ದಾರೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾ ಕುಂಭ ಮೇಳ ನಡೆಯಲಿದ್ದು ಪ್ರಯಾಗ್ ರಾಜ್ ಮಹಾ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸಜ್ಜಾಗಿದೆ.
ಪ್ರಯಾಗ್ ರಾಜ್‌ಗೆ ಆಗಮಿಸಲು ಸಜ್ಜಾಗಿರುವ ಕೋಟ್ಯಂತರ ಭಕ್ತರು ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹತ್ತಿರದ ಹೋಟೆಲ್‌ಗಳು, ಪವಿತ್ರ ಸ್ನಾನದ ಸ್ಥಳದ ಮಾಹಿತಿಯನ್ನು ಹಲವು ವೆಬ್‌ಸೈಟ್‌ಗಳು ಈಗಾಗಲೇ ಪ್ರಕಟಿಸಿವೆ.

ಟ್ರಾವೆಲ್‌ಗೆ ಸಂಬಂಧಪಟ್ಟ ವೆಬ್‌ಸೈಟ್ ಆಗಿರುವ ಮೇಕ್ ಮೈಟ್ರಿಪ್‌ನಲ್ಲಿ ಪ್ರಯಾಗ್ ರಾಜ್ ಬಗ್ಗೆ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಮೇಕ್‌ಮೈಟ್ರಿಪ್ ಸಿಇಒ ಮತ್ತು ಸಹ-ಸಂಸ್ಥಾಪಕ ರಾಜೇಶ್ ಮಾಗೋವ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಾ ಕುಂಭ ಮೇಳದಿಂದ ಪ್ರಯಾಗ್ ರಾಜ್ ಬಗ್ಗೆ ಹುಡುಕುವವರ ಸಂಖ್ಯೆ ಕಳೆದ ವರ್ಷಕ್ಕಿಂತ 23 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.
"ದೇಶಾದ್ಯಂತ ಮೂಲೆ ಮೂಲೆಯಿಂದ ಭಕ್ತರು ಮಹಾ ಕುಂಭ ಮೇಳಕ್ಕೆ ಆಗಮಿಸಲು ಯೋಜನೆ ರೂಪಿಸುತ್ತಿದ್ದಾರೆ. ಮೇಕ್‌ಮೈಟ್ರಿಪ್‌ನಲ್ಲಿ ಪ್ರಯಾಗ್‌ರಾಜ್‌ಗಾಗಿ ಹುಡುಕಾಟ ನಡೆಸುವವರ ಸಂಖ್ಯೆ ಕಳೆದ ವರ್ಷಕ್ಕಿಂತ 23 ಪಟ್ಟು ಹೆಚ್ಚಾಗಿದೆ" ಎಂದು ರಾಜೇಶ್ ಮಾಗೋವ್ ಹೇಳಿದ್ದಾರೆ.
ಟೆಂಟ್‌ಗಳಿಗೆ ಭಾರಿ ಬೇಡಿಕೆ
ಮಹಾ ಕುಂಭ ಮೇಳದ ಉದ್ಘಾಟನೆ ಮತ್ತು ಮುಕ್ತಾಯದ ವಾರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಗ್ ರಾಜ್‌ಗೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ರಾಜೇಶ್ ಮಾಗೋವ್ ಹೇಳಿದ್ದಾರೆ.
ಕುಂಭ ಮೇಳದಲ್ಲಿ ಟೆಂಟ್‌ಗೆ ಭಾರಿ ಬೇಡಿಕೆ
ಪ್ರಯಾಗ್ ರಾಜ್‌ನಲ್ಲಿ ಟೆಂಡ್ ವಸತಿ ಸಹಿತ ಪ್ರಯಾಣ ಪ್ಯಾಕೇಜ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ರಾಜೇಶ್ ಮಾಗೋವ್ ಮಾಹಿತಿ ನೀಡಿದ್ದಾರೆ. ಭಕ್ತರು ಮಹಾ ಕುಂಭದ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಿರುವ ಕಾರಣ ಟೆಂಟ್ ವಸತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೇಕ್ ಮೈ ಟ್ರಿಪ್ ಕುಂಭ ಮೇಳಕ್ಕಾಗಿ ಎಂಟು ವಿಶೇಷವಾದ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದ್ದು ಬೇಡಿಕೆ ಹೆಚ್ಚಾಗಿದೆ. ಕುಟುಂಬ ಮತ್ತು ಗುಂಪಾಗಿ ಪ್ರವಾಸ ಮಾಡಲು ಹೆಚ್ಚಿನ ಮಂದಿ ಬುಕ್ ಮಾಡುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಮಾಹಿತಿಯ ಪ್ರಕಾರ ದೇಶ, ವಿದೇಶಗಳಿಂದ, ವಿವಿಐಪಿಗಳು, ಕೋಟ್ಯಧಿಪತಿಗಳು ಸೇರಿದಂತೆ ಸುಮಾರು 40 ರಿಂದ 45 ಕೋಟಿ ಪ್ರವಾಸಿಗರು ಕುಂಭ ಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.












Click it and Unblock the Notifications