ವಿಧಾನಸಭೆ ಚುನಾವಣೆಗೂ ಮುನ್ನವೇ ಮಧ್ಯಪ್ರದೇಶದ ಬಿಜೆಪಿಯಲ್ಲಿ ಭಾರೀ ಬಂಡಾಯ: ಕರ್ನಾಟಕ ಫಲಿತಾಂಶದ ಪರಿಣಾಮ?
ಭೋಪಾಲ್, ಮೇ 26: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಪಕ್ಷದ ಹಿರಿಯ ಹಾಗೂ ಪ್ರಮುಖ ನಾಯಕ ಧ್ರುವ ಪ್ರತಾಪ್ ಸಿಂಗ್ ಇದೀಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಕಳೆದ ಎಂಟು ವರ್ಷಗಳಿಂದ ಪಕ್ಷದಲ್ಲಿ ತಮ್ಮನ್ನು ದೂರವಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಾಜಿ ಸಚಿವ ದೀಪಕ್ ಜೋಶಿ (ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರಿದ್ದಾರೆ) ಸೇರಿದಂತೆ ಹೆಚ್ಚಿನ ಅತೃಪ್ತ ಬಿಜೆಪಿ ನಾಯಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ನಿಷ್ಠಾವಂತರ ಪ್ರಭಾವವು ಪಕ್ಷದಲ್ಲಿ ಹೆಚ್ಚುತ್ತಿದೆ ಎಂದು ಅವರು ದೂಷಿಸಿದ್ದಾರೆ. ಕಟ್ನಿ ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆದು 2014 ರಲ್ಲಿ ಬಿಜೆಪಿ ಸೇರಿದ ಹಾಲಿ ಶಾಸಕ ಮತ್ತು ಮಾಜಿ ಸಚಿವ ಸಂಜಯ್ ಪಾಠಕ್ ಅವರ ಪ್ರಾಬಲ್ಯವಾಗಿದೆ. ಈಗ ಅಸಮಾಧಾನಗೊಂಡಿರುವ ಧ್ರುವ ಪ್ರತಾಪ್ ಸಿಂಗ್ ಅವರೂ ಸಹ ಕಟ್ನಿ ಜಿಲ್ಲೆಗೆ ಸೇರಿದವರು.

'ಕಳೆದ ಎಂಟು ವರ್ಷಗಳಿಂದ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪಕ್ಷವು ನನ್ನನ್ನು ಯಾವುದೇ ಕೆಲಸಕ್ಕೆ ಅರ್ಹನನ್ನಾಗಿ ಭಾವಿಸಿಲ್ಲ' ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ನನ್ನನ್ನು ಮರೆತಂತಿದೆ. ಎಂಟು ವರ್ಷಗಳ ಹಿಂದೆ (ಸಂಜಯ್ ಪಾಠಕ್ ಬಿಜೆಪಿಗೆ ಸೇರುವ ಮೊದಲು) ನಾನು ಕಟ್ನಿ ಜಿಲ್ಲೆಯಲ್ಲಿನ ಪ್ರತಿಯೊಂದು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಗ ಪರಿಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಪ್ರಸ್ತುತ ಪಕ್ಷದ ರಾಜ್ಯ ಅಧ್ಯಕ್ಷ ವಿಡಿ ಶರ್ಮಾ (ಕಟ್ನಿ ಜಿಲ್ಲೆಯ ಸ್ಥಳೀಯ ಸಂಸದ) ಬಹುಶಃ ನನ್ನನ್ನು ಗುರುತಿಸುವುದಿಲ್ಲ ಎಂದು ಸಿಂಗ್ ಗುರುವಾರ ಹೇಳಿದ್ದಾರೆ.

ಸಂಸದ, ಸಿಎಂ ಸೇರಿದಂತೆ ರಾಜ್ಯದಲ್ಲಿನ ಪಕ್ಷದ ಉನ್ನತ ನಾಯಕತ್ವವನ್ನು ಭೇಟಿ ಮಾಡಲು ಆಗುತ್ತಿಲ್ಲ. ಪ್ರಸ್ತುತ ಭೋಪಾಲ್‌ನಲ್ಲಿರುವ ಸಿಂಗ್ ಅವರು 1980 ರಿಂದ ಬಿಜೆಪಿಯಲ್ಲಿದ್ದಾರೆ. ಅವರು ವಿಜಯರಾಘವ್‌ಗಢ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಹಾಲಿ ಶಾಸಕ ಮತ್ತು ಸಚಿವ ಸತ್ಯೇಂದ್ರ ಪಾಠಕ್ ಅವರನ್ನು ಸೋಲಿಸಿದ್ದರು.
2003 ಹಾಗೂ 2008 ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಸಿಂಗ್ ಅವರು ಪಾಠಕ್ ಅವರ ಮಗ ಸಂಜಯ್ ಪಾಠಕ್ ವಿರುದ್ಧ ಸೋತರು. 2013ರಲ್ಲಿಯೂ ಗೆದ್ದಿದ್ದ ಸಂಜಯ್, ಕಾಂಗ್ರೆಸ್ ತೊರೆದು 2014ರಲ್ಲಿ ಬಿಜೆಪಿ ಸೇರಿದರು. ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು.
2014ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಸಂಜಯ್ ಪಾಠಕ್ ಅವರ ಎಂಟು ವರ್ಷಗಳಿಂದ ಕಟ್ನಿ ಜಿಲ್ಲೆಯಲ್ಲಿ ಪಕ್ಷವು ಪ್ರಾಬಲ್ಯ ಮೆರೆದಿದೆ ಎಂದು ಶಾಸಕ ಧ್ರುವ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ. ಈ ಅಸಮಾಧಾನ ಮಧ್ಯಪ್ರದೇಶದಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕ ಚುನಾವಣಾ ಫಲಿತಾಂಶದ ಬಳಿಕ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಬಿಜೆಪಿಯಲ್ಲಿ ಬಂಡಾಯ ಕಂಡುಬಂದಿದೆ. ಈ ಎರಡೂ ರಾಜ್ಯಗಳಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ.












Click it and Unblock the Notifications