Madhya Pradesh; ಚಿಂದ್ವಾರಾದಲ್ಲಿ ಮಾಜಿ ಸಿಎಂ ಕಮಲ್‌ನಾಥ್ ಮುನ್ನಡೆ

ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023ರಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಆದರೆ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಚಿಂದ್ವಾರಾ ಕ್ಷೇತ್ರದಲ್ಲಿ ಎದುರಾಳಿ ಬಿಜೆಪಿಯ ವಿವೇಕ್ ಬಂಟಿ ಶಾಹೂ ವಿರುದ್ಧ ಮುನ್ನಡೆಯಲ್ಲಿದ್ದಾರೆ.

ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆ ಮತ ಎಣಿಕೆ ಭಾನುವಾರ ನಡೆಯುತ್ತಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.

Madhya Pradesh Election Results 2023 Kamal Nath Leading In Chhindwara Seat

ಸದ್ಯದ ಮಾಹಿತಿಯಂತೆ ಬಿಜೆಪಿ 162, ಕಾಂಗ್ರೆಸ್ 65, ಬಿಎಸ್‌ಪಿ 2 ಮತ್ತು ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಆದರೆ ಸಮೀಕ್ಷೆಗಳ ವರದಿ ಉಲ್ಟಾ ಆಗಿದೆ.

ಕಮಲ್‌ ನಾಥ್ ಕಮಾಲ್; ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್‌ ನಾಥ್ ಚಿಂದ್ವಾರಾ ಕ್ಷೇತ್ರದಲ್ಲಿ 51,696 ಮತಗಳನ್ನು ಪಡೆದು ಮುನ್ನಡೆ ಪಡೆದಿದ್ದಾರೆ. ಬಿಜೆಪಿಯ ವಿವೇಕ್ ಬಂಟಿ ಶಾಹೂ ಕ್ಷೇತ್ರದಲ್ಲಿ 38,199 ಮತಗಳನ್ನು ಪಡೆದಿದ್ದಾರೆ.

ಚಿಂದ್ವಾರಾ ಕ್ಷೇತ್ರದ ಈ ಬಾರಿಯ ಚುನಾವಣಾ ಕಣ ಕುತೂಹಲ ಮೂಡಿಸಿತ್ತು. ಈಗ ಒಟ್ಟು 10 ಸುತ್ತುಗಳ ಎಣಿಕೆ ಪೂರ್ಣಗೊಂಡಿದೆ. ಕಮಲ್‌ನಾಥ್ ಮತ್ತು ವಿವೇಕ್ ಬಂಟಿ ಶಾಹೂ ನಡುವೆ ನೇರ ಸ್ಪರ್ಧೆ ಇದೆ. 16 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಕಮಲ್‌ನಾಥ್ ಮುನ್ನಡೆಯಲ್ಲಿದ್ದಾರೆ.

ಬೆಳಗ್ಗೆ ಮತ ಎಣಿಕೆ ಆರಂಭವಾದಾಗ ಕಮಲ್‌ನಾಥ್ 28,117 ಮತ್ತು ವಿವೇಕ್ ಬಂಟಿ 17,982 ಮತಗಳನ್ನು ಪಡೆದಿದ್ದರು. ಬಳಿಕ ವಿವೇಕ್ ಬಂಟಿ ಮುನ್ನಡೆ ಸಾಧಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಚಿಂದ್ವಾರಾದಲ್ಲಿ ಕಮಲ್‌ನಾಥ್ ಹಿನ್ನಡೆ ಅನುಭವಿಸಿದರು. ಈಗ ಮತ್ತೆ ಕಮಲ್‌ನಾಥ್ ಮುನ್ನಡೆಗೆ ಬಂದಿದ್ದಾರೆ.

2019ರ ಉಪ ಚುನಾವಣೆಯಲ್ಲಿ ಚಿಂದ್ವಾರಾದಲ್ಲಿ ಗೆಲುವು ಸಾಧಿಸಿದ ಕಮಲ್‌ನಾಥ್ ಕ್ಷೇತ್ರದ ಹಾಲಿ ಶಾಸಕರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ದೀಪಕ್ ಸಕ್ಸೇನಾ 104,034 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

ಕ್ಷೇತ್ರದಲ್ಲಿ 2013ರಲ್ಲಿ ಬಿಜೆಪಿಯ ಚೌಧರಿ ಕುಬೇರ್ ಸಿಂಗ್ 97,769 ಮತಗಳ ಅಂತರದಲ್ಲಿ ಗೆದ್ದಿದ್ದರು. ಆಗ ದೀಪಕ್ ಸಕ್ಸೇನಾ ಸೋಲು ಕಂಡಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ತನ್ನವಶಕ್ಕೆ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+