ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ ಮೂರನೇ ಮಹಿಳೆ ಮಾಧುರಿ

ನವದೆಹಲಿ, ಫೆಬ್ರವರಿ 29: ಸೇನಾ ಪಡೆಗಳಲ್ಲಿ ಉನ್ನತ ಅಧಿಕಾರಗಳಿಗೆ ಏರಲು ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅರ್ಹತೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮೇಜರ್ ಜನರಲ್ ಮಾಧುರಿ ಕಾನಿಟ್ಕರ್ ಅವರಿಗೆ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ದೊರಕಿದೆ.

ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರು ಶನಿವಾರ ನವದೆಹಲಿಯಲ್ಲಿ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಡಿಸಿಐಡಿಎಸ್), ಮೆಡಿಕಲ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅಡಿ) ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.

ಈ ಮೂಲಕ ಮಾಧುರಿ ಅವರು ಸಶಸ್ತ್ರ ಪಡೆಯಿಂದ ಈ ಹುದ್ದೆಗೆ ಏರಿದ ದೇಶದ ಮೂರನೇ ಮಹಿಳೆ ಹಾಗೂ ಮೊದಲ ಶಿಶುವೈದ್ಯೆ ಎಂಬ ಖ್ಯಾತಿಗೆ ಒಳಗಾದರು. ಮಾಧುರಿ ಅವರ ಪತಿ ರಾಜೀವ್ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದು, ಈ ಶ್ರೇಣಿಗೆ ಏರಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಧುರಿ ಅವರು ಭಾರತೀಯ ಸೇನೆಯಲ್ಲಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

Madhuri Kanitkar Third Woman As Assume Lt General Rank

'ಈ ಸಂಸ್ಥೆಯು ನ್ಯಾಯಸಮ್ಮತ, ಪಾರದರ್ಶಕ, ಗೌರವಯುತ ಮತ್ತು ಮಹಿಳೆಯರಿಗೆ ಸುರಕ್ಷಿತವಾಗಿದೆ. ಮಹಿಳೆಯರಿಗೆ ಇಲ್ಲಿ ಬೆಳೆಯಲು ಅವಕಾಶಗಳನ್ನು ನೀಡಲಾಗುತ್ತದೆ. ಮಕ್ಕಳಲ್ಲಿ ಇರುವ ಉತ್ಸಾಹದೊಂದಿಗೆ ಸಮವಸ್ತ್ರದಲ್ಲಿ ಇಲ್ಲಿ ಪ್ರತಿದಿನವನ್ನೂ ಸಂಭ್ರಮಿಸಬಹುದು. ಅಸಾಧ್ಯವಾದದ್ದನ್ನು ಸಾಧಿಸಲು ನಿಮಗೆ ನೀವು ಸವಾಲು ಹಾಕಿಕೊಳ್ಳಿ' ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+