ಚುನಾವಣೆ ಸಮಯದಲ್ಲಿ ಕೋಟಿ ರೂ ಬಂಗಲೆ ಖರೀದಿ

ಅಮೃತಸರ, ಏ.14: ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಅವರು ಮತದಾರರಿಗೆ 'ನಾನು ನಿಮ್ಮವನೇ' ಎಂಬುದನ್ನು ಸಾಬೀತುಪಡಿಸಲು ತಾವು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ 1 ಕೋಟಿ ರೂ. ಗೂ ಅಧಿಕ ಹಣ ತೆತ್ತು 5 ಕೊಠಡಿಗಳ ಭವ್ಯ ಬಂಗಲೆಯನ್ನು ಖರೀದಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆ ಎದುರಿಸುವುದೆಂದರೆ ಹೀಗೂ ಉಂಟೇ ಎಂಬಂತೆ ಆಶ್ಚರ್ಯ ಹುಟ್ಟಿಸಿರುವ ಅರುಣ್ ಜೇಟ್ಲಿ ಅವರು ಹುಟ್ಟಿದ್ದು ಅಮೃತಸರದಲ್ಲೇ. ಆದರೆ ಅವರ ಪ್ರತಿಸ್ಪರ್ಧಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಚಾರದ ವೇಳೆ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸುತ್ತಾ 'ಚುನಾವಣೆ ನಂತರ ಜೇಟ್ಲಿ ದೆಹಲಿಯಲ್ಲಷ್ಟೇ ಕಾಣಿಸಿಕೊಳ್ಳುತ್ತಾರೆ. ಅವರು ಅಮೃತಸರದಲ್ಲಿರುವುದಿಲ್ಲ. ಇಲ್ಲಿ ಅವರಿಗೆ ಮನೆಯೂ ಇಲ್ಲ' ಎಂದು ಛೇಡಿಸಿದ್ದರು. ಅಮರಿಂದರ್ ಇದೀಗ 'ದಮ್ಮಿದ್ದರೆ ಜೇಟ್ಲಿ ಭಾರತ-ಪಾಕ್ ಗಡಿಯಲ್ಲಿ ಮನೆ ಖರೀದಿಸಲಿ' ಎಂದು ಹೊಸ ಸವಾಲು ಹಾಕಿದ್ದಾರೆ!

ls-polls-bjp-candidate-arun-jaitley-buys-house-worth-rs-1-cr-amritsar
ಇದಕ್ಕೆ ಉತ್ತರ ನೀಡುವ ಭರದಲ್ಲಿ ಅರುಣ್ ಜೇಟ್ಲಿ ದೊಡ್ಡ ಮನೆಯನ್ನೇ ಖರೀದಿಸಿದ್ದಾರೆ. ಆದರೆ ಇದನ್ನು ಜೇಟ್ಲಿಯ ಚುನಾವಣೆ ಲೆಕ್ಕಕ್ಕೆ ಸೇರಿಸಬೇಕು ಎಂದು ಪ್ರತಿಸ್ಪರ್ಧಿಗಳು ಅದಾಗಲೇ ಆಯೋಗದ ಮೊರೆಹೋಗಿದ್ದಾರೆ. ಹಾಲಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣೆಗೆಂದು ಗರಿಷ್ಠ ತಲಾ 70 ಲಕ್ಷ ರೂ. ಮಾತ್ರ ಖರ್ಚು ಮಾಡಬಹುದು. ಗಮನಾರ್ಹವೆಂದರೆ ಜೇಟ್ಲಿ ಪ್ರಖಾಂಡ ಕಾನೂನು ಪಂಡಿತ. ಇದನ್ನೆಲಾ ಮುಂದಾಲೋಚಿಸಿಯೇ ಮನೆ ಖರೀದಿ ಮಾಡಿರುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಅಮೃತಸರದ ಪ್ರತಿಷ್ಠಿತ ಬಡಾವಣೆಯಲ್ಲಿ ಮನೆ ಖರೀದಿಸಿರುವ ಜೇಟ್ಲಿ, ಈ ಮನೆಗೆ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದಿದ್ದಾರೆ. ಜೇಟ್ಲಿ ಅವರ ನೂತನ ಮನೆ ಸಿಖ್ಖರ ಪವಿತ್ರ ಸ್ಥಳವಾದ ಗೋಲ್ಡನ್ ಟೆಂಪಲ್ ನಿಂದ 3 ಕಿಮೀ ದೂರದಲ್ಲಿದೆ. ಜೇಟ್ಲಿ ಮನೆ ಮೇಲೆ ಬಿಜೆಪಿ ಬಾವುಟ ಹಾರಾಡುತ್ತಿದ್ದರೆ ರಸ್ತೆಯಲ್ಲಿನ ಇತರೆ ಮನೆಗಳ ಮೇಲೂ ಬಿಜೆಪಿ ಬಾವುಟ ಹಾರುತ್ತಿದೆ. ಬಡಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರಿದಯಾಗಿದೆ.

Green Avenue ರಸ್ತೆಯ ಮನೆ ನಂಬರ್ 343 ಇದೀಗ ಜೇಟ್ಲಿ ಅವರದ್ದಾಗಿದ್ದು ಇಂದಿನಿಂದ ಇದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಎನ್ ಡಿಎ ಮಿತ್ರ ಪಕ್ಷವಾದ ಶಿರೋಮಣಿ ಅಕಾಲಿ ದಳದ ನಾಯಕ, ರಾಜ್ಯ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಾಜಿತಿಯಾ ಅವರ ಮನೆಯೂ ಇದೇ ರಸ್ತೆಯಲ್ಲಿದೆ. ಕ್ಷೇತ್ರದ ಹಾಲಿ ಸಂಸದ ನವಜೋತ್ ಸಿಂಗ್ ಸಿದ್ದು ಅವರ ಮನೆ ಇಲ್ಲಿಂದ ಸುಮಾರು 1.5 ಕಿಮೀ ದೂರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+