ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು

By Mahesh
|
Google Oneindia Kannada News

ನವದೆಹಲಿ, ನ.15: ವಾರ್ಷಿಕ 10 ಲಕ್ಷ ರು.ಗಿಂತಲೂ ಅಧಿಕ ಆದಾಯ ಹೊಂದಿರುವವರಿಗೆ ಎಲ್​ಪಿಜಿ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸುಳಿವು ನೀಡಿದ್ದಾರೆ.

ಹೈದರಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಎಲ್ ಪಿಜಿ ಸಬ್ಸಿಡಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವೆಂಕಯ್ಯ ನಾಯ್ಡು ಅವರು, ಸ್ಥಿತಿವಂತರಿಗೆ ಏಕೆ ಸಬ್ಸಿಡಿ? ಸಚಿವರುಗಳಿಗೆ ಏಕೆ ಸಬ್ಸಿಡಿ? ಎಂದು ಮರು ಪ್ರಶ್ನಿಸಿದರು.

LPG subsidy for consumers with over Rs.10 lakh income to be lifted

ದೇಶದೆಲ್ಲೆಡೆ ಅಕ್ರಮವಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿರುವುದನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿರುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ .

ಇದಕ್ಕೆ ಪೂರಕವಾಗಿ ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಸಬ್ಸಿಡಿ ಸಿಲಿಂಡರ್​ಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ದೇಶಾದ್ಯಂತ 30 ಲಕ್ಷ ಜನರು ಸಬ್ಸಿಡಿ ವಾಪಸ್ ಮಾಡಿದ್ದಾರೆ. ಬಡವರಿಗಾಗಿಯೇ ಸಬ್ಸಿಡಿ ಸಿಲಿಂಡರ್ ನೀಡುತ್ತಿರುವುದು, ಹೀಗಿರುವಾಗ 10 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಸಬ್ಸಿಡಿ ಅಗತ್ಯವಿಲ್ಲ ಎಂದು ಸಚಿವ ನಾಯ್ಡು ಅಭಿಪ್ರಾಯಪಟ್ಟರು.(ಐಎಎನ್ಎಸ್)

English summary
The central government is planning to withdraw subsidy on cooking gas for people with annual income of over Rs.10 lakh, union minister M. Venkaiah Naidu said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X