ಕಡಿಮೆ ಬೆಲೆಗೆ ಎಲ್‌ಪಿಜಿ ಸಿಲಡರ್ ಪಡೆಯೋದೇಗೆ? ಇಲ್ಲಿವೆ ಅನುಸರಿಸಬೇಕಾದ ಸರಳ ಮಾರ್ಗಗಳು
LPG Price Cut: ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮತ್ತೊಂದೆಡೆ, ಇಂತಹದ್ಧರದಲ್ಲೂ ಕಡಿಮೆ ಬೆಲೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಇಲ್ಲಿರುವ ಸರಳ ಮಾರ್ಗಗಳನ್ನು ಅನುಸರಿಸಿದ್ರೆ ಮಾತ್ರ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕೇಂದ್ರ ಸರ್ಕಾರ ಜನರಿಗೆ ಅನುಕೂನ ಆಗುವಂತೆ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲಿರುತ್ತದೆ. ಈಗಾಗಲೇ ಹಲವು ಪ್ರಮುಖ ಯೋಜನೆಗಳನ್ನು ತಂದಿದ್ದು, ಇವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಒಂದಾಗಿದೆ. ಈ ಯೋಜನೆ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳ ಸಂಪರ್ಕವನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು 2016ರಲ್ಲಿ ಆರಂಭಿಸಲಾಯಿತು.

ಈಗಿರುವ ಪ್ರಸ್ತುತ ಪಿಎಂ ಉಜ್ವಲ ಯೋಜನೆಯಡಿಯಲ್ಲಿ 25,00,000 ಹೊಸ ಸಿಲಿಂಡರ್ ಸಂಪರ್ಕ ಒದಗಿಸಲು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ 676 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪ್ರತಿ ಸಿಲಿಂಡರ್ ಬಳಕೆದಾರರಿಗೆ 300 ರೂಪಾಯಿಗಳ ಅನುದಾನವನ್ನ ನೀಡಲಾಗುತ್ತದೆ.
ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಲಿಂಡರ್, ಅನಿಲ ಒತ್ತಡ ನಿಯಂತ್ರಕ, ಸುರಕ್ಷಾ ಮೃದು ಕೊಳವೆ ಮತ್ತು ಸ್ಟೌವ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಫಲಾನುಭವಿಗಳಿಗೆ ಮೊದಲ ಸಿಲಿಂಡರ್ ಹಾಗೂ ಸ್ಟೌವ್‌ಗೆ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳು
* ಬಡ ಕುಟುಂಬಕ್ಕೆ ಸೇರಿದ ಮತ್ತು ಮನೆಯಲ್ಲಿ ಎಲ್‌ಪಿಜಿ ಸಂಪರ್ಕ ಹೊಂದಿರದ ವಯಸ್ಕ ಮಹಿಳೆಯರಾಗಿರಬೇಕು.
* ಎಸ್‌ಇಸಿಸಿ 2011 ಪಟ್ಟಿಯ ಪ್ರಕಾರ ಅರ್ಹರಾಗಿರಬೇಕು.
* ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅಂತ್ಯೋದಯ ಅನ್ನ ಯೋಜನೆ (AAY), ಅರಣ್ಯವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು (MBC), ಬುಡಕಟ್ಟು ಜನಾಂಗದವರು, ನದಿ ದ್ವೀಪಗಳಲ್ಲಿ ವಾಸಿಸುವ ಜನರು ಅರ್ಹರಾಗಿರುತ್ತಾರೆ.
ಬೇಕಾಗುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಪಡಿತರ ಚಿಟಿ
* ವಿಳಾಸ ಪುರಾವೆ
* ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ
* ಬ್ಯಾಂಕ್ ವಿವರ
ಅರ್ಜಿ ಸಲ್ಲಿಸುವ ವಿಧಾನಗಳು
* ಅರ್ಜಿಯನ್ನು ಆನ್‌ಲೈನ್ ಮೂಲಕ ಯೋಜನೆಯ ಅಧಿಕೃತ ಅಂತರ್ಜಾಲ ತಾಣ http://www.pmuy.gov.in/e-kyc.htmlಗೆ ಭೇಟಿ ನೀಡಿ.
* ಇಂಡೇನ್, ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ತೈಲ ಕಂಪನಿ ಹೆಸರನ್ನು ಆಯ್ಕೆ ಮಾಡಿ
* ಸಂಪರ್ಕದ ಪ್ರಕಾರವನ್ನು ಆಯ್ಕೆ ಮಾಡಿ
* ರಾಜ್ಯ, ಜಿಲ್ಲೆ ಮತ್ತು ವಿತರಕರ ಹೆಸರನ್ನು ಆಯ್ಕೆ ಮಾಡಿ
* ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ
* ವಲಸೆ ಕುಟುಂಬದವರಾಗಿದ್ದರೆ, ಹೌದು ಅಥವಾ ಇಲ್ಲ ಆಯ್ಕೆ ಮಾಡಿ
* ರೇಷನ್ ಕಾರ್ಡ್ ಮಾಹಿತಿಯನ್ನು ಭರ್ತಿ ಮಾಡಿ
* ವರ್ಗವನ್ನು ಆಯ್ಕೆ ಮಾಡಿ
* ಕುಟುಂಬದ ವಿವರ, ವೈಯಕ್ತಿಯ ವಿವರ, ವಿಳಾಸ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
* ಗ್ರಾಮ/ನಗರವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ
* ನೋಂದಣಿ ಸಂಖ್ಯೆ ಪಡೆದು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ
ಹೀಗೆ ಕೆಂದ್ರ ಸರ್ಕಾರ ಬಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಬರುವ ಗ್ರಾಹಕರು ಪ್ರತಿ ತಿಂಗಳು ಸಬ್ಸೀಡಿಯನ್ನು ಕೂಡ ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ತುಂಬಾ ಸಹಾಯ ಆದಂತಾಗಲಿದೆ.












Click it and Unblock the Notifications