• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಈಗಾಗಲೇ ದೇಶದ ಜನತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಕಷ್ಟಕ್ಕೆ ಸಿಲುಕಿದೆ. ಇದೀಗ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಂದೇ ಬಾರಿಗೆ 100 ರೂ ಹೆಚ್ಚಳವಾಗುವ ಸಾಧ್ಯತೆ ಇದು, ಸರ್ಕಾರ ಜನರ ಮೇಲೆ ಮತ್ತೊಂದು ಬರೆ ಎಳೆಯಲು ಹೊರಟಂತಿದೆ. ನವೆಂಬರ್ 1ರಂದು ಪರಿಷ್ಕರಣೆಯಾಗಲಿರುವ ಎಲ್‌ಪಿಜಿಸಿಲಿಂಡರ್ ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ.

LPG ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ; ಇಂದಿನಿಂದಲೇ ಹೊಸ ಬೆಲೆ ಜಾರಿ...LPG ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ; ಇಂದಿನಿಂದಲೇ ಹೊಸ ಬೆಲೆ ಜಾರಿ...

ಆದರೆ ಹೀಗೆ ವಾಸ್ತವ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಇದೀಗ ಪ್ರತಿ ಸಿಲಿಂಡರ್‌ ಮೇಲೆ ಅನುಭವಿಸುತ್ತಿರುವ ನಷ್ಟ100 ರು. ದಾಟಿದೆ. ಹೀಗಾಗಿ ನ.1ರಂದು ಮಾಡಲಾಗುವ ಪರಿಷ್ಕರಣೆ ವೇಳೆ ಹೆಚ್ಚಿನ ಪ್ರಮಾಣದ ದರ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಜುಲೈನಿಂದ ಈವರೆಗೆ 14 ಕೆಜಿಯ ಸಿಲಿಂಡರ್‌ ಬೆಲೆಯಲ್ಲಿ 90 ರುಪಾಯಿ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದು, ಸೌದಿಯಲ್ಲಿ ಎಲ್‌ಪಿಜಿ ಬೆಲೆ ಶೇ.60ರಷ್ಟುಏರಿಕೆಯಾಗಿದ್ದು, 1 ಟನ್‌ ಎಲ್‌ಪಿಜಿ ಬೆಲೆ 60 ಸಾವಿರ ದಾಟಿದೆ. ಇನ್ನು 1 ಬ್ಯಾರಲ್‌ ಬ್ರೆಂಟ್‌ ಕಚ್ಚಾ ತೈಲದ ಬೆಲೆ 6400 ರುಪಾಯಿ ದಾಟಿದೆ. ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ನಷ್ಟಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.

ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆದರಗಳಿಗೆ ಅನ್ವಯವಾಗಿ ಪ್ರತಿ 15 ದಿನಕ್ಕೊಮ್ಮೆ ಎಲ್‌ಪಿಜಿ ದರ ಪರಿಷ್ಕರಣೆ ಮಾಡುತ್ತಿದೆ. ಆದರೆ ಎಲ್‌ಪಿಜಿ ದರ ಭಾರೀ ಏರಿಕೆಯಾದ ಹೊರತಾಗಿಯೂ ಏಕಾಏಕಿ ಅದರ ಹೊರೆಯನ್ನು ಜನರಿಗೆ ಹೊರಿಸದೇ ಇರಲು ಸರ್ಕಾರ ನಿರ್ಧರಿಸಿದ ಕಾರಣ ಪ್ರತಿ 15 ದಿನಗಳಿಗೊಮ್ಮೆ 25 ರು. ಏರಿಕೆ ಮಾಡುತ್ತಾ ಬರುತ್ತಿದೆ. ಹಿಂದಿನ ಪರಿಷ್ಕರಣೆ ವೇಳೆ 15 ರು. ಹೆಚ್ಚಳ ಮಾಡಲಾಗಿತ್ತು.

ಕಳೆದ ಎರಡು ದಿನ ಸ್ಥಿರವಾಗಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ ಯಥಾಪ್ರಕಾರ ಬುಧವಾರ ಏರಿಕೆಯಾಗಿದ್ದು, ಮತ್ತೆ 35 ಪೈಸೆ ಹೆಚ್ಚಳವಾಗಿದೆ. ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 107.99 ರು.,ಬೆಂಗಳೂರಲ್ಲಿ 111.70 ರು.ಗೆ, ಮುಂಬೈನಲ್ಲಿ 113. 80 ರು.ಗೆ ತಲುಪಿದೆ. ಇನ್ನು ಡೀಸೆಲ್‌ ದೆಹಲಿಯಲ್ಲಿ 96.67 ರು.ಗೆ, ಬೆಂಗಳೂರಲ್ಲಿ 102.60 ರು.ಗೆ ಮುಂಬೈನಲ್ಲಿ 104.75ಕ್ಕೆ ತಲುಪಿದೆ.

ಸೆ.28ರಿಂದ ಅ.27ರವರೆಗೆ ಪೆಟ್ರೋಲ್‌ 22 ಬಾರಿ ಏರಿಕೆಯಾಗಿದ್ದು, ಒಂದೇ ತಿಂಗಳಲ್ಲಿ 6.75 ರುಪಾಯಿ ಏರಿಕೆ ಕಂಡಿದೆ. ಇನ್ನು ಸೆ.24ರಿಂದ ಇಲ್ಲಿಯವರೆಗೆ ಡೀಸೆಲ್‌ 24 ಬಾರಿ ಏರಿಕೆಯಾಗಿದ್ದು, 1 ತಿಂಗಳಲ್ಲಿ 8.05 ರುಪಾಯಿ ಏರಿಕೆಯಾಗಿದೆ.

ದೇಶದ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಬೆಲೆ ಈಗಾಗಲೇ 110 ರುಪಾಯಿ ದಾಟಿದ್ದು, ಡೀಸೆಲ್‌ ಕೂಡ ದೇಶದ ಅರ್ಧದಷ್ಟುರಾಜ್ಯಗಳಲ್ಲಿ ಈಗಾಗಲೇ ನೂರರ ಗಡಿ ದಾಟಿ ಮುನ್ನುಗ್ಗುತ್ತಿದೆ. ಸ್ಥಳೀಯ ತೆರಿಗೆ ಹಿನ್ನೆಲೆ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾದರೂ, ಬಹುತೇಕ ಕಡೆ ಪೆಟ್ರೋಲ್‌ 110 ರುಪಾಯಿ, ಡೀಸೆಲ್‌ 100 ರುಪಾಯಿ ದಾಟಿಯಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿಯೂ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನ್ಯಾಯಬೆಲೆ ಅಂಗಡಿಗಳ ಆರ್ಥಿಕತೆ ಹೆಚ್ಚಿಸುವ ಭಾಗವಾಗಿ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಲು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ಹಣಕಾಸು ಸೇವೆಗಳನ್ನು ನೀಡಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಇತ್ತೀಚೆಗೆ ವಿವಿಧ ಸಚಿವಾಲಯಗಳು ಹಾಗೂ ತೈಲ ಕಂಪನಿಗಳ ಪ್ರತಿನಿಧಿಗಳ ಜತೆಗೆ ನಡೆದ ಸಭೆಯಲ್ಲಿ ಕೇಂದ್ರ ಪಡಿತರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಪ್ರಸ್ತಾಪವನ್ನು ವಿವಿಧ ತೈಲ ಕಂಪನಿಗಳ ಪ್ರತಿನಿಧಿಗಳು ಇದನ್ನು ಸ್ವಾಗತಿಸಿದರು. ಅಗತ್ಯ ಇರುವ ರಾಜ್ಯಗಳ ಜತೆ ಸಮನ್ವಯ ಸಾಧಿಸಿ ಎಲ್‌ಪಿಜಿ ಒದಗಿಸುವಿಕೆಯ ಭರವಸೆ ನೀಡಿದರು.

ದೇಶದಲ್ಲಿ ಒಟ್ಟು 5.32 ಲಕ್ಷ ನ್ಯಾಯಬೆಲೆ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ತೀರಾ ಅಗತ್ಯ ಇರುವ ಗ್ರಾಹಕರಿಗೆ ಹಾಗೂ ಬಡವರಿಗೆ ಎಲ್‌ಪಿಜಿ ಸಿಲಿಂಡರ್‌ ನೀಡಿಕೆ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ಇದಕ್ಕಾಗಿ ಪಡಿತರ ಅಂಗಡಿ ಮಾಲೀಕರಿಗೆ ಹಣಕಾಸು ನೆರವು ಒದಗಿಸುವುದು ಹಾಗೂ ಮುದ್ರಾ ಯೋಜನೆಯಡಿ ಸಾಲ ನೀಡುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿದೆ.

   ಟೀಂ ಇಂಡಿಯಾ ಆಟಗಾರರಿಗೆ ಖಡಕ್ ಅಭ್ಯಾಸ ಮಾಡಿಸಿದ MS ಧೋನಿ | Oneindia Kannada
   English summary
   The prices of LPG cylinders may increase during Deepavali.In the case of LPG, the under recovery from sale at a lower cost has reached Rs 100 per cylinder.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion