19ರಿಂದ ಗ್ಯಾಸ್ ಸಿಲಿಂಡರ್ ವಿತರಣೆ ಸ್ಥಗಿತದ ಬೆದರಿಕೆ

ಈ ಮಧ್ಯೆ, LPG dealers ಕಡೆಯಿಂದ ಗ್ರಾಹಕರಿಗೆ ಬೆದರಿಕೆಯ ಕಹಿ ಸುದ್ದಿ. ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದಲ್ಲಿ ಜ. 19ರಿಂದ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳಿಸುವುದಾಗಿ ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ ನೀಡಿದೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೊಸ ವಿತರಕರ ನೇಮಕ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಈ ಮುಷ್ಕರದ ಬೆದರಿಕೆ ಹಾಕಲಾಗಿದೆ. ಮೊದಲ ಹಂತದಲ್ಲಿ ಜ. 15 ರಿಂದಲೇ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬಿಟ್ಟು ಉಳಿದೆಲ್ಲಾ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಒಟ್ಟು 15 ಕೋಟಿ ಮಂದಿ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗ್ರಾಹಕರಿದ್ದಾರೆ. ಒಂದು ದಿನದ ಮಟ್ಟಿಗೂ ಅನಿಉಲ ವಿತರಣೆ ವ್ಯತ್ಯವಾದರೆ ಇಡೀ ಸರಬರಾಜು ವ್ಯವಸ್ಥೆ ಏರುಪೇರಾಗುತ್ತದೆ.
ಒಂದು ವೇಳೆ ಬೇಡಿಕೆಗೆ ಸರಕಾರ ಒಪ್ಪದಿದ್ದಲ್ಲಿ ಜ. 19ರಿಂದ ಗೃಹ ಬಳಕೆಯ ಎಲ್ ಪಿಜಿಯೂ ಸೇರಿದಂತೆ ಎಲ್ಲ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ವಿತರಕರು (Federation of LPG Distributors of India) ಎಚ್ಚರಿಕೆ ನೀಡಿದ್ದಾರೆ.
ಪ್ರತಿ ರಾಜ್ಯದಲ್ಲಿ 6,600 ವಿತರಕರ ಸಂಖ್ಯೆ ಮೀರಬಾರದು ಎಂಬ ನಿಯಮವಿದೆ. ನಾವು ಸುಮಾರು 3,465 ಹೊಸ ಎಲ್‌ಪಿಜಿ ವಿತರಕರ ನೇಮಕಕ್ಕೆ ಮುಂದಾಗಿವೆ. ಆದರೆ ಅದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಿಯಮ ಉಲ್ಲಂಘಿಸಿದರೆ ಭಾರಿ ಪ್ರಮಾಣದ ದಂಡ ವಿಧಿಸುವ ಮತ್ತು ಡೀಲರ್ ಶಿಪ್ ಅನ್ನೇ ರದ್ದುಗೊಳಿಸುವ ಆತಂಕ ಎದುರಿಸುತ್ತಿದ್ದೇವೆ ಎಂದು ವಿತರಕರ ಒಕ್ಕೂಟ ಅಲವತ್ತುಕೊಂಡಿದೆ. ಹಾಗಾಗಿ ಸುಮಾರು 12,600 ವಿತರಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಜ. 15ರಿಂದ ಪ್ರತಿಭಟನೆಯಲ್ಲಿ ತೊಡಗಲಿದ್ದಾರೆ.












Click it and Unblock the Notifications